ಉಡುಪಿ: ಸೌದಿ ಉದ್ಯಮಿ ಉಡುಪಿಯ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ಆರೋಪಿಗಳಾದ ಭಾಸ್ಕರ್ ಶೆಟ್ಟಿ ಪತ್ನಿ ರಾಜೇಶ್ವರೀ ಶೆಟ್ಟಿ ಮತ್ತು ಪುತ್ರ ನವನೀತ್ ಶೆಟ್ಟಿ ಜೊತೆ ಪೊಲೀಸರು ಐಷಾರಾಮಿ ಹೋಟೆಲಿನಲ್ಲಿ ಉಪಹಾರ ಮುಗಿಸಿ ಹೊರಬರುತ್ತಿರುವ ಸಿ.ಸಿ. ಕ್ಯಾಮೆರಾ ದೃಶ್ಯಗಳು ವೈರಲ್ ಆಗಿದ್ದು ಸಾರ್ವಜನಿಕರಲ್ಲಿ ಪೊಲೀಸರ ಬಗ್ಗೆ ಅನುಮಾನ ಹುಟ್ಟಿಸುವ ಹಾಗಾಗಿದೆ.
ಆರೋಪಿಗಳಿಗೆ ರಾಜಾತಿಥ್ಯ..
ಇತ್ತೀಚೆಗಷ್ಟೇ ಆರೋಪಿಗಳನ್ನು ನ್ಯಾಯಾಲಯಕ್ಕೆ ಕರೆತಂದು ವಾಪಾಸ್ ಕರೆದೊಯ್ಯುವಾಗ ಆರೋಪಿ ನವನೀತ್ ಶೆಟ್ಟಿ ಇನ್ಸ್ ಪೆಕ್ಟರ್ ಕೂರುವ ಜಾಗದಲ್ಲಿ ಕೂತು ಗರ್ವ ಪ್ರದರ್ಶನ ಮಾಡಿದ್ದ. ಅಂತೆಯೇ ಅಲ್ಲಿ ಕೂರಬೇಕಿದ್ದ ಅಧಿಕಾರಿ ಹಿಂಬದಿ ಕುಳಿತು ಸಾರ್ವಜನಿಕರಲ್ಲಿ ಅನುಮಾನ ಹುಟ್ಟಿಸಿದ್ದರು. ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಮೊದಲಿನಿಂದಲೂ ಪೊಲೀಸರು ಇಬ್ಬಗೆ ನೀತಿ ಅನುಸರಿಸುತ್ತಿದ್ದು ಹಣಕ್ಕೆ ಮಣೆ ಹಾಕುತಿದ್ದಾರೆ ಎನ್ನುವ ಟೀಕೆಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ನಿಟ್ಟೆ ಸಮೀಪದ ಐಷಾರಾಮಿ ಹೋಟೇಲಿನಿಂದ ಆರೋಪಿಗಳ ಜೊತೆ ಹೊರಬರುತ್ತಿರುವ ಸಿ.ಸಿ. ಟಿವಿ ದೃಶ್ಯಾವಳಿಗಲು ಸಾರ್ವಜನಿಕರನ್ನು ಇನ್ನಷ್ಟು ಕೆರಳಿಸಿದೆ.
Comments are closed.