ಕರಾವಳಿ

ಮನುಷ್ಯರಂತೆ ಹಲ್ಲು ಇರುವ ವಿಚಿತ್ರ ಮೀನು ಕಂಡಿರಾ….?

Pinterest LinkedIn Tumblr

fish_teeth_women

ಮಂಗಳೂರು: ಮನುಷ್ಯರಂತೆ ಹಲ್ಲಿರುವ ಮೀನು ಮಿಚಿಗನ್ ಸರೋವರದಲ್ಲಿ ಪತ್ತೆಯಾಗಿದೆ. ಈ ವಿಚಿತ್ರ ಮೀನು ಪತ್ತೆಯಾಗಿರುವುದು ಮೀನುಗಾರರಲ್ಲಿ ಆತಂಕ ಹುಟ್ಟಿಸಿದೆ. ವನ್ಯಜೀವಿ ತಜ್ಞರು ಈ ಮೀನಿನ ಬಗ್ಗೆ ಎಚ್ಚರದಿಂದರಲು ಸೂಚಿಸಿದ್ದಾರೆ.

ಪಿರಾನ ಮೀನಿನ ಜಾತಿಗೆ ಸೇರಿದ ಈ ಮೀನಿನ ಹೆಸರು ಪಾಕು ಎಂದಾಗಿದೆ. 3 ಅಡಿಯಷ್ಟು ಬೆಳೆಯುವ ಈ ಮೀನು 25 ಕೆಜಿ ಯಷ್ಟು ತೂಕ ಹೊಂದಿರುತ್ತದೆ. ಅಕ್ವೇರಿಯಮ್’ನಲ್ಲಿ ಇಡಲು ಈ ಜಾತಿಯ ಮೀನುಗಳನ್ನು ಸೃಷ್ಟಿಸಲಾಗುತ್ತದೆ ಎನ್ನಲಾಗಿದೆ. ಆದರೆ ಬಹಳ ಬೇಗವಾಗಿ ಬೆಳೆಯುವುದರಿಂದ ಅವುಗಳನ್ನು ಅಕ್ವೇರಿಯಮ್’ನಲ್ಲಿಡಲು ಸಾಧ್ಯವಾಗದೇ ಇದ್ದಾಗ ನದಿ ಸರೋವರಗಳಲ್ಲಿ ಬಿಟ್ಟಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಆದರೆ ವನ್ಯಜೀವಿ ತಜ್ಞರು ಆ ರೀತಿ ಮಾಡುವುದರಿಂದ ಸಾರವಜನಿಕರನ್ನು ಎಚ್ಚರಿಸಿದ್ದಾರೆ. ಆ ಮೀನಿಗೆ ನೈಸರ್ಗಿಕ ಪರಿಸರಕ್ಕೆ ಹೊಂದಿಕೊಳ್ಳುವುದು ಕಷ್ಟವಾಗುವುದಲ್ಲದೇ, ಅಲ್ಲಿರುವ ಇತರ ಜೀವಿಗಳಿಗೆ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ಹೇಳಿದ್ದಾರೆ

Comments are closed.