ಮಂಗಳೂರು: ನೀರಿನಲ್ಲಿ ಮೀನಿನ ದಾರಿ ಮತ್ತು ಮಹಿಳೆಯ ಮನಸ್ಸನ್ನು ತಿಳಿಯಲು ಸಾಧ್ಯವಿಲ್ಲ ಎನ್ನುವ ಮಾತಿದೆ. ಮಹಿಳೆಯರ ಮನಸ್ಸನ್ನು ಅರ್ಥ ಮಾಡಿಕೊಳ್ಳುವುದು ತುಂಬಾ ಕಷ್ಟ. ಅದು ಗಾಳಿಯಲ್ಲಿ ತೇಲುತ್ತಿರುವ ಗಾಳಿಪಟದಂತೆ! ದಾರ ಮಾತ್ರ ಗಾಳಿಪಟ ಬಿಡುವವನ ಕೈಯಲ್ಲಿ ಇದ್ದರೂ ಅದು ಗಾಳಿಯಲ್ಲಿ ತನಗೆ ಬೇಕಾದಂತೆ ತೇಲುತ್ತಾ ಇರುತ್ತದೆ. ಪುರುಷರಿಗೆ ಮಹಿಳೆಯರ ಮನಸ್ಸನ್ನು ಅರ್ಥ ಮಾಡಿಕೊಳ್ಳಲು ತಪಸ್ಸನ್ನೇ ಮಾಡಬೇಕು. ಏನೇ ಹೇಳಿ, ಹೆಣ್ಣಿನ ಮನಸ್ಸು ಮೀನಿನ ಹೆಜ್ಜೆಗೂ ಮೀರಿದ್ದು!
ಯಾಕೆಂದರೆ ಮಹಿಳೆಗೆ ತನಗೆ ಏನು ಬೇಕೆಂದು ಆಕೆಗೆ ತಿಳಿದಿರುವುದಿಲ್ಲ. ಕೆಲವೊಂದು ಸಲ ಇತರ ಪುರುಷರು ತಮ್ಮ ಸಂಗಾತಿಗೆ ಏನು ಮಾಡುತ್ತಾರೆಂದು ನೀವು ನೋಡುತ್ತಿರಬಹುದು. ಆದರೆ ಇದರ ಬಗ್ಗೆ ನೀವು ಗಂಭೀರವಾಗಿ ಗಮನಹರಿಸಿರಲಿಕ್ಕಿಲ್ಲ.
ಇದು ಅತಿಯಾಯಿತೆಂದು ನಿಮಗೆ ಅನಿಸಬಹುದು. ಆದರೆ ನಿಮ್ಮ ಆದ್ಯತೆಯ ಪಟ್ಟಿಯಲ್ಲಿ ಆಕೆಗೆ ಮೊದಲ ಸ್ಥಾನವಿರಬೇಕು. ದಿನದ 24 ಗಂಟೆಯೂ ಆಕೆಗೆ ಗಮನ ನೀಡುತ್ತಿರಬೇಕೆಂದು ಬಯಸುತ್ತಾಳೆ. ಸಂಬಂಧಕ್ಕೆ ನೀವು ಹೆಚ್ಚಿನ ಪ್ರಾತಿನಿಧ್ಯತೆ ನೀಡುತ್ತಿಲ್ಲವೆಂಬ ಭಾವನೆಯೂ ಆಕೆಯಲ್ಲಿ ಮೂಡಿದರೆ ನೀವು ಆಕೆಯನ್ನು ಕಳೆದುಕೊಳ್ಳಲಿದ್ದೀರಿ.
ಹೆಚ್ಚಿನ ಪುರುಷರು ಅತಿಯಾಗಿ ದ್ವೇಷಿಸುವ ವಿಷಯವೆಂದರೆ ಇದು. ಆಕೆಯ ಮಾತನ್ನು ಯಾವಾಗಲೂ ಕೇಳುತ್ತಿರಬೇಕೆಂದು ಮಹಿಳೆ ಬಯಸುತ್ತಾ ಇರುತ್ತಾಳೆ. ಸಂಬಂಧವು ಉಳಿಯಬೇಕೆಂದರೆ ನಿಮಗೆ ಎಷ್ಟೇ ಆಯಾಸವಾಗಿದ್ದರೂ ಆಕೆಯ ಮಾತನ್ನು ಕೇಳಲೇಬೇಕು.
ಪುರುಷರ ತೋಳಿನಲ್ಲಿ ಮಹಿಳೆಯರು ಯಾವಾಗಲೂ ತುಂಬಾ ಸುರಕ್ಷಿತ ಭಾವನೆಯಲ್ಲಿರುತ್ತಾರೆ. ಹಠಾತ್ ಆಗಿ ನಿಮ್ಮನ್ನು ತಬ್ಬಿಕೊಂಡರೆ ಆಗ ಬೆಚ್ಚಿಬೀಳಬೇಡಿ. ಯಾಕೆಂದರೆ ಈ ರೀತಿಯಲ್ಲಿ ಆಕೆ ಸಂಬಂಧದಲ್ಲಿ ತುಂಬಾ ಸುರಕ್ಷಿತವಾಗಿದ್ದೇನೆಂದು ಭಾವಿಸುತ್ತಾಳೆ.
ನಿಮಗೆ ಇಷ್ಟವಾಗಿರುವಂತಹ ಅಡುಗೆ ಮಾಡಲು ಹೆಚ್ಚಿನ ಶ್ರಮ ಮತ್ತು ನೀವು ಮಾಡುವಂತಹ ಯಾವುದೇ ಕೆಲಸದಲ್ಲಿ ಆಕೆ ಕೈಜೋಡಿಸಲು ಮುಂದೆ ಬರುವುದು ತನ್ನ ಸಂಗಾತಿಯು ಪ್ರಶಂಸೆ ಮಾಡಲೆಂದು. ಇದರಿಂದ ಆಕೆಗೆ ವಿಶೇಷ ಮತ್ತು ಮೌಲ್ಯಯುತವಾಗಿದ್ದೇನೆಂಬ ಭಾವನೆಯಾಗುತ್ತದೆ.
ಇದನ್ನು ಪ್ರತಿಯೊಬ್ಬ ಮಹಿಳೆಯರು ಬಯಸುತ್ತಾ ಇರುತ್ತಾರೆ. ಪುರುಷರಿಗೆ ಹೋಲಿಸಿದರೆ ಮಹಿಳೆಯರು ಹೆಚ್ಚು ರೋಮ್ಯಾಂಟಿಕ್ ಆಗಿರುತ್ತಾರೆ ಮತ್ತು ಎಲ್ಲಾ ಸಮಯದಲ್ಲೂ ಇದನ್ನು ಬಯಸುತ್ತಾರೆ. ಸಂಗಾತಿಗೆ ತುಂಬಾ ವಿಶೇಷ ಮತ್ತು ಪ್ರೀತಿಯನ್ನು ತೋರಿಸುವುದು ಅದು ನಿಮ್ಮಿಂದಲೇ ಬರಬೇಕಾಗಿದೆ. ಅದಕ್ಕಾಗಿ ಈ ರಾಶಿಯ ಹೆಣ್ಣನ್ನು ಮದುವೆಯಾದರೆ ನಿಮ್ಮ ಸಂಸಾರ ಸುಖ ಸಾಗರವಂತೆ
ಕಟಕ ರಾಶಿಯ ಕನ್ಯೆ : ಕಟಕ ರಾಶಿಯ ಮಹಿಳೆಯರು ತಮ್ಮ ಸಂಗಾತಿಗಾಗಿ ಆಳವಾದ ಭಾವನೆಗಳನ್ನು ಹೊಂದಿರುತ್ತಾರೆ. ಅವರು ಯಾರನ್ನು ಪ್ರೀತಿ ಮಾಡುತ್ತಾರೆ ಅವರನ್ನು ಪಡೆಯಲು ಏನು ಬೇಕಾದರು ಮಾಡಲು ತಯಾರಿರುತ್ತಾರೆ. ನೀವು ಒಂದು ವೇಳೆ ಕಟಕ ರಾಶಿಯ ಮಹಿಳೆಯನ್ನು ಮದುವೆಯಾಗೋದಾದರೆ ನೀವು ನಿಮ್ಮ ಜೀವನದಲ್ಲಿ ಸರಿಯಾದ ಹೆಜ್ಜೆ ಇಟ್ಟಿದ್ದೀರಿ ಎಂದು ಅರ್ಥ. ಆಕೆ ಸಣ್ಣ ಸಣ್ಣ ವಿಷಯಕ್ಕೆ ಹೆಚ್ಚು ನಾಟಕ ಮಾಡುತ್ತಾರೆ, ಆದರೆ ಇದರಿಂದ ನಿಮಗೆ ಹಲವಾರು ಉಪಯೋಗಗಳಾಗುತ್ತವೆ. ಇವರಿಗೆ ಅಡುಗೆ ಮಾಡೋದು ಇಷ್ಟ, ಇವರು ಸಮರ್ಪಣೆ ಮತ್ತು ಪ್ರೀತಿ ಮಾಡುವ ತಾಯಿಯಾಗುತ್ತಾರೆ. ಇವರಿಗೆ ತನ್ನ ಪತಿಯಿಂದ ಕೇವಲ ಪ್ರೀತಿ ಮತ್ತು ನಂಬಿಕೆ ಬೇಕಾಗಿರುತ್ತದೆ.
ಮೇಷ ರಾಶಿಯ ಕನ್ಯೆ : ಜ್ಯೋತಿಷ್ಯದ ಅನುಸಾರ ಮೇಷ ರಾಶಿಯ ಮಹಿಳೆಯರ ಒಳಗೆ ತಮ್ಮ ಸಂಗಾತಿಗಾಗಿ ತಗ್ಗಿ ಬಗ್ಗಿ ನಡೆಯುವ ಸಂಸ್ಕಾರ ಇರುತ್ತದೆ. ಇವರು ಹೆಚ್ಚು ಸ್ಟ್ರಾಂಗ್ ಮತ್ತು ಹಠವಾದಿಯಾಗಿರುತ್ತಾರೆ. ಅವರು ತಮ್ಮ ಗುರಿಯನ್ನು ತಲುಪಲು ಏನು ಬೇಕಾದರು ಮಾಡುತ್ತಾರೆ. ಅಲ್ಲದೇ ಅದನ್ನು ಸಾಧಿಸಲು ನಿಮ್ಮ ಸಹಾಯವನ್ನು ಯಾಚಿಸುತ್ತಾರೆ. ಇದರಿಂದ ಒಬ್ಬರಿಂದ ಇನ್ನೊಬ್ಬರಿಗೆ ಹೆಚ್ಚಿನ ಗೌರವ ಸಿಗುತ್ತದೆ. ಇಂತಹ ಮಹಿಳೆಯರು ಸಿಗೋದು ತುಂಬಾ ಕಷ್ಟ. ಇವರು ಶಕ್ತವಾದ ಹಾಗೂ ನಿಷ್ಪಕ್ಷ ತಾಯಿಯಾಗುತ್ತಾರೆ.
ಸಿಂಹ ರಾಶಿಯ ಕನ್ಯೆ : ಸಿಂಹ ರಾಶಿಯ ಕನ್ಯೆಯರು ತುಂಬಾ ಸ್ಟ್ರಾಂಗ್ ಮತ್ತು ಕಠೋರವಾಗಿರುತ್ತಾರೆ. ಇನ್ನೊಂದು ಶಬ್ಧದಲ್ಲಿ ಹೇಳೋದಾದರೆ ಅವರು ಯೋಧರಂತೆ ಇರುತ್ತಾರೆ. ಇವರಿಗೆ ಇವರಂತಹುದೇ ಆದ ದೃಢ ಸ್ವಭಾವದ ಪುರುಷ ಬೇಕಾಗಿರುತ್ತಾರೆ. ಇವರ ಪ್ರೀತಿ ತುಂಬಾ ಆಳವಾಗಿರುತ್ತದೆ. ನಿಮಗೆ ಈ ರೀತಿಯಾಗಿ ಪ್ರೀತಿ ಮಾಡುವವರು ನಿಮ್ಮ ಲೈಫ್ನಲ್ಲಿ ಸಿಗೋದು ಕಡಿಮೆಯೆ. ಇವರ ಪ್ರೀತಿ ನಿಸ್ವಾರ್ಥ ಹಾಗೂ ಶುದ್ಧವಾಗಿರುತ್ತದೆ.
Comments are closed.