ಕರಾವಳಿ

ರೀಯೋ ಸೆಮಿಫೈನಲ್‌ನಲ್ಲಿ ಸಾನಿಯಾ-ಬೊಪಣ್ಣ ಜೋಡಿ ಗೆಲುವು ಸಾಧಿಸಿದರೆ ರಜತ ಪದಕ ಗೆಲ್ಲುವ ಅವಕಾಶ

Pinterest LinkedIn Tumblr

saniya_boppana_riyo

ರಿಯೋಡಿಜನೈರೋ, ಆ.13;ರಿಯೋ ಒಲಿಂಪಿಕ್ಸ್ ಟೆನಿಸ್‍ನಲ್ಲಿ ಭಾರತದ ಪದಕ ಗೆಲ್ಲುವ ಏಕೈಕ ಸ್ಪರ್ಧೆಯಾಗುಳಿದಿರುವ ಮಿಶ್ರ ಡಬ್ಬಲ್‍ನಲ್ಲಿ ಸಾನಿಯಾ ಮಿರ್ಜಾ ಮತ್ತು ರೋಹನ್ ಬೋಪಣ್ಣ ಜೋಡಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.

ಇದರೊಂದಿಗೆ ಭಾರತಕ್ಕೆ ಪದಕವೊಂದು ಲಭಿಸುವುದು ದೃಢಪಟ್ಟಿದೆ. ಶುಕ್ರವಾರ ರಾತ್ರಿ ಇಲ್ಲಿ ನಡೆದ ಏಳನೇ ದಿನದ ಕ್ರೀಡಾಕೂಟದಲ್ಲಿ ಈ ಜೋಡಿ, ಬ್ರಿಟನ್‍ನ ಆಯಂಡಿ ಮರ್ರೆ ಮತ್ತು ಹೀಥರ್ ವ್ಯಾಟ್ಸನ್ ಅವರನ್ನು 6-4, 6-4ಗಳಿಂದ ಮಣಿಸಿ ಸೆಮಿಫೈನಲ್ ತಲುಪಿದ್ದು, ಭಾರತದ ಪದಕದ ಆಸೆಯನ್ನು ಜೀವಂತವಾಗಿರಿಸಿದ್ದಾರೆ. ಸಾನಿಯಾ-ಬೊಪಣ್ಣ ಜೋಡಿ ಇನ್ನೊಂದು ಗೆಲುವು ಸಾಧಿಸಿದರೆ ರಜತ ಪದಕ ಗೆಲ್ಲುವ ಅವಕಾಶವಿದ್ದು, ಸೆಮಿಫೈನಲ್‍ನಲ್ಲಿ ಸೋತರೂ ಕಂಚುಪದಕ ಕಟ್ಟಿಟ್ಟ ಬುತ್ತಿಯಾಗಿದೆ.

ಒಲಿಂಪಿಕ್ ಟೆನಿಸ್ ಸೆಂಟರ್‍ನಲ್ಲಿ ನಡೆದ ಪಂದ್ಯದಲ್ಲಿ ಈ ಜೋಡಿ ಬ್ರಿಟನ್‍ನ ಮರ್ರೆ ಮತ್ತು ಹೀಥರ್ ಅವರನ್ನು 67 ನಿಮಿಷಗಳ ಹೋರಾಟದಲ್ಲಿ ಪರಾಭವಗೊಳಿಸಿತು.

ಆರನೇ ದಿನದ ಪಂದ್ಯದಲ್ಲಿ ಭಾರತದ ಈ ಜೋಡಿ ಆಸ್ಟ್ರೇಲಿಯಾದ ಸಮಂತಾ ಸ್ಪೋಸರ್ ಮತ್ತು ಜೋನಾಥನ್ ಪೀಯರ್ಸ್ ಜೋಡಿಯನ್ನು 7-5, 6-4ರಿಂದ ಸೋಲಿಸಿ ಸೆಮಿಫೈನಲ್ ತಲುಪಿತ್ತು. ಸಾನಿಯಾ-ಬೋಪಣ್ಣ ಇಂದು ರಾತ್ರಿ ರಿಯೋದಲ್ಲಿ ಅಮೆರಿಕದ ವೀನಸ್ ವಿಲಿಯಮ್ಸ್ ಮತ್ತು ರಾಜೀವ್ ರಾಮ್ ಜೊಡಿಯನ್ನು ಸೆಮಿಫೈನಲ್ಸ್‍ನಲ್ಲಿ ಎದುರಿಸಲಿದ್ದಾರೆ.

Comments are closed.