ಕರಾವಳಿ

ಬೈಂದೂರು: ಅಕ್ರಮ ಜಾನುವಾರು ಸಾಗಾಟ; ಮೂರು ಜಾನುವಾರು ರಕ್ಷಣೆ, ವಾಹನ ವಶ

Pinterest LinkedIn Tumblr

ಕುಂದಾಪುರ: ಯಾವುದೇ ಪರವಾನಿಗೆಯಿಲ್ಲದೇ ಅಕ್ರಮವಾಗಿ ಗೋವುಗಳನ್ನು ಸಾಗಿಸುವ ವೇಳೆ ಕಾರ್ಯಾಚರಣೆ ನಡೆಸಿದ ಪೊಲೀಸರು ಗೋವುಗಳು ಹಾಗೂ ಸಾಗಾಟಕ್ಕೆ ಬಳಸಿದ ವಾಹನ ವಶಪಡಿಸಿಕೊಂಡ ಘಟನೆ ಶನಿವಾರ ಸಂಜೆ ಕುಂದಾಪುರ ತಾಲ್ಲೂಕಿನ ಬೈಂದೂರಿನಲ್ಲಿ ನಡೆದಿದೆ.

Cows (file / credit: clipart.com)
                   (File Photo)

ಘಟನೆ ವಿವರ : ಬೈಂದೂರಿನ ಹೊರವಲಯದ ಗ್ರಾಮೀಣ ಪ್ರದೇಶದಿಂದ ಬಾಡಿಗೆ ಗೂಡ್ಸ್ ವಾಹನದಲ್ಲಿ ಗೋವುಗಳನ್ನು ಸಾಗಿಸಲಾಗುತ್ತಿತ್ತು. ಈ ವಾಹನದಲ್ಲಿ ಮೂರು ಗೋವುಗಳಿದವು ಎನ್ನಲಾಗಿದೆ. ಈ ಬಗ್ಗೆ ಪೊಲೀಸರಿಗೆ ಸಿಕ್ಕ ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿದ ಬೈಂದೂರು ಪೊಲೀಸರು ಗ ಮಾರ್ಗ ಮಧ್ಯೆ ಸದ್ರಿ ವಾಹನವನ್ನು ಅಡ್ಡಗಟ್ಟಿ ವಾಹನ ಸಮೇತ ಅಕ್ರಮವಾಗಿ ಸಾಟ ಮಾಡುತ್ತಿದ್ದ ಗೋವುಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಸಂದರ್ಭ ಆರೋಪಿಗಳು ವಾಹನ ಮತ್ತು ಗೋವುಗಳನ್ನು ಬಿಟ್ಟು ಪರಾರಿಯಾಗಿದ್ದಾರೆ ಎನ್ನಲಾಗಿದ್ದು ಓರ್ವ ಆರೋಪಿ ಪೊಲೀಸರಿಗೆ ಸಿಕ್ಕಿ ಬಿದ್ದಿರುವ ಬಗ್ಗೆ ಮಾಹಿತಿಯಿದೆ.

ಬೈಂದೂರು ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Comments are closed.