ಕರಾವಳಿ

ಭಾರತದಲ್ಲಿ ಸುಮಾರು 3 ಸಾವಿರ ಇಸ್ಫೋಸಿಸ್ ಉದ್ಯೋಗಿಗಳ ಕೆಲಸ ಖೋತಾ ಸಾದ್ಯತೆ

Pinterest LinkedIn Tumblr

infosi

ಬೆಂಗಳೂರು: ರಾಯಲ್ ಬ್ಯಾಂಕ್ ಆಫ್ ಸ್ಕಾಟ್ಲೆಂಡ್ (ಆರ್ಬಿಎಸ್) ದೇಶದ ಪ್ರಮುಖ ಮಾಹಿತಿ ತಂತ್ರಜ್ಞಾನ ಕಂಪನಿ ಇಸ್ಫೋಸಿಸ್ ಜತೆ ಮಾಡಿಕೊಂಡಿರುವ ಒಪ್ಪಂದ ರದ್ದು ಮಾಡಿದೆ. ಹೀಗಾಗಿ ಐಟಿ ಸಂಸ್ಥೆಗೆ ಒಟ್ಟು ಆದಾಯದಲ್ಲಿ 267.50 ಕೋಟಿ ರೂ. (40 ಮಿಲಿಯನ್ ಡಾಲರ್) ಖೋತಾ ಆಗುವ ಸಾಧ್ಯತೆಗಳಿವೆ. ಇದರಿಂದಾಗಿ ಸುಮಾರು 3 ಸಾವಿರ ಮಂದಿಗೆ ಉದ್ಯೋಗ ಖೋತಾ ಆಗುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ.

ವಿಲಿಯಮ್ಸ್ ಆಯಂಡ್ ಗ್ಲೆನ್ (ಡಬ್ಲ್ಯೂ ಅಂಡ್ ಜಿ) ಹೆಸರಿನಲ್ಲಿ ಪ್ರತ್ಯೇಕ ಬ್ಯಾಂಕ್ ಆರಂಭಿಸುವ ನಿರ್ಧಾರವನ್ನು ಆರ್ಬಿಎಸ್ ಕೈಬಿಟ್ಟಹಿನ್ನೆಲೆಯಲ್ಲಿ ಒಪ್ಪಂದ ರದ್ದು ಮಾಡುವ ಬಗ್ಗೆ ನಿರ್ಧರಿಸಿದೆ ಎಂದು ಪತ್ರಿಕೆ ವರದಿ ಮಾಡಿದೆ. ಈ ಬ್ಯಾಂಕ್ಗೆ ಐಟಿ ಸೇವೆಗಳನ್ನು ಕಲ್ಪಿಸಲು ಐಬಿಎಂ ಮತ್ತು ಇಸ್ಫೋಸಿಸ್ಗೆ ಜಂಟಿಯಾಗಿ 2,675 ರೂ. ಕೋಟಿ (300 ಮಿಲಿಯನ್ ಯೂರೋ) ಮೊತ್ತದ ಗುತ್ತಿಗೆಯನ್ನು ಆರ್ಬಿಎಸ್ ನೀಡಿತ್ತು. ಈ ಪೈಕಿ ಅತ್ಯಂತ ಹೆಚ್ಚಿನ ಮೊತ್ತ 1,337 ರೂ. ಕೋಟಿ (200 ಮಿಲಿಯನ್ ಡಾಲರ್) ಇಸ್ಫೋಸಿಸ್ಗೆ ನೀಡಬೇಕಾಗಿತ್ತು.

ಆದರೆ ಒಪ್ಪಂದ ರದ್ದಾಗಿದ್ದರಿಂದ ಎಷ್ಟುಪ್ರಮಾಣದಲ್ಲಿ ನಷ್ಟಉಂಟಾಗಿದೆ ಎಂಬ ಬಗ್ಗೆ ಮಾಹಿತಿ ತಂತ್ರಜ್ಞಾನ ದಿಗ್ಗಜ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ 267 ರಿಂದ 334 ಕೋಟಿ ರೂ (40 ರಿಂದ 50 ಮಿಲಿಯನ್ ಡಾಲರ್)ಯಷ್ಟು ನಷ್ಟ ಉಂಟಾಗಬಹುದೆಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ವಿಶ್ಲೇಷಕರು ತಿಳಿಸಿದ್ದಾರೆ.

ಇಸ್ಫೋಸಿಸ್ ಹೇಳಿರುವುದು ಇಷ್ಟು:
ಒಪ್ಪಂದ ರದ್ದು ಹಿನ್ನೆಲೆಯಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ಇಸ್ಫೋಸಿಸ್ ”ಸಂಸ್ಥೆ ಡಬ್ಲ್ಯೂ ಆಯಂಡ್ ಜಿ ಜತೆ ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿಂತೆ ಟೆಸ್ಟಿಂಗ್ ಮತ್ತು ಡೆಲಿವರಿ ಅಪ್ಲಿಕೇಶನ್ ವಿಭಾಗಗಳಲ್ಲಿ ಪಾಲುದಾರಿಕೆಯನ್ನು ಹೊಂದಿತ್ತು. ಅದಕ್ಕೆ ಸಂಬಂಧಿಸಿದಂತೆ ಭಾರತದಲ್ಲಿ ನೇಮಿಸಿಕೊಂಡ ಸುಮಾರು 3 ಸಾವಿರ ಮಂದಿಯನ್ನು ಮುಂದಿನ ದಿನಗಳಲ್ಲಿ ಕೆಲಸದಿಂದ ತೆಗೆದು ಹಾಕಲಾಗುತ್ತದೆ,” ಎಂದು ಹೇಳಿಕೆ ನೀಡಿದೆ.

ಈ ಬೆಳವಣಿಗೆಯಿಂದಾಗಿ ಕಂಪನಿ ತನ್ನ ಆದಾಯದ ಗುರಿಯನ್ನು ತಗ್ಗಿಸಬೇಕಾದ ಅನಿವಾರ್ಯತೆಗೆ ಸಿಲುಕಬಹುದು. ಏಪ್ರಿಲ್ನಲ್ಲಿ ಹಾಲಿ ವರ್ಷಕ್ಕೆ ಸಂಬಂಧಿಸಿದಂತೆ ಬೆಳವಣಿಗೆ ಗುರಿಯನ್ನು ಶೇ.13.5ರಿಂದ ಶೇ.11.5ಕ್ಕೆ ಇಳಿಕೆ ಮಾಡಿತ್ತು. ಆದರೆ ಮೂಲಗಳು ಹೇಳಿರುವ ಪ್ರಕಾರ ಆರ್ಬಿಎಸ್ನಿಂದ ಘೋಷಣೆ ಬರುವ ಮುನ್ನವೇ ಐಟಿ ಕಂಪನಿ ಮೂರು ವರ್ಷಗಳಿಗೆ ಸಂಬಂಧಿಸಿದ ದಿಕ್ಸೂಚಿಯನ್ನು ಸಿದ್ಧಪಡಿಸಿತ್ತು. ಆ ಮೂಲಕವಾಗಿ ವಾರ್ಷಿಕವಾಗಿ ಶೇ.15ರ ದರದಲ್ಲಿ ಬೆಳವಣಿಗೆ ಸಾಧಿಸುವ ಗುರಿ ಹಾಕಿಕೊಂಡಿತ್ತು ಎಂದು ತಿಳಿಸಿದೆ.

ಬ್ರೆಕ್ಸಿಟ್ ಬಳಿಕದ ಬೆಳವಣಿಗೆ ಮತ್ತು ಬಡ್ಡಿ ದರ ಕಡಿಮೆಯಾಗಿದ್ದರಿಂದಾಗಿ ಆರ್ಬಿಎಸ್ನಂಥ ಹಣಕಾಸು ಸೇವೆಗಳನ್ನು ನೀಡುವ ಕಂಪನಿಗಳಿಗೆ ಪ್ರತಿಕೂಲವಾಗಿ ಪರಿಣಮಿಸಿದೆ. ಇಂಥ ಕಂಪನಿಗಳ ಜತೆಗೆ ಮಾಹಿತಿ ತಂತ್ರಜ್ಞಾನ ನೀಡುವ ಕಂಪನಿಗಳಿಗೂ ಭಾರಿ ಪ್ರಮಾಣದಲ್ಲಿ ಪೆಟ್ಟು ಬಿದ್ದಿದೆ. ಐಟಿ ಕಂಪನಿ ಕಾಗ್ನಿಜೆಂಟ್ ಹಾಲಿ ವರ್ಷದಲ್ಲಿ 2 ಬಾರಿ ತನ್ನ ಬೆಳವಣಿಗೆ ಗುರಿ (ಗೈಡೆನ್ಸ್) ಬದಲು ಮಾಡಿಕೊಂಡಿತ್ತು. ಬ್ರೆಕ್ಸಿಟ್ನಿಂದಾಗಿಯೇ ಕಾಗ್ನಿಜೆಂಟ್ .267.50 ಕೋಟಿ ಮೌಲ್ಯದಷ್ಟುಬೆಳವಣಿಗೆಯ ಮೊತ್ತ ತಗ್ಗಿಸಿದೆ ಎಂದು ಅದರ ತಾಂತ್ರಿಕ ವಿಭಾಗದ ಅಧ್ಯಕ್ಷ ದೇಬಾಶಿಶ್ ಚಟರ್ಜಿ ತಿಳಿಸಿದ್ದಾರೆ.

(ಕೃಪೆ: ಕನ್ನಡಪ್ರಭ)

Comments are closed.