ಮಂಗಳೂರು,ಅ.18 : ತೆರಿಗೆ ಪಾವತಿಸಿದೆ ಪರ್ಮಿಟ್ ಉಲ್ಲಂಘನೆ ಸೇರಿದಂತೆ ನಿಯಮ ಮೀರಿ ಸಂಚರಿಸುತ್ತಿದ್ದ 7 ಖಾಸಗಿ ಬಸ್‍ಗಳನ್ನು ಮಂಗಳೂರು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಬುಧವಾರ ವಶಪಡಿಸಿಕೊಂಡಿದ್ದಾರೆ.
ಬಹಳಷ್ಠು ಖಾಸಗಿ ಬಸ್ ತೆರಿಗೆ ಕಟ್ಟದೆ ಸಂಚರಿಸುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಸಾರಿಗೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ.ಮಂಗಳೂರಿನಲ್ಲಿ ವಶಪಡಿಸಿಕೊಳ್ಳಲಾದ 6 ಬಸ್‌ಗಳ ಪೈಕಿ 3 ಸಿಟಿ ಬಸ್,1 ಕಾಂಟ್ರ್ಯಾಕ್ಟ್ ಕ್ಯಾರೇಜ್ ಹಾಗೂ ಇನ್ನೋಂದು ಖಾಸಗಿ ಸೇವಾ ವಾಹನವಾಗಿದೆ.
ವಶಪಡಿಸಿಕೊಳ್ಳಲಾದ ಬಸ್‍ಗಳಿಂದ ಸುಮಾರು 10ಲಕ್ಷ ರೂ ಗಳಷ್ಠು ತೆರಿಗೆ ಬಾಕಿ ಉಳಿಸಿಕೊಳ್ಳಲಾಗಿತ್ತು. ಕಾರ್ಯಾಚರಣೆ ನಡೆಸಿ ಬಸ್ ವಶಪಡಿಸಿರುವುದನ್ನು ಅರಿತು ಈಗಾಗಲೇ ಕೆಲವು ಬಸ್‍ಗಳ ಮಾಲಕರು ಬಾಕಿ ಉಳಿಸಿದ ತೆರೆಗೆ ಪಾವತಿಸಿದ್ದಾರೆ ಎಂದು ಆರ್‌ಟಿಓ ಅಧಿಕಾರಿಗಳಿ ತಿಳಿಸಿದ್ದಾರೆ.
ದ.ಕ ಜಿಲ್ಲೆಯಾದ್ಯಂತ ಕಾರ್ಯಚರಣೆ ನಡೆಸಲಾಗಿದೆ. ತೆರಿಗೆ ಬಾಕಿ ಉಳಿಸಿ ಸಂಚಾರ ನಡೆಸುತ್ತಿದ್ದ ಬಸ್‍ಗಳನ್ನು ವಶಪಡಿಸಿಕೊಳ್ಳಲಾಗುತ್ತದೆ ಮಂಗಳೂರು, ಕೊಣಾಜೆ, ಬಜಪೆ, ಮೂಡಬಿದಿರೆಯಲ್ಲಿ ಕಾರ್ಯಚರಣೆ ಮುಂದುವರಿಯಲಿದೆ. ಇದರ ಜತೆಗೆ ದುಬಾರಿ ಕಾರುಗಳು ತೆರಿಗೆ ಕಟ್ಟದೆ ಸಂಚಾರ ನಡೆಸುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಅವುಗಳ ವಿರುದ್ಧವೂ ಕಾರ್ಯಚರಣೆ ನಡೆಯಲಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ (ಪ್ರಭಾರ) ಜಿ..ಎಸ್.ಹೆಗಡೆ ಅವರು ತಿಳಿಸಿದ್ದಾರೆ.
Comments are closed.