ಕರಾವಳಿ

ಕಾವೇರಿ ಜಲ ವಿವಾದದ ಹಿನ್ನೆಲೆ : ಸೆ. 18ರಂದು ಕುದ್ರೋಳಿ ಶ್ರೀ ಕ್ಷೇತ್ರದಲ್ಲಿ ಉರುಳು ಸೇವೆ – ಮುಖ್ಯಮಂತ್ರಿಗಳಿಗೂ ಅಹ್ವಾನ

Pinterest LinkedIn Tumblr

poojary

ಮಂಗಳೂರು : ಕಾವೇರಿ ಜಲ ವಿವಾದದ ಹಿನ್ನೆಲೆಯಲ್ಲಿ ಕರ್ನಾಟಕ, ತಮಿಳುನಾಡು ಮತ್ತು ಕೇರಳ ಜನತೆಯ ಒಳಿತಿಗಾಗಿ ನಗರದ ಗೋಕರ್ಣನಾಥ ಕ್ಷೇತ್ರದಲ್ಲಿ ಉರುಳು ಸೇವೆ ಹಮ್ಮಿಕೊಳ್ಳಲಾಗಿದ್ದು, ಉರುಳು ಸೇವೆಯಲ್ಲಿ ಭಾಗವಹಿಸುವಂತೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯದ ಜನತೆಗೆ ಕರೆ ನೀಡಿದ್ದೇನೆ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ, ಮಾಜಿ ಕೇಂದ್ರ ಸಚಿವ, ಬಿ.ಜನಾರ್ದನ ಪೂಜಾರಿ ತಿಳಿಸಿದ್ದಾರೆ.

ಶುಕ್ರವಾರ ತಮ್ಮನ್ನು ಭೇಟಿಯಾದ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಾವೇರಿ ನದಿ ನೀರು ಹಂಚಿಕೆಯಲ್ಲಿ ರಾಜ್ಯಕ್ಕೆ ಅನ್ಯಾಯವಾಗಿರುವುದರಿಂದ ಮೂರು ರಾಜ್ಯಕ್ಕೂ ಒಳಿತಾಗಲಿ ಎಂದು ಪ್ರಾರ್ಥಿಸಿ ಸೆ. 18ರಂದು ಬೆಳಗ್ಗೆ 10.30ಕ್ಕೆ ನಾರಾಯಣಗುರುಗಳಿಂದ ಸ್ಥಾಪಿತವಾದ ಕರ್ನಾಟಕದ ಏಕೈಕ ದೇವಸ್ಥಾನ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಉರುಳು ಸೇವೆ ಹಮ್ಮಿಕೊಂಡಿದ್ದೇನೆ.

ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಉಭಯ ರಾಜ್ಯಗಳ ನಡುವೆ ನಡೆಯುವ ಸಂಘರ್ಷ ಕೊನೆಯಾಗಬೇಕು. ಕರ್ನಾಟಕದ ಜನತೆ ಪರವಾಗಿ ಉರುಳು ಸೇವೆ ಮಾಡುವಾಗ ಮುಖ್ಯಮಂತ್ರಿಗಳು ಈ ಉರುಳು ಸೇವೆಯಲ್ಲಿ ಪಾಲ್ಗೊಳ್ಳುವ ಮೂಲಕ ಮಾದರಿಯಾಗಬೇಕು ಎಂದು ಪೂಜಾರಿ ಹೇಳಿದರು.

Comments are closed.