ಕರಾವಳಿ

ಒಂದು ಕೆ.ಜಿ ಮರಳಿಗೆ ನೂರು ರೂಪಾಯಿ : ಕಾಂಗ್ರೆಸ್ ವಿರುದ್ಧ ಬಿಜೆಪಿಯ ಅಣುಕು ಪ್ರದರ್ಶನ

Pinterest LinkedIn Tumblr

bjp_sand_protest_1

ಜಿಲ್ಲೆಯಲ್ಲಿ ಮರಳು ಅಭಾವ ತಲೆದೋರಲು ಕಾಂಗ್ರೆಸ್‌ನ ಮರಳು ಮಾಫಿಯಾವೇ ಕಾರಣ : ಬಿಜೆಪಿ ಆರೋಪ

ಮಂಗಳೂರು : ಅಕ್ರಮ ಮರಳುಗಾರಿಕೆಯಿಂದಾಗಿ ಜಿಲ್ಲೆಯಲ್ಲಿ ಮರಳು ಅಭಾವ ತಲೆದೋರಿದೆ. ಇದಕ್ಕೆ ಕಾಂಗ್ರೆಸ್ ನ ಮರಳು ಮಾಫಿಯಾವೇ ಕಾರಣ ಎಂದು ಆರೋಪಿಸಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಮಂಗಳವಾರ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟ‌ನೆ ಹಮ್ಮಿಕೊಳ್ಳಲಾಯಿತು.

ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾಜಿ ಶಾಸಕ ಎನ್ ಯೋಗೀಶ್ ಭಟ್ ಮಾತನಾಡಿ, ಕಾಂಗ್ರೆಸ್ ನ ಮರಳು ಮಾಫಿಯಾ ಹಾಗೂ ಜಿಲ್ಲಾಡಳಿತದ ಇಬ್ಬಗೆ ನೀತಿಯಿಂದಾಗಿ ಮಂಗಳೂರಿನಲ್ಲಿ ಮರಳು ಸಮಸ್ಯೆ ಉಂಟಾಗಿದೆ.ಇಂದಿನ ದಿನಗಳಲ್ಲಿ ಮರಳಿಗೆ ಚಿನ್ನದ ಬೆಲೆ ಬರಲು ಜಿಲ್ಲಾಡಳಿತವೇ ನೇರ ಕಾರಣವಾಗಿದೆ ಎಂದು ಆರೋಪಿಸಿದರು.

ಜಿಲ್ಲಾ ಉಸ್ತುವಾರಿ ಬಂಟ್ವಾಳ ತಾಲೂಕಿಗೆ ಮಾತ್ರ ಸೀಮಿತರಾಗಿದ್ದಾರೆ. ಇದರಿಂದಾಗಿ ಇಲ್ಲಿ ಮರಳಿನ ಸಮಸ್ಯೆ ಬಂದೋದಗಿದೆ. ಉಸ್ತುವಾರಿ ಸಚಿವರ ಚೇಲಾಗಳು ಮರಳು ಧಂದೆಯಲ್ಲಿದ್ದಾರೆ. ಇದಕ್ಕೆ ಪೊಲೀಸ್ ಅಧಿಕಾರಿಗಳ ಕುಮ್ಮಕ್ಕ ಕೂಡ ಇದೆ ಎಂದು ದೂರಿದರು.

bjp_sand_protest_2 bjp_sand_protest_3 bjp_sand_protest_4 bjp_sand_protest_5

ಬಂಟ್ವಾಳದಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾದ 800 ಲೋಡ್ ಮರಳನ್ನು ಪೊಲೀಸರು ಪತ್ತೆ ಹಚ್ಚಿದ್ದರು. ಆದರೆ ಈ ತನಕ ತನಿಖೆ ಸುಳಿವು ಇಲ್ಲ. ಆರೋಪಿಗಳ ಪತ್ತೆಯೂ ಆಗಿಲ್ಲ.ಶಿಕ್ಷೆಯೂ ಇಲ್ಲ. ಅದರೆ ಬೆಂಗಳೂರು, ಕೇರಳ ಹಾಗೂ ಇತರ ರಾಜ್ಯಗಳಿಗೆ ಅಕ್ರಮವಾಗಿ ಮರಳು ಸಾಗಾಟ ಮಾತ್ರ ನಿರಂತರವಾಗಿ ನಡೆಯುತ್ತಿದೆ. ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ಹಾಗೂ ಅಧಿಕಾರಿಗಳ ಕೈವಾಡವಿದೆ ಎಂದು ರೋಪಿಸಿದರು.

ಇದೇ ಸಂದರ್ಭ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ಮರಳು ಮಾರಾಟದ ಅಣುಕು ಕಾರ್ಯಾಚರಣೆ ನಡೆಸಿದ ಬಿಜೆಪಿ ಕಾರ್ಯಕರ್ತರು ಒಂದು ಕೆ.ಜಿ ಮರಳಿಗೆ ನೂರು ರೂಪಾಯಿ. ಮರಳು ಬೇಕಾದರೆ ಕಾಂಗ್ರೆಸ್ ಕಚೇರಿಯನ್ನು ಸಂಪರ್ಕಿಸಿ ಎಂದು ಅಣಕವಾಡಿದರು.

bjp_sand_protest_6 bjp_sand_protest_7

ಬಿಜೆಪಿ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ವೇದವ್ಯಾಸ್ ಕಾಮತ್, ಮನಪಾ ವಿರೋಧ ಪಕ್ಷದ ನಾಯಕಿ ರೂಪಾ ಡಿ. ಬಂಗೇರ, ವಿಧಾನ ಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ಪಕ್ಷದ ಪ್ರಮುಖರಾದ ರವಿಶಂಕ ಮಿಜಾರ್, ಸುಧೀರ್ ಶೆಟ್ಟಿ ಕಣ್ಣೂರು,ನಿತಿನ್ ಕುಮಾರ್, ರಾಮಚಂದ್ರ ಬೈಕಂಪಾಡಿ, ಜಿತೇಂದ್ರ ಕೊಟ್ಟಾರಿ, ಹರೀಶ್ ಪೂಂಜಾ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Comments are closed.