ಕರಾವಳಿ

ಶಿರೂರು: ಬೈಕ್ ಮತು ಟ್ಯಾಂಕರ್ ಡಿಕ್ಕಿ: ಬೈಕ್ ಸವಾರ ದಾರುಣ ಸಾವು

Pinterest LinkedIn Tumblr

ಕುಂದಾಪುರ: ಬೈಕ್ ಹಾಗೂ ಟ್ಯಾಂಕರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ದಾರುಣವಾಗಿ ಸಾವನ್ನಪ್ಪಿದ ಘಟನೆ ಮಂಗಳವಾರ ಸಂಜೆ ಬೈಂದೂರು ಸಮೀಪದ ಶಿರೂರು ಮಾರ್ಕೇಟ್ ಸಮೀಪ ನಡೆದಿದೆ.

shirur_accident_news-2 shirur_accident_news-1 shirur_accident_news-3

ಭಟ್ಕಳ ನಿವಾಸಿ ನಾಗೇಶ್ ನಾಯ್ಕ್(28) ಅಪಘಾತದಲ್ಲಿ  ಮೃತಪಟ್ಟ ದುರ್ದೈವಿ. ಅಪಘಾತದ ತೀವ್ರತೆಗೆ ಬೈಕ್ ಸವಾರನ ತಲೆ ಭಾಗ ಛಿದ್ರಗೊಂಡಿತ್ತು. ಬೈಂದೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Comments are closed.