ಕರಾವಳಿ

ಮೊಬೈಲಿನಲ್ಲಿ ಮಾತನಾಡುತ್ತಾ ಕಲ್ಯಾಣಪುರ ಸೇತುವೆಯಿಂದ ನದಿಗೆ ಹಾರಿದ ಯುವತಿಗಾಗಿ ಶೋಧ

Pinterest LinkedIn Tumblr

ಉಡುಪಿ: ಕೆಲಸದಿಂದ ಮರಳುತ್ತಿರುವ ವೇಳೆಯೇ ಯುವತಿಯೋರ್ವಳು ಸೇತುವೆ ಮೇಲಿನಿಂದ ನದಿಗೆ ಧುಮುಕಿದ ಘಟನೆ ಉಡುಪಿಯ ಉಪ್ಪೂರು ಬಳಿ ಕಲ್ಯಾಣಪುರ ಸೇತುವೆಯಲ್ಲಿ ಬುಧವಾರ ನಡೆದಿದೆ. ಆಕೆಗಾಗಿ ಇನ್ನು ಶೋಧ ಕಾರ್ಯ ನಡೆಯುತ್ತಿದೆ.

ಕೆ.ಜಿ ರೋಡ್ ಸೇತುವೆಯಿಂದ ಸ್ವರ್ಣಾ ನದಿಗೆ ಹಾರಿದ ಯುವತಿ ಚೈತ್ರಾ (18).

udp_chaitra_suside

ಮೂಲತಃ ಪುತ್ತೂರ್ ಅವರಾದ ಚಂದ್ರಶೇಖರ್ ಹಾಗೂ ಜ್ಯೋತಿ ದಂಪತಿಗಳ ಪುತ್ರಿ ಚೈತ್ರ ಎನ್ನುವ ಬಗ್ಗೆ ಮಾಹಿತಿಯಿದ್ದು ಈಕೆ ಅಂಬಲಪಾಡಿಯ ಮೊಬೈಲ್ ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದಾಳೆ ಎನ್ನಲಾಗಿದೆ. ಪಿಯುಸಿ ವಿಧ್ಯಾಭ್ಯಾಸದ ಬಳಿಕ ಕೆಲಸಕ್ಕೆ ಸೇರಿದ್ದ ಆಕೆ ಬುಧವಾರ ಸಂಜೆ ಕೆಲಸ ಮುಗಿಸಿ ಮನೆಗೆ ತೆರಳಲು ಸಂತೆಕಟ್ಟೆಯಲ್ಲಿ ಬಸ್ಸು ಇಳಿದು ನಡೆದು ಬರುತ್ತಿದ್ದಳು. ಮೊಬೈಲ್ ಸಂಭಾಷಣೆಯ ಜೊತೆಗೆ ನಡೆದು ಬರುತ್ತಿದ್ದ ಆಕೆ ಏಕಾಏಕಿ ಮೊಬೈಲ್ ಸಮೇತ ಸ್ವರ್ಣಾ ನದಿಗೆ ಹಾರಿದ್ದಾಳೆ ಎನ್ನಲಾಗಿದೆ. ಹಾರುವ ವೇಳೆ ತನ್ನ ಬ್ಯಾಗ್ ಹಾಗೂ ಚಪ್ಪಲಿ ಸೇತುವೆ ಬಳಿ ಇಟ್ಟಿದ್ದು ಅದರಲ್ಲಿದ್ದ ದಾಖಲೆಗಳ ಮೂಲಕ ಆಕೆಯನ್ನು ಗುರುತು ಪತ್ತೆ ಮಾಡಲಾಗಿದೆ.

ನದಿಗೆ ಹಾರಿದ ಬಳಿಕ ಚೈತ್ರಾ ಇನ್ನು ನಾಪತ್ತೆಯಾಗಿದ್ದು ಆಕೆಗಾಗಿ ಸ್ಥಳೀಯರಿಂದ ಹಾಗೂ ಅಗ್ನಿಶಾಮಕದಳದವರಿಂದ ಹುಡುಕಾಟ ನಡೆಯುತ್ತಿದೆ.

ಬ್ರಹ್ಮಾವರ ಪೋಲಿಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Comments are closed.