ಕರಾವಳಿ

ಮರ್ಡರ್ ಕೇಸ್ ಆರೋಪಿ ಬಿಡಿಸುವುದಾಗಿ ಹಣ ಪಡೆದು ವಂಚನೆ; ಮೂವರ ವಿರುದ್ಧ ದೂರು; ಆ ಮೂವರು ಯಾರು?

Pinterest LinkedIn Tumblr

ಉಡುಪಿ: ಮಗನನ್ನು ಜೈಲಿನಿಂದ ಬಿಡಿಸಿಕೊಂಡು ಬರುತ್ತೇವೆ ಎಂದು ಹೇಳಿ ಮಹಿಳೇಯೋರ್ವರಿಂದ ಹಣ ಪಡೆದು ವಂಚಿಸಿದ ಘಟನೆ ಉಡುಪಿಯಲ್ಲಿ ನಡೆದಿದೆ. ಈ ಸಂಬಂಧ ಪೊಲೀಸರು ಉಡುಪಿ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಚಂದ್ರಿಕಾ ಶೆಟ್ಟಿ, ಕಾರ್ಮಿಕ ವೇದಿಕೆಯ ಅಧ್ಯಕ್ಷ ರವಿ ಶೆಟ್ಟಿ ಹಾಗೂ ಕೆಜಿಪಿಯ ಸ್ಥಾಪಕ ಅಧ್ಯಕ್ಷ ಪದ್ಮನಾಭ ಪ್ರಸನ್ನ ಕುಮಾರ್ ವಿರುದ್ದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

labour-5-horz

( ರವಿ ಶೆಟ್ಟಿ, ಚಂದ್ರಿಕಾ ಶೆಟ್ಟಿ, ಪದ್ಮನಾಭ ಪ್ರಸನ್ನ ಕುಮಾರ್)

ಉಡುಪಿಯ ಆತ್ರಾಡಿ ನಿವಾಸಿ ಸಾಯಿರಾಬಾನು ಅವರ ಮಗ ಹನೀಫ್ ಕೊಲೆ ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ ಜೈಲು ಪಾಲಾಗಿದ್ದರು. ಈ ಹಿಂದೆ ಕಾರ್ಮಿಕ ವೇದಿಕೆಯಲ್ಲಿ ಸದಸ್ಯರಾಗಿದ್ದ ಹನೀಫ್‌ನನ್ನು ಕಳೆದ ತಿಂಗಳು ಬಕ್ರೀದ್ ದಿನ ಕಾರ್ಮಿಕ ವೇದಿಕೆಯ ಅಧ್ಯಕ್ಶ ರವಿ ಶೆಟ್ಟಿ, ಕಾರ್ಮಿಕ ವೇದಿಕೆಯ ಮಹಿಳಾ ಅದ್ಯಕ್ಷೆ ಹಾಗೂ ಉಡುಪಿ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಚಂದ್ರೀಕಾ ಶೆಟ್ಟಿ ಅವರು ಭೇಟಿ ಮಾಡಿದ್ದರು. ಬಳಿಕ ಹನೀಫ್ ತಾಯಿ ಸಾಯಿರಾಬಾನು ಅವರಲ್ಲಿ ಬಂದು ನಿಮ್ಮ ಮಗನನ್ನು ಜೈಲಿನಿಂದ ಬಿಡಿಸುತ್ತೇವೆ. ನಮಗೂ ನಿಮ್ಮ ಮಗ ಜೈಲಿನಲ್ಲಿರೋದು ನೋಡಿ ಬೇಸರವಾಗುತ್ತಿದೆ ಎಂದು ಹೇಳಿ ಸಾಯಿರಾಬಾನು ಅವರನ್ನು ನಂಬಿಸಿದ್ದರು. ಇದು ಮಾತ್ರವಲ್ಲದೇ ತನಗೆ ಪ್ರಭಾವಿ ರಾಜಕಾರಣಿಯೊಬ್ಬರ ಪರಿಚಯ ಇದೆ ಅವರನ್ನು ಭೇಟಿ ಮಾಡಿಸುತ್ತೇನೆ ಎಂದು ಹೇಳಿದ್ದರು. ಉಡುಪಿಯ ಪ್ರವಾಸಿ ಬಂಗಲೆಯಲ್ಲಿ ಕೆಜೆಪಿ ಸ್ಥಾಪಕ ಅದ್ಯಕ್ಷ ಪದ್ಮನಾಭ ಪ್ರಸನ್ನ ಕುಮಾರ್ ಅವರನ್ನು ಕರೆಯಿಸಿದ್ದ ರವಿ ಶೆಟ್ಟಿ ಈ ಬಗ್ಗೆ ಮಾತು ಕತೆ ನಡೆಸಿ 30 ಲಕ್ಷ ನೀಡುವಂತೆ ಡಿಮ್ಯಾಂಡ್ ಮಾಡಿದ್ದರು. ಆದ್ರೆ ಇದಕ್ಕೆ ಒಪ್ಪದ ಸಾಯಿರಾಬಾನು ಅಲ್ಲಿಂದ ಕಾಲ್ಕಿತ್ತಿದ್ದರು.

ಕಾರ್ಮಿಕ ವೇದಿಕೆಯ ಅಧ್ಯಕ್ಷ ರವಿ ಶೆಟ್ಟಿ ಪುನಃ ಸಾಯಿರಾ ಬಾನು ಅವರಲ್ಲಿ ಬಂದು 15 ಲಕ್ಷ ಕೊಡಿ ನಿಮ್ಮ ಮಗನನ್ನು ಜೈಲಿನಿಂದ ಹೊರ ತರುವ ಬಗ್ಗೆ ಪದ್ಮನಾಭ ಅವರಲ್ಲಿ ಮಾತನಾಡಿದ್ದೇನೆ ಎಂದಾಗ ತನ್ನ ಮಗ ಒಮ್ಮೆ ಹೊರ ಬರಲಿ ಎಂದು ಕೊಂಡು ಇದಕ್ಕೆ ಸಾಯಿರಾಬಾನು ಒಪ್ಪಿಗೆ ಸೂಚಿಸಿದ್ದರು. ರಾಜಕಾರಣಿಯನ್ನು ಭೇಟಿ ಮಾಡಿಸಲು 70 ಸಾವಿರ ಈ ಹಿಂದೆ ಪಡೆದುಕೊಂಡಿದ್ದ ರವಿ ಶೆಟ್ಟಿ ಹಾಗೂ ಚಂದ್ರಿಕಾ ಮತ್ತೆ ಎಡ್ವಾನ್ಸ್ ನೀಡುವಂತೆ ಒತ್ತಾಯಿಸಿದ್ದರು. ಆದ್ರೆ ಹಣವನ್ನು ಚೆಕ್ ಮುಖಾಂತರ ನೀಡುತ್ತೇನೆ. ಈ ಬಗ್ಗೆ ಎಗ್ರಿಮೆಂಟ್ ಮಾಡಿಸಿಕೊಳ್ಳುವ ಎಂದು ಹೇಳಿ ಸಾಯಿರಾಬಾನು ತಲಾ 5 ಲಕ್ಷದ ಮೂರು ಚೆಕ್ಕನ್ನು ನೀಡಿದ್ದರು. ಒಂದು ವಾರವಾದರೂ ತನ್ನ ಮಗನನ್ನು ಜೈಲಿನಿಂದ ಹೊರತರುವ ಬಗ್ಗೆ ಯಾವುದೇ ಕಾರ್ಯ ಮಾಡದ ಹಿನ್ನಲೆಯಲ್ಲಿ ಸಂಶಯಗೊಂಡ ಸಾಯಿರಾಬಾನು ಕೊಟ್ಟ ಚೆಕ್ ಗಳನ್ನು ವಾಪಾಸ್ ಪಡೆದುಕೊಂಡಿದ್ದರು. ಈ ಮಧ್ಯೆ ಸಾಯಿರಾಬಾನುಗೆ ಮೂವರು ಆಪಾದಿತರು ಬೆದರಿಕೆ ಒಡ್ಡಿದ್ದರು ಎಂದು ನಗರಠಾಣೆಯಲ್ಲಿ ಸಾಯಿರಾಬಾನು ದೂರನ್ನು ದಾಖಲಿಸಿಕೊಂಡಿದ್ದಾರೆ.

ಒಟ್ಟಿನಲ್ಲಿ ಕಾರ್ಮಿಕ ವೇದಿಕೆಯ ಹೆಸರಿನಲ್ಲಿ ಜನರನ್ನು ವಂಚಿಸುತ್ತಿರುವ ರವಿಶೆಟ್ಟಿ, ಚಂದ್ರಿಕಾ ಶೆಟ್ಟಿಯ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರೂ ಒತ್ತಾಯ ಮಾಡುತ್ತಿದ್ದು ಪೊಲೀಸರು ಮುಂದೆ ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದುನೋಡಬೇಕಾಗಿದೆ.

Comments are closed.