ಮಂಗಳೂರು,ಅ.09; ಮುಖ್ಯಮಂತ್ರಿ ಸಿದ್ದರಾಮಯ್ಯರವರು ಇಂದು ಪುತ್ತೂರು ತಾಲೂಕಿನ ಕೊಲ್ಯ ಗ್ರಾಮದಲ್ಲಿ ನಿರ್ಮಿಸಲಾಗುವ ನೂತನ ಪಶು ವೈದಕೀಯ ಮಹಾವಿದ್ಯಾಲಯದ ಶಂಕು ಸ್ಥಾಪನೆಗೆ ಆಗಮಿಸಿದ್ದು, ಬಳಿಕ ಮಂಗಳೂರಿನ ಕುದ್ರೋಳಿ ಶ್ರೀ ಕ್ಷೇತ್ರದ ದಸರಾ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಸಲಿರುವರು ಎಂಬ ಸುದ್ಧಿ ಹಬ್ಬಿತ್ತು.
ಆದರೆ ಮಂಗಳೂರಿನವರೆಗೆ ಬಂದಿದ್ದ ಮುಖ್ಯಮಂತ್ರಿಗಳು ಕುದ್ರೋಳಿ ಶ್ರೀ ಕ್ಷೇತ್ರಕ್ಕೆ ತೆರೆಳದೆ ಬೆಂಗಳೂರಿಗೆ ಹಿಂತಿರುಗಿ ಹೋಗಿರುವುದಕ್ಕೆ ಶ್ರೀ ಗೋಕರ್ಣ ಕ್ಷೇತ್ರದ ನವೀಕರಣದ ರೂವಾರಿ, ಮಾಜಿ ಕೇಂದ್ರ ಸಚಿವ ಬಿ.ಜನಾರ್ಧನ ಪೂಜಾರಿ ತೀವ್ರ ವಾಗ್ದಾಳಿ ನಡೆಸಿದರು.
ಮಂಗಳೂರು ದಸರ ಉದ್ಘಾಟನೆಗೂ ಮುಂಚೆ ವೇದಿಕೆಯಲ್ಲಿ ಒಬ್ಬರೇ ಮಾತನಾಡಿದ ಅವರು, ಮಂಗಳೂರು ದಸರಾ ಉದ್ಘಾಟನೆಗೆ ಬರಬೇಕಿದ್ದ ಮುಖ್ಯಮಂತ್ರಿಗಳು ಉದ್ಘಾಟನೆಗೆ ಬಾರದೆ ದೊಡ್ಡ ತಪ್ಪು ಮಾಡಿದ್ದು, ಅವರನ್ನು ದೇವರು ಕ್ಷಮಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಮಂತ್ರಿಗಳನ್ನು ಮಂಗಳೂರು ದಸರಾ ಉದ್ಘಾಟನೆಗೆ ನಾವು ಆಮಂತ್ರಿಸಿರಲಿಲ್ಲ. ಆದರೆ ಅವರು ಕುದ್ರೋಳಿ ಗೋಕರ್ಣನಾಥ ಕ್ಷೇತ್ರಕ್ಕೆ ಬರುತ್ತಾರೆ ಎಂಬುದು ನಮಗೆ ಪೊಲೀಸರ ಮೂಲಕ ತಿಳಿದು ಬಂದಿತ್ತು .ಮುಖ್ಯಮಂತ್ರಿಗಳು ಕುದ್ರೋಳಿ ಶ್ರೀ ಕ್ಷೇತ್ರಕ್ಕೆ ಬರುತ್ತಾರೆ ಎಂಬ ಹಿನ್ನೆಲೆಯಲ್ಲಿ ಮುಂಜಾಗುರತ ಕ್ರಮವಾಗಿ ಶ್ರೀ ಕ್ಷೇತ್ರದ ಸುತ್ತಮುತ್ತ ಪೊಲೀಸರು ತಪಾಸನೆ ಕೂಡ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಕೊನೆಯ ಕ್ಷಣದವರೆಗೂ ಮಂಗಳೂರು ದಸರ ಉದ್ಘಾಟನೆಗೆ ಮುಖ್ಯಮಂತ್ರಿಗಳು ಬರುತ್ತಾರೆ ಎಂದು ನಂಬಲಾಗಿತ್ತು.
ಆದರೆ ಪುತ್ತೂರಿನಿಂದ ಮಂಗಳೂರಿಗೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಮಂಗಳೂರಿನಲ್ಲಿ ಸಂಜೆ ಕಾಂಗ್ರೆಸ್ ನಾಯಕ ರೊಬ್ಬರ ಮನೆಗೆ ಹೋದ ನಂತರ ಅವರ ನಿರ್ಧಾರ ಬದಲಾಗಿದೆ. ಅಲ್ಲಿ ಅವರನ್ನು ತಲೆ ಕೆಡಿಸಿ ಕುದ್ರೋಳಿ ಕ್ಷೇತ್ರಕ್ಕೆ ಹೋಗದಂತೆ ಮಾಡಿದ್ದಾರೆ. ಈ ವ್ಯಕ್ತಿ ಯಾರೆಂದು ಎಲ್ಲರಿಗೂ ತಿಳಿಸಿದಿದೆ. ಸಂಜೆ ಚಾ ಕುಡಿಯಲು ಮುಖ್ಯಮಂತ್ರಿಗಳು ಯಾರ ಮನೆಗೆ ಹೋಗಿದ್ದಾರೆ… ಯಾರ ಮಾತು ಕೇಳಿ ಕ್ಷೇತ್ರಕ್ಕೆ ಬರುವ ನಿರ್ಧಾರವನ್ನು ಕೈಬಿಟ್ಟಿದ್ದಾರೆ ಎಂಬುವುದು ಪ್ರತಿಯೊಬ್ಬರಿಗೂ ತಿಳಿದಿದೆ. ಅವರು ಪೂಜಾರಿಯವರ ಮನೆಗೆ ಬರುವುದನ್ನು ನಿರಾಕರಿಸಿದ್ದಲ್ಲ. ಅವರು ಕ್ಷೇತ್ರಕ್ಕೆ ಬರುವುದನ್ನು ನಿರಾಕರಿಸಿದರು ಎಂದು ವಿಧಾನ ಪರಿಷತ್ ಸದಸ್ಯರೊಬ್ಬರ ಹೆಸರು ಹೇಳದೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಆಜಾನ್ (ಬಾಂಗ್) ಸಂದರ್ಭ ಭಾಷಣ ನಿಲ್ಲಿಸಿ, ಮತ್ತೆ ಮುಂದುವರಿಸಿದ ಪೂಜಾರಿ
ಕುದ್ರೋಳಿ ಗೋಕರ್ಣನಾಥ ದೇವಸ್ಥಾನದಲ್ಲಿ ನಡೆದ ಮಂಗಳೂರು ದಸರಾ ಉದ್ಘಾಟನೆಗೆ ಮುಂಚೆ ಜನಾರ್ದನ ಪೂಜಾರಿಯವರು ಮುಖ್ಯಮಂತ್ರಿಗಳ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ಸಂದರ್ಭ ಶ್ರೀ ಕ್ಷೇತ್ರದ ಹಿಂದಿನ ಮಸಿದಿಯಲ್ಲಿ ಸಂಜೆಯ ಆಜಾನ್ ಆರಂಭವಾಗಿತ್ತು. ಈ ಸಂದರ್ಭದಲ್ಲಿ ತನ್ನ ಭಾಷಣವನ್ನು ಸುಮಾರು ಹತ್ತು ನಿಮಿಷ ಅರ್ಧಕ್ಕೆ ನಿಲ್ಲಿಸಿದ ಜನಾರ್ದನ ಪೂಜಾರಿಯವರು ಆಜಾನ್ ನಿಂತ ನಂತರ ತಮ್ಮ ಭಾಷಣವನ್ನು ಮುಂದುವರಿಸಿದರು.
Comments are closed.