ಕರಾವಳಿ

ಹೆಬ್ರಿ: ಟಿಪ್ಪರ್ ಹಾಗೂ ಬೈಕ್ ಡಿಕ್ಕಿ; ಬೈಕ್ ಹಿಂಬದಿ ಸವಾರೆ ದಾರುಣ ಸಾವು

Pinterest LinkedIn Tumblr

accidents

ಉಡುಪಿ: ಬೈಕ್ ಹಾಗೂ ಟಿಪ್ಪರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಹಿಂಬದಿ ಕುಳಿತಿದ್ದ ಮಹಿಳೆ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ ಘಟನೆ ಹೆಬ್ರಿ ಸಮೀಪ ನಡೆದಿದೆ.

ಪುಷ್ಪಾ ಎಂಬಾಕೆ ಅಪಘಾತದಲ್ಲಿ ಮ್ರತಪಟ್ಟ ದುರ್ಧೈವಿ.

ತನ್ನ ಪತಿ ಹಾಗೂ ಪುತ್ರನೊಂದಿಗೆ ಬೈಕಿನಲ್ಲಿ ತೆರಳುತ್ತಿದ್ದಾಗ ಟಿಪ್ಪರ್ ಬೈಕಿಗೆ ಡಿಕ್ಕಿಯಾಗಿದ್ದು ಪುಷ್ಪ ರಸ್ತೆಗೆಸೆಯಲ್ಪಟ್ಟಿದ್ದು ಅವರ ಮೇಲೆ ಟಿಪ್ಪರ್ ಚಲಿಸಿದೆ ಎನ್ನಲಾಗಿದೆ. ಟಿಪ್ಪರ್ ಚಾಲಕನ ಅಜಾಗರುಕತೆ ಹಾಗೂ ಅತಿಯಾದ ವೇಗವೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.

ಹೆಬ್ರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Comments are closed.