ಬೆಳ್ತಂಗಡಿ, ಅ.29: ಬಂಗಾಳ ಕೊಲ್ಲಿಯಲ್ಲಿ ಮೂರು ತಿಂಗಳ ಹಿಂದೆ ನಾಪತ್ತೆಯಾಗಿರುವ ಸೇನಾ ವಿಮಾನದಲ್ಲಿದ್ದ ಗುರುವಾಯನಕರೆ ನಿವಾಸಿ ಯೋಧ ಏಕನಾಥ ಶೆಟ್ಟಿ(48)ಯವರ ಪಾರ್ಥಿವ ಶರೀರ ಸಿಗದ ಹಿನ್ನೆಲೆಯಲ್ಲಿ ಅವರು ಉಪಯೋಗಿಸುತ್ತಿದ್ದ ಸೇನಾ ಸಮವಸ್ತ್ರ ಮತ್ತು ಇತರ ಪರಿಕರಗಳನ್ನು ಮಿಲಿಟರಿ ಗೌರವದೊಂದಿಗೆ ಶುಕ್ರವಾರ ಏಕನಾಥ ಶೆಟ್ಟಿ ಅವರ ಮನೆಯವರಿಗೆ ಹಸ್ತಾಂತರಿಸಲಾಯಿತು.
ಮಿಲಿಟರಿ ವಿಶೇಷ ವಿಮಾನದಲ್ಲಿ ಚೆನ್ನೈಗೆ ಸಮವಸ್ತ್ರವುಳ್ಳ ಪೆಟ್ಟಿಗೆಯನ್ನು ತರಲಾಗಿದ್ದು, ಅಲ್ಲಿಂದ ಮಂಗಳೂರಿಗೆ ರೈಲಿನಲ್ಲಿ ತಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಇಟ್ಟು ಗೌರವಗಳನ್ನು ಸಲ್ಲಿಸಲಾಯಿತು. ಬಳಿಕ ಅಲ್ಲಿಂದ ಪೊಲೀಸ್ ವಾಹನದ ಮೂಲಕ ಬೆಳ್ತಂಗಡಿ ತರಲಾಯಿತು. ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಮುಂದೆ ಗೌರವದೊಂದಿಗೆ ಬರಮಾಡಿಕೊಳ್ಳಲಾಯಿತು. ಪುಂಜಾಲಕಟ್ಟೆಯಿಂದ ವಾಹನ ಜಾಥಾ ನಡೆದು ನೂರಾರು ಮಂದಿ ವಿವಿಧ ವಾಹನಗಳಲ್ಲಿ ಆಗಮಿಸಿದರು. ಪಿಲಿಚಾಮುಂಡಿಕಲ್ಲಿನಲ್ಲಿ ಸರಕಾರಿ ಶಾಲಾ ಮಕ್ಕಳು ಪಥಸಂಚಲನ ನಡೆಸಿದರು.
ಪುಂಜಾಲಕಟ್ಟೆಯಲ್ಲಿ ಜಿ.ಪಂ. ಸದಸ್ಯ ತುಂಗಪ್ಪ ಬಂಗೇರ, ಮಾಜಿ ಯೋಧರ ಸಂಘದ ಅಧ್ಯಕ್ಷ ಕಾಂಚೋಡು ಗೋಪಾಲಕೃಷ್ಣ, ಮಡಂತ್ಯಾರಿನಲ್ಲಿ ಪಂಚಾಯತ್ ಅಧ್ಯಕ್ಷ ಗೋಪಾಲಕೃಷ್ಣ, ಲೋಕೋಪಯೋಗಿ ಇಲಾಖಾ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಶಿವಪ್ರಸಾದ್ ಅಜಿಲ, ಬಿಜೆಪಿ ಯುವ ಮೋರ್ಚಾದ ಪುನೀತ್ ಕುಮಾರ್, ಮಾಲಾಡಿ ಪಂಚಾಯತ್ ಅಧ್ಯಕ್ಷ ಬೇಬಿ ಸುವರ್ಣ, ಗುರುವಾಯನಕೆರೆಯಲ್ಲಿ ಕುವೆಟ್ಟು ಪಂಚಾಯತ್ ಅಧ್ಯಕ್ಷ ಅಶೋಕ್ ಕೋಟ್ಯಾನ್ ಮೊದಲಾದವರು ಬರಮಾಡಿಕೊಂಡರು.
ನಂತರ ಅಲ್ಲಿಂದ ಮೆರವಣಿಗೆಯ ಮೂಲಕ ಗುರುವಾಯನಕೆರೆಯ ಹವ್ಯಕ ಭವನದ ಬಳಿಯಿರುವ ನಿವಾಸಕ್ಕೆ ತರಲಾಯಿತು.ಉತ್ತರಪ್ರದೇಶ ಮೂಲದ ವಾಯುಸೇನೆಯ ನಿವೃತ್ತ ಅಧಿಕಾರಿ ಪ್ರಸ್ತುತ ಡಿಎಸ್ಸಿ ಅಧಿಕಾರಿಯಾಗಿರುವ ಸುರೇಂದ್ರ ಅವರು ಏಕನಾಥ ಶೆಟ್ಟಿ ಅವರ ಪತ್ನಿ ಜಯಂತಿ ಅವರಿಗೆ ಏಕನಾಥ ಶೆಟ್ಟಿ ಅವರ ಸೇನಾ ಸಮವಸ್ತ್ರ ಹಾಗೂ ಇತರ ವಸ್ತುಗಳನ್ನು ಹಸ್ತಾಂತರಿಸಿದರು.ಜಿಲ್ಲಾ ಎಸ್ಪಿ ಭೂಷಣ್ ಜಿ. ಬೊರಸೆ, ಪುತ್ತೂರು ಸಹಾಯಕ ಕಮಿಷನರ್ ಡಾ| ರಾಜೇಂದ್ರ ಜತೆಗಿದ್ದರು.
ಹಸ್ತಾಂತರ ಸಂದರ್ಭ ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ಕಾಂಚೋಡು, ಮಾಜಿ ಸೈನಿಕರಾದ ಎಂ.ಆರ್.ಜೈನ್, ಸುನೀಲ್ ಶೆಣೈ, ರಾಮ ಭಟ್, ಜಗನ್ನಾಥ್, ಐ.ಎಂ. ಸುಬ್ರಹ್ಮಣ್ಯ, ತಂಗಚ್ಛನ್, ಎಂ.ಬಿ.ಪಿಂಟೊ, ವಿಕ್ಟರ್ ಕ್ರಾಸ್ತಾ, ಕಾಂತಪ್ಪಗೌಡ, ಮೋಹನ ಶೆಟ್ಟಿಗಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಕುವೆಟ್ಟು ಗ್ರಾಪಂ ಅಧ್ಯಕ್ಷ ಅಶೋಕ್ ಕೋಟ್ಯಾನ್, ಮಾಜಿ ಶಾಸಕ ಪ್ರಭಾಕರ ಬಂಗೇರ, ಜಿಪಂ ಸದಸ್ಯರಾದ ಮಮತಾ ಶೆಟ್ಟಿ, ಧರಣೇಂದ್ರ ಕುಮಾರ್, ತುಂಗಪ್ಪಬಂಗೇರ, ತಾಪಂ ಸದಸ್ಯ ಗೋಪಿನಾಥ ನಾಯಕ್, ಲೋಕೋಪಯೋಗಿ ಇಲಾಖಾ ಸಹಾಯಕ ಕಾರ್ಯ ಪಾಲಕ ಪ್ರಭಾರ ಅಭಿಯಂತರ ಶಿವಪ್ರಸಾದ ಅಜಿಲ, ತಾಪಂ ಕಾರ್ಯನಿರ್ವಹಣಾಧಿಕಾರಿ ಸಿ.ಆರ್.ನರೇಂದ್ರ, ಬಿಜೆಪಿ ಯುವ ಮೊರ್ಚಾ ಜಿಲ್ಲಾಧ್ಯಕ್ಷ ಹರೀಶ್ ಪೂಂಜಾ, ಬಿಜೆಪಿ ತಾಲೂಕಾಧ್ಯಕ್ಷ ರಂಜನ್ ಜಿ. ಗೌಡ, ಎಸ್ಸೈ ರವಿ ಮತ್ತಿತರರು ಉಪಸ್ಥಿತರಿದ್ದರು.
ಯೋಧನ ಮನೆಯಲ್ಲಿ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಶಕುಂತಳಾ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಮಾಜಿ ಶಾಸಕ ಕೆ. ಪ್ರಭಾಕರ ಬಂಗೇರ, ತಾಲೂಕು ಬಿಜೆಪಿ ಅಧ್ಯಕ್ಷ ರಂಜನ್ ಜಿ. ಗೌಡ, ಜಿ.ಪಂ. ಸದಸ್ಯರಾದ ಸೌಮ್ಯಲತಾ ಜಯಂತ್ ಗೌಡ, ಮಮತಾ ಎಂ. ಶೆಟ್ಟಿ, ತಾ.ಪಂ. ಸದಸ್ಯ ಗೋಪಿನಾಥ ನಾಯಕ್, ತಹಶೀಲ್ದಾರ್ ತಿಪ್ಪೆ ಸ್ವಾಮಿ, ತಾಲೂಕು ಆರೋಗ್ಯಾಧಿಕಾರಿ ಡಾ| ಕಲಾಮಧು ಶೆಟ್ಟಿ, ಡಾ| ಆದಂ, ಲೋಕೋಪಯೋಗಿ ಇಲಾಖಾ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಶಿವಪ್ರಸಾದ್ ಅಜಿಲ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನರೇಂದ್ರ, ಮಾಜಿ ಯೋಧರ ಸಂಘದ ಅಧ್ಯಕ್ಷ ಕಾಂಚೋಡು ಗೋಪಾಲಕೃಷ್ಣ, ಸುನಿಲ್ ಶೆನೈ, ಎಂ.ಆರ್. ಜೈನ್, ರಾಮ ಭಟ್, ಮಹಮ್ಮದ್ ರಫೀಕ್, ಮೋಹನ್ ಶೆಟ್ಟಿ, ಐ.ಎಂ. ಸುಬ್ರಮಣಿ, ಕಾಂತಪ್ಪ ಗೌಡ, ತಂಗಚ್ಚನ್, ಎಂ.ಬಿ. ಪಿಂಟೋ, ವಿಕ್ಟರ್ ಕ್ರಾಸ್ತಾ, ಜಯಕರ್ನಾಟಕ ಸಂಘಟನೆ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
Comments are closed.