ಉಳ್ಳಾಲ, ಅ.29: ಉಳ್ಳಾಲ ಠಾಣಾ ವ್ಯಾಪ್ತಿಯ ಬಸ್ತಿಪಡ್ಪಿನಲ್ಲಿ ಮನೆಯೊಂದರ ಒಳಗೆ ದುಷ್ಕರ್ಮಿಗಳು ಪೆಟ್ರೋಲ್ ಸುರಿದು ಬೆಂಕಿ ಕೊಟ್ಟ ಘಟನೆ ಶುಕ್ರವಾರ ರಾತ್ರಿ ನಡೆದಿದ್ದು, ಘಟನೆಯಲ್ಲಿ ಓರ್ವರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಗಾಯಗೊಂಡವರನ್ನು ಉಳ್ಳಾಲ ಠಾಣಾ ವ್ಯಾಪ್ತಿಯ ಬಸ್ತಿಪಡ್ಪಿನ ನಿವಾಸಿ ತಾರನಾಥ ಯಾದವ್ (58) ಎಂದು ಗುರುತಿಸಲಾಗಿದೆ.
ತಾರನಾಥರವರ ಮನೆಯ ವೆಂಟಿಲೇಟರ್ ಮೂಲಕ ದುಷ್ಕರ್ಮಿಗಳು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಬೆಂಕಿ ಬೆಡ್ ರೂಂನೊಳಗೆ ಬಿದ್ದಿದೆ. ಈ ವೇಳೆ ಬೆಡ್ ರೂಂನಲ್ಲಿ ತಾರನಾಥ್ ಅವರೊಂದಿಗೆ ಅವರ ಪತ್ನಿ ವಿದ್ಯಾ ಹಾಗೂ 10 ವರ್ಷದ ಪುತ್ರ ಮಿಥುನ್ ಇದ್ದರು. ಕೃತ್ಯದ ಸುಳಿವರಿತ ತಾರನಾಥ್ ಅವರು ಬೆಂಕಿಯಿಂದ ಪತ್ನಿ, ಮಗನನ್ನು ರಕ್ಷಿಸಿದ್ದಾರೆ. ಈ ವೇಳೆ ತಾರನಾಥ್ ರವರ ಎರಡೂ ಕೈಗಳಿಗೆ ಗಾಯಗಳಾಗಿದ್ದು, ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಪರಿಸರದಲ್ಲಿ ಹರಡುತ್ತಿರುವ ಗಾಂಜಾ ಹಾವಳಿ ವಿರುದ್ಧ ಧ್ವನಿ ಎತ್ತಿದ್ದಕ್ಕೆ ಪ್ರತೀಕಾರವಾಗಿ ತಾರನಾಥ್ ಅವರ ವಿರುದ್ಧ ಈ ದುಷ್ಕೃತ್ಯ ಎಸಗಲಾಗಿದೆ ಎಂದು ಶಂಕಿಸಲಾಗಿದೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.