ಸುಡುಮದ್ದುಗಳ ವಿಶೇಷ ಮಾರಾಟ – ಪಟಾಕಿ ಖರೀದಿಸಿ ಬಹುಮಾನ ಗೆಲ್ಲುವ ಅವಕಾಶ
ಮಂಗಳೂರು : ನಗರದ ಬಂದರ್‌ನ ಗೋಳಿಕಟ್ಟಾ ಬಜಾರ್, ಜೆ.ಎಂ.ರಸ್ತೆಯಲ್ಲಿರುವ ಗಣಪತಿ ಭಂಡಾರ್‌ಕರ್ ಆಂಡ್ ಸನ್ಸ್ ಮಳಿಗೆಯಲ್ಲಿ ವರ್ಷಂಪ್ರತಿ ನಡೆಯುವ ದೀಪಾವಳಿ ಉತ್ಸವದ ವಿಶೇಷ ಮಾರಾಟ ಆರಂಭಗೊಂಡಿದೆ.ಪಟಾಕಿ ಖರೀದಿಸಿರಿ, ಬಹುಮಾನ ಗೆಲ್ಲಿರಿ ವಿಶೇಷ ಕೊಡುಗೆಯೊಂದಿಗೆ ಇಲ್ಲಿ ಬೆಳಕಿನ ಹಬ್ಬಕ್ಕೆ ಚಾಲನೆ ಸಿಕ್ಕಿದೆ.
ಕಳೆದ 6 ದಶಕಗಳಿಂದ ಪಟಾಕಿ ವ್ಯವಹಾರದಲ್ಲಿ ಅಪೂರ್ವ ಅನುಭವ ಹೊಂದಿರುವ ಗಣಪತಿ ಭಂಡಾರ್‌ಕರ್ ಸಂಸ್ಥೆಯ ಕರಾವಳಿಯಲ್ಲಿ ಮನೆಮಾತಾಗಿದೆ. ಮಂಗಳೂರಿನಲ್ಲಿ ಪಟಾಕಿ ಉದ್ಯಮಕ್ಕೆ ಹೊಸ ಅಯಾಮದೊಂದಿಗೆ ಹೊಸ ಮೆರುಗು ತಂದ ಸಂಸ್ಥೆಯ ಪಾಲುದಾರರಾದ ಬಿ.ದಿನೇಶ್ ಭಡಾರ್‌ಕರ್ ( ಮಂಜಣ್ಣ) ಹಾಗೂ ಬಿ.ದಿಲೀಪ್ ಭಂಡಾರ್‌ಕರ್ (ಬಬ್ಬಿಯಣ್ಣ) ಸಹೋದರರು ಸಂಸ್ಥೆಯ ಸಂಸ್ಥಾಪಕ ತಮ್ಮ ತಂದೆ ದಿ. ಬಿ.ಗಣಪತಿ ಭಂಡಾರ್‌ಕರ್ ಅವರ ಆದರ್ಶವನ್ನು ಅಳವಡಿಸಿಕೊಂಡು ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಮೂಲಕ ಗ್ರಾಹಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಅನಿಲ್, ಸೋನಿ, ಕಾರ್ಕ್ ಸೇರಿದಂತೆ ಪ್ರಮುಖ ಪಟಾಕಿ ತಯಾರಿಕಾ ಕಂಪೆನಿಗಳ ಅಪಾರ ಸಂಗ್ರಹ ಇಲ್ಲಿದೆ. ಬಿಡಿ ಪಟಾಕಿ, ಓಲೆ ಪಟಾಕಿ, ಮಳೆ ಮಾಲರ, ಬಾಣ, ರಾಕೆಟ್, ಹೂವಿನ ಕುಂಡ ಹೀಗೆ ವಿವಿಧ ವಿನ್ಯಾಸಗಳಿಂದ ಕೂಡಿದ ಸಾಂಪ್ರದಾಯಿಕ ಮತ್ತು ಆಧುನಿಕ ಪಟಾಕಿಗಳ ಸರಮಾಲೆಯೇ ಇಲ್ಲಿದೆ. ಮಕ್ಕಳಿಗೆ ವಿಶೇಷ ಆಕರ್ಷಣೆಯುಳ್ಳ ಹೊಸ ಮಾದರಿಯ ಪಟಾಕಿಗಳಾದ ಚೋಟಾ ಭೀಮ್ ಹಾಗೂ ಬೆನ್ – ೧೦ ಈ ವರ್ಷ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗಿದೆ. ಒಟ್ಟಿನಲ್ಲಿ ಮಕ್ಕಳಿಂದ ಹಿಡಿದು ಹಿರಿಯ ವಯಸ್ಕರವರೆಗೆ ಮುದ ನೀಡುವ ಬಾಣಂಗಳದಲ್ಲಿ ಬಣ್ಣ ಬಣ್ಣದ ಚಿತ್ತಾರ ಮೂಡಿಸುವ ವೈವಿಧ್ಯಮಯ ಪಟಾಕಿಗಳ ಬಹುದೊಡ್ಡ ಸಂಗ್ರಹವನ್ನು ಈ ಮಳಿಗೆಯಲ್ಲಿ ಕಾಣ ಬಹುದಾಗಿದೆ.
ಸುಡುಮದ್ದುಗಳ ವಿಶಾಲ ಸಂಗ್ರಹದೊಂದಿಗೆ ಗ್ರಾಹಕರ ಅಭಿರುಚಿಗೆ ತಕ್ಕಂತೆ ಹಾಗೂ ಅವರ ಅನುಕೂಲಕ್ಕಾಗಿ ವಿವಿಧ ಮಾದರಿಯ ಗಿಪ್ಟ್ ಬಾಕ್ಸ್‌ಗಳನ್ನು ಈ ಸಂದರ್ಭದಲ್ಲಿ ಇಲ್ಲಿ ಮಾರಾಟಕ್ಕಿಡಲಾಗಿದೆ.
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮಾತ್ರವಲ್ಲದೇ ಇತರ ಎಲ್ಲಾ ಹಬ್ಬಗಳ ಆಚರಣೆಗೆ ಅನುಕೂಲವಾಗುವಂತೆ ವರ್ಷವಿಡಿ ಪಟಾಕಿ ದೊರೆಯುವ ಮಂಗಳೂರಿನ ಏಕೈಕ ಮಳಿಗೆ ಗಣಪತಿ ಭಂಡಾರ್‌ಕರ್ ಆಂಡ್ ಸನ್ಸ್. ಗ್ರಾಹಕರ ಅನುಕೂಲಕ್ಕಾಗಿ ಮಹಮ್ಮದ ಆಲಿ ರಸ್ತೆ ಬಂದರ್ ಹಾಗೂ ವಾಮನಾಶ್ರಮ ಕಟ್ಟಡ ಕಾರ್‌ಸ್ಟ್ರೀಟ್ ಇಲ್ಲಿ ಇನ್ನೆರಡು ಮಳಿಗೆಗಳನ್ನು ಹೊಂದಿದೆ. ಇದರ ಸಹ ಸಂಸ್ಥೆ ಬೆಂಗಳೂರಿನ ಅವೆನ್ಯೂ ರಸ್ತೆಯಲ್ಲಿ ವಿಶಾಲ ಮಳಿಗೆಯೊಂದಿಗೆ ಕಾರ್ಯಾಚರಿಸುತ್ತಿದೆ.
ಪಟಾಕಿ ಖರೀದಿಸಿ : ಬಹುಮಾನ ಗೆಲ್ಲಿ – ಬಹುಮಾನ ಯೋಜನೆ
ಇದೀಗ ಇಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಗ್ರಾಹಕರಿಗೆ ಪಟಾಕಿ ಖರೀದಿಯೊಂದಿಗೆ ಬಹುಮಾನ ಗೆಲ್ಲುವ ವಿಶೇಷ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಬಂಪರ್ ಬಹುಮಾನ ಸುಜುಕಿ ಅಕ್ಸೆಸ್ ಸ್ಕೂಟರ್, 2ನೇ ಬಹುಮಾನ ವಾಷಿಂಗ್ ಮೆಷಿನ್, 3ನೇ ಬಹುಮಾನ ಚಿನ್ನದ ಪದಕ ಹಾಗೂ 100 ಸಮಾಧಾನಕರ ಬಹುಮಾನ ಗೆಲ್ಲುವ ಅವಕಾಶವಿದೆ ಎಂದು ಸಂಸ್ಥೆಯ ಪಾಲುದಾರರು ತಿಳಿಸಿದ್ದಾರೆ.
Comments are closed.