ಕರಾವಳಿ

ಟಿಪ್ಪು ಜಯಂತಿ ಹಿನ್ನೆಲೆ ಉಡುಪಿಯಲ್ಲಿ ನಿಷೇದಾಜ್ಞೆ ಜಾರಿ

Pinterest LinkedIn Tumblr

section144-1463680484

ಉಡುಪಿ: ಟಿಪ್ಪುಜಯಂತಿ ಹಿನ್ನೆಲೆ ನಾಲ್ಕು ದಿನಗಳ ಕಾಲ ಉಡುಪಿಯಲ್ಲಿ ನಿಷೇದಾಜ್ಞೆ ಜಾರಿಯಲ್ಲಿರಲಿದೆ.

ಜಿಲ್ಲೆಯಲ್ಲಿ ನವೆಂಬರ್ 10 ರಂದು ನಡೆಯುವ ಟಿಪ್ಪು ಜಯಂತಿ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ , ಸರಕಾರಿ ಕಾರ್ಯಕ್ರಮಗಳು ನಡೆಯುವ ಸ್ಥಳಗಳನ್ನು ಹೊರತುಪಡಿಸಿ , ಜಿಲ್ಲೆಯಾದ್ಯಂತ ಸೆಕ್ಷನ್ 144 ರಂತೆ ನಿಷೇದಾಜ್ಞೆಯನ್ನು ಜಾರಿಗೊಳಿಸಲಾಗಿದ್ದು, ಈ ನಿಷೇದಾಜ್ಞೆಯು ನವೆಂಬರ್ 8 ರಂದು ಬೆಳಗ್ಗೆ 6 ಗಂಟೆಯಿಂದ ನವೆಂಬರ್ 11 ರ ಬೆಳಗ್ಗೆ 6 ಗಂಟೆಯವರೆಗೆ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.

Comments are closed.