ಕರಾವಳಿ

ಚಿಲ್ಲರೆ ಸಮಸೈಯಿಂದ ಪರದಾಡಿದ ಸಾರ್ವಜನಿಕರು : ಆದರೂ ಮೋದಿಯವರ ನಿರ್ಧಾರಕ್ಕೆ ಎಲ್ಲೆಡೆ ಶ್ಲಾಘನೆ

Pinterest LinkedIn Tumblr

atm_bund_photo_1

ಮಂಗಳೂರು, ನ.9: ಪ್ರಧಾನಿ ನರೇಂದ್ರ ಮೋದಿಯವರು ಅನಿರೀಕ್ಷಿತವಾಗಿ ಮಂಗಳವಾರ ತಡರಾತ್ರಿಯಿಂದ ಅನ್ವಯವಾಗುವಂತೆ 500 ರೂ. ಮತ್ತು 1,000 ರೂ. ನೋಟನ್ನು ಅಮಾನ್ಯಗೊಳಿಸಿರುವ ಹಿನ್ನೆಲೆಯಲ್ಲಿ ಜನಸಾಮಾನ್ಯರು ಬೆಳ್ಳಂಬೆಳಗ್ಗೆ ‘ಚಿಲ್ಲರೆ’ ಸಮಸ್ಯೆಯನ್ನು ಎದುರಿಸುವಂತಾಗಿದೆ.

ಕೇಂದ್ರ ಸರ್ಕಾರ ದಿಢೀರ್‌ ಆಗಿ 500 ಹಾಗೂ 1000 ನೋಟುಗಳನ್ನು ನಿಷೇಧಿಸುವ ನಿರ್ಧಾರ ಕೈಗೊಂಡ ಹಿನ್ನೆಲೆ ಹಾಗೂ ಇಂದು ನಾಳೆ ಎಟಿಎಂಗಳು ಬಂದ್ ಹಿನ್ನೆಲೆ ನಿನ್ನೆ ರಾತ್ರಿಯೇ ರಾಜ್ಯಾದ್ಯಂತ ಸುದ್ದಿ ತಿಳಿದವರೆಲ್ಲಾ ಎಟಿಎಂ ಮುಂದೆ ಜಮಾಯಿಸಿ ಹಣ ಡ್ರಾಗೆ ಮುಗಿಬಿದಿದ್ದರು.

atm_bund_photo_2

ಇದೇ ಸಂದರ್ಭದಲ್ಲಿ ಮಂಗಳೂರಿನಲ್ಲಿ ಕೆಲವರು ಮಾತ್ರ ಜನ ಚಿನ್ನದ ಅಂಗಡಿಗಳಿಗೂ ಮುಗಿಬಿದ್ದು ಚಿನ್ನಾಭರಣ ಖರೀದಿಸಿದರು. ಜನ ಚಿನ್ನದ ಅಂಗಡಿಗಳಿಗೆ ಮುಗಿಬಿದ್ದಿದ್ದಾರೆ. ಚಿನ್ನ ತೆಗೆಯಲೆಂದು ದುಡ್ಡು ಸಂಗ್ರಹಿಸಿಟ್ಟಿರುವ ಜನ ಅಥವಾ ಹಣವನ್ನು ಚಿನ್ನವಾಗಿ ಪರಿವರ್ತಿಸಲು ನಿರ್ಧಾರ ಕೈಗೊಂಡಿರುವ ಜನ ಚಿನ್ನದ ಅಂಗಡಿಗೆ ಜಮಾಯಿಸಿ ಚಿನ್ನ ಖರೀದಿಯಲ್ಲಿ ತೊಡಗಿರುವುದು ಕಂಡು ಬಂತು.

atm_bund_photo_3 atm_bund_photo_4

ಹಲವರು ರಾತ್ರಿಯೇ ಈ ವಿಚಾರದಿಂದ ಗೊಂದಲಕ್ಕೆ ಸಿಲುಕಿ ‘ಮುಂದೇನು?’ ಎಂದು ಚಡಪಡಿಸತೊಡಗಿದ್ದರೆ, ಇನ್ನು ಕೆಲವರಿಗೆ ಬೆಳಗ್ಗೆ ಎದ್ದ ಬಳಿಕವಷ್ಟೇ ಈ ವಿಷಯ ಗಮನಕ್ಕೆ ಬಂದಿದೆ. ಹಾಗಾಗಿ ಈಗ ಎಲ್ಲೆಲ್ಲೂ ‘ಚಿಲ್ಲರೆ’ಯದ್ದೇ ಚರ್ಚೆ, ‘ಚಿಲ್ಲರೆ’ಯದ್ದೇ ಸಮಸ್ಯೆ.
ನಗರದ ಕೆಲವು ಅಂಗಡಿಮುಂಗಟ್ಟುಗಳ ಬಾಗಿಲುಗಳಲ್ಲಿ 500 ಮತ್ತು 1,000 ರೂ.ನೋಟುಗಳನ್ನು ಸ್ವೀಕರಿಸುವುದಿಲ್ಲ ಎಂಬ ಬೋರ್ಡ್ಗಳನ್ನು ತಗಲಿಸಿರುವುದು ಕಂಡಬರುತ್ತಿದೆ. ಹೆಚ್ಚಿನ ಎಟಿಎಂಗಳು ಬಾಗಿಲು ಹಾಕಲ್ಪಟ್ಟಿದ್ದರೆ, ಬ್ಯಾಂಕ್ಗಳು ತೆರೆದಿದ್ದರು, ಸಾರ್ವಜನಿಕ ವ್ಯವಹಾರಕ್ಕೆ ಸಂಬಂಧಿಸಿದಂತೆ ರಜೆ ಎಂಬ ಬೋರ್ಡ್ಗಳನ್ನು ಹಾಕಲಾಗಿದೆ. ಚಿತ್ರಮಂದಿರಗಳು ಪ್ರೇಕ್ಷಕರಿಲ್ಲದೆ ಭಣಗುಡುತ್ತಿತ್ತು.

ಹಲವರು ಬಚ್ಚಿಟ್ಟಿದ್ದ 500, 1,000 ರೂ. ನೋಟನ್ನ ಹೊರಗೆ ಹಾಕಿ ಎಂದು ಛೇಡಿಸತೊಡಗಿದರೆ, ಇನ್ನು ಕೆಲವರು ಬಚ್ಚಿಟ್ಟ ಹಣದ ಗಂಟನ್ನು ಬಿಚ್ಚಿಡುವುದು ಹೇಗೆ ಎಂದು ತೊಳಲಾಡುವಂತಾಗಿದೆ. ಇವೆಲ್ಲಕ್ಕಿಂತ ಮುಖ್ಯವಾಗಿ ದಿನಬಳಕೆ ವಸ್ತುಗಳನ್ನು ಖರೀದಿಸಲಾಗದೆ ಪೇಚಾಡುವಂತಾಗಿದೆ. ಬಹುತೇಕ ಅಂಗಡಿ ಮುಂಗಟ್ಟುಗಳಲ್ಲಿ 500, 1,000 ರೂಪಾಯಿಯ ನೋಟುಗಳನ್ನು ಕೇಳುವವರಿಲ್ಲ. ಇದರಿಂದ ಹಾಲು, ತರಕಾರಿ, ಮೀನು, ಮಾಂಸ, ಜಿನಸು ಸಾಮಗ್ರಿಗಳನ್ನು ಖರೀದಿಸಲಾಗದೆ ಪರಿತಪಿಸುತ್ತಿದ್ದಾರೆ.

 

atm_bund_photo_3 atm_bund_photo_4

ಇನ್ನು ಹಲವರು ತಮ್ಮಲ್ಲಿರುವ 10, 20, 50, 100 ರೂ. ನೋಟುಗಳನ್ನು ಕೈ ಬಿಡಲೂ ಆತಂಕಪಡುತ್ತಿದ್ದಾರೆ. ಅವು ಖಾಲಿಯಾದರೆ ಮುಂದೇನು ಎಂದು ಪ್ರಶ್ನಿಸುತ್ತಿದ್ದಾರೆ. ಜಿನಸು ಅಂಗಡಿಗೆ, ಮಾಂಸದ ಅಂಗಡಿಗೆ, ತರಕಾರಿ ಅಂಗಡಿಗೆ ತೆರಳಿ ಯಾವ ಸಾಮಗ್ರಿಗಳನ್ನು ಕೇಳಿದರೂ 500, 1,000ರ ರೂ. ನೋಟನ್ನು ಹೊರತುಪಡಿಸಿ ‘ಚಿಲ್ಲರೆ’ ಕೊಡಿ ಎಂದು ವ್ಯಾಪಾರಿಗಳು ಕೇಳುವುದು ಸಾಮಾನ್ಯವಾಗಿದೆ.

ಬೆಲೆ ಏರಿಕೆಯಿಂದಾಗಿ ಯಾವ ವಸ್ತುಗಳನ್ನು ಖರೀದಿಸಿದರೂ ಕನಿಷ್ಠ 500 ರೂ. ಖಾಲಿಯಾಗುವುದು ಸಹಜ. ಹಾಗಾಗಿ ಜನಸಾಮಾನ್ಯ ಅಂಗಡಿಗೆ ತೆರಳಿ 500 ರೂ. ನೋಟು ತೋರಿಸುವುದು ಸಾಮಾನ್ಯವಾಗಿತ್ತು. ಎಂದಿನಂತೆ ಇಂದು ಕೂಡ 500 ರೂ. ತೋರಿಸಿದರೆ ‘ಚಿಲ್ಲರೆ’ ಕೊಡಿ ಎನ್ನುತ್ತಿದ್ದಾರೆ. ಪರಿಚಯಸ್ಥರು ‘ಸಾಲ’ ಕೊಟ್ಟರೂ ಅಪರಿಚಿತ ವ್ಯಾಪಾರಿಗಳು ಗ್ರಾಹಕರನ್ನು ಬರಿಗೈಯಲ್ಲಿ ಕಳುಹಿಸಿಕೊಡುವುದು ಅನಿವಾರ್ಯವಾಗಿದೆ.

atm_bund_photo_5 atm_bund_photo_6 atm_bund_photo_7 atm_bund_photo_8

ಈ ‘ಚಿಲ್ಲರೆ’ ಸಮಸ್ಯೆಯಿಂದ ಅದೆಷ್ಟೋ ಮಂದಿ ಹಾಲು, ತರಕಾರಿ, ಮೀನು, ಮಾಂಸ ಮತ್ತಿತರ ದಿನಬಳಕೆಯ ವಸ್ತುಗಳನ್ನು ಖರೀದಿಸಲಾಗದೆ ಪೇಚಾಡುವಂತಾಗಿದೆ. ಬಸ್, ರಿಕ್ಷಾ ಮತ್ತಿತರ ಟ್ಯಾಕ್ಸಿ ವಾಹನದಲ್ಲಿ ಕೂಡ ಇದೇ ಸಮಸ್ಯೆಯಾಗಿದೆ. ಅನೇಕ ಬಸ್ಸುಗಳಲ್ಲಿ ಪ್ರಯಾಣಿಕರು ‘ಚಿಲ್ಲರೆ’ಯಿಲ್ಲದ ಕಾರಣ ‘ನಾಳೆ ಕೊಡುವೆ’ ಎಂದು ಹೇಳಿ ಪ್ರಯಾಣಿಸುತ್ತಿವುದು ಇಂದು ಸಾಮಾನ್ಯವಾಗಿ ಕಂಡು ಬಂದ ದೃಶ್ಯ. ರಿಕ್ಷಾಗಳಲ್ಲೂ ಕೂಡ ಅದೇ ಕಥೆಯಾಗಿದೆ. ರಿಕ್ಷಾ ಹತ್ತುವ ಮುನ್ನವೇ ಚಾಲಕರು ‘ಚಿಲ್ಲರೆ ಇದೆಯಾ?’ ಎಂದು ಕೇಳುವುದು, ಇದೆಯೆಂದಾದರೆ ಹತ್ತಿ ಎನ್ನುವುದು, ಇಲ್ಲ ಎಂದರೆ ‘ಕ್ಷಮಿಸಿ’ ಎನ್ನುವುದು ಕೂಡ ಇಂದು ಸಾಮಾನ್ಯವಾಗಿತ್ತು.

atm_bund_photo_9 atm_bund_photo_10

ಈ ‘ಚಿಲ್ಲರೆ’ ಇದೀಗ ವ್ಯವಹಾರಕ್ಕೂ ಭಾರೀ ಹೊಡೆತ ಬಿದ್ದಿವೆ. ಮಂಗಳೂರು ನಗರದಲ್ಲೇ ಕೋಟ್ಯಂತರ ರೂಪಾಯಿ ನಷ್ಟವಾಗಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಮಂಗಳೂರುನ ಬಂದರು, ಸೆಂಟ್ರಲ್ ಮಾರುಕಟ್ಟೆ ಮತ್ತಿತರ ವ್ಯವಹಾರ ಕೇಂದ್ರಗಳಲ್ಲಿ ‘ಚಿಲ್ಲರೆ’ ಭಾರೀ ಸಮಸ್ಯೆಯಾಗಿ ಕಾಡಿದೆ.

ಕಪ್ಪು ಹಣ ಹಾಗೂ ಕಳ್ಳ ನೋಟ್‌ಗಳನ್ನು ಹೊರತರುವ ಹಿನ್ನೆಲೆಯಲ್ಲಿ ಮೋದಿ ಸರಕಾರ ಕೈಗೊಂಡಿರುವ ಈ ನಿರ್ಧಾರಕ್ಕೆ ಹೆಚ್ಚಿನ ಕಡೆ ಶ್ಲಾಘನೆ ವ್ಯಕ್ತವಾಗಿದೆ. ಆದರೆ ಸರಕಾರ ಅನಿರೀಕ್ಷಿತವಾಗಿ ಇಂತಹ ನಿರ್ಧಾರ ತೆಗೆದುಕೊಂಡಿರುವುದರಿಂದ ಸಾಮಾನ್ಯ ಜನರಿಗೆ ತೊಂದರೆಯಾಗುತ್ತಿದೆ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Comments are closed.