ಕರಾವಳಿ

ಪಣಂಬೂರು : ಎನ್ಎಂಪಿಟಿಯ ಗೇಟ್ ಮೈಮೇಲೆ ಬಿದ್ದು ಯೋಧ ಮೃತ್ಯು

Pinterest LinkedIn Tumblr

nmpt_gate_feldown

ಮಂಗಳೂರು : ಪಣಂಬೂರು ಸಮೀಪವಿರುವ ನವಮಂಗಳೂರು ಬಂದರಿನ ಪ್ರವೇಶ ದ್ವಾರದ ಬಳಿ ಅಳವಡಿಸಲಾದ ಬೃಹತ್ ಗಾತ್ರದ ಕಬ್ಬಿಣದ ಗೇಟೊಂದು ಮೈಮೇಲೆ ಬಿದ್ದು ಸಿಐಎಸ್ಎಫ್ ಯೋಧ ಮೃತಪಟ್ಟಿರುವ ಘಟನೆ ಇಂದು ಬೆಳಿಗ್ಗೆ ಸಂಭವಿಸಿದೆ.

ಪುತ್ತೂರಿನ ಈಶ್ವರ ನಾಯ್ಕ್ (54) ಮೃತಪಟ್ಟ ಯೋಧರಾಗಿದ್ದಾರೆ. ಸಿಐಎಸ್ಎಫ್ ಪಡೆಯಲ್ಲಿ ಯೋಧನಾಗಿದ್ದ ಈಶ್ವರ್ ನಾಯ್ಕ್ ಎನ್ಎಂಪಿಟಿ ಪ್ರವೇಶದ್ವಾರದಲ್ಲಿ ಕರ್ತವ್ಯದಲ್ಲಿದ್ದಾಗ ಈ ಘಟನೆ ನಡೆದಿದೆ.

ನವಮಂಗಳೂರು ಬಂದರಿನಲ್ಲಿ ಉದ್ಯೋಗದಲ್ಲಿದ್ದ ಈಶ್ವರ ನಾಯ್ಕ್ ಅವರು ತನ್ನ ಪಾಳಿ ಮುಗಿದ ಬಳಿಕ ಗೇಟ್ ಮುಚ್ಚಲು ಹೋದಾಗ ಬೃಹತ್ ಗಾತ್ರದ ಈ ಗೇಟ್ ಏಕಾಏಕಿ ನಾಯಕ್ ಅವರ ಮೈಮೇಲೆ ಬಿದ್ದಿದೆ ಎನ್ನಲಾಗಿದೆ.

ಈ ಗೇಟ್‌ ತುಂಬಾ ಹಳೆಯದಾಗಿದ್ದು, ತುಕ್ಕು ಹಿಡಿದಿತ್ತು. ಹೀಗಾಗಿ ಗೇಟ್‌ ಹಾಕಲು ಹೋದಾಗ ಮುರಿದು ಬಿದ್ದಿದೆ ಎನ್ನಲಾಗಿದೆ.

ಈ ಬಗ್ಗೆ ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.