ಉಡುಪಿ: ಕುಂದಾಪುರ ಉಪವಿಭಾಗದ ನೂತನ ಸಹಾಯಕ ಆಯುಕ್ತೆಯಾಗಿ ಶಿಲ್ಪಾ ನಾಗ್ ಅವರು ಸೋಮವಾರ ಅಧಿಕಾರ ಸ್ವೀಕಾರ ಮಾಡಿದರು.
2014 ಬ್ಯಾಚಿನ ಐ.ಎ.ಎಸ್. ಅಧಿಕಾರಿಯಾಗಿರುವ ಶಿಲ್ಪಾ ನಾಗ್ ಅವರು ಈ ಹಿಂದೆ ಹುಣಸೂರು ಎಂಬಲ್ಲಿ ಪ್ರೊಬೇಷನರಿ ಆಗಿ ಕಾರ್ಯ ನಿರ್ವಹಿಸಿ ಕುಂದಾಪುರ ಎ.ಸಿ. ಆಗಿ ಆಗಮಿಸಿದ್ದಾರೆ. ಈ ಹಿಂದಿನ ಉಪವಿಭಾಗದ ಸಹಾಯಕ ಆಯುಕ್ತೆಯಾಗಿರುವ ಅಶ್ವಥ್ಥಿ ಅವರು ಪುಷ್ಪಗುಚ್ಚ ನೀಡಿ ಅವರನ್ನು ಬರಮಾಡಿಕೊಂಡಿದ್ದಲ್ಲದೇ ಅಧಿಕಾರ ಹಸ್ತಾಂತರ ಮಾಡಿದ್ದಾರೆ. ಕುಂದಾಪುರದ ಬಗ್ಗೆ ಇನ್ನೂ ತಿಳಿದುಕೊಳ್ಳಬೇಕಿದೆ, ಮಾಧ್ಯಮದವರ ಸಹಕಾರ ಅಗತ್ಯವಿದೆ ಎಂದರು.
ಕಳೆದ ಹನ್ನೊಂದು ತಿಂಗಳಿನಿಂದ ಕುಂದಾಪುರದ ಉಪವಿಭಾಗಾಧಿಕಾರಿಯಾಗಿದ್ದ ಅಶ್ವಥ್ಥಿ ಅವರು ದಾವಣಗೆರೆ ಜಿಲ್ಲಾಪಂಚಾಯತ್ ಸಿಇಓ ಆಗಿ ಬಡ್ತಿ ಹೊಂದಿ ವರ್ಗಾವಣೆಗೊಂಡಿದ್ದಾರೆ.
Comments are closed.