ಮಂಗಳೂರು, ಡಿಸೆಂಬರ್. 5: ರಚನಾ ಕೆಥೊಲಿಕ್ ಚೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರಿ ಅಶ್ರಯದಲ್ಲಿ ‘ರಚನಾ ಅವಾರ್ಡ್’ ಪ್ರದಾನ ಸಮಾರಂಭ ಬಾನುವಾರ ಸಂಜೆ ನಗರದ ಮಿಲಾಗ್ರಿಸ್ ಸಭಾಂಗಣದಲ್ಲಿ ನಡೆಯಿತು.ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಐವರಿಗೆ ‘ರಚನಾ ಅವಾರ್ಡ್’ ಪ್ರದಾನ ಮಾಡಲಾಯಿತು.
ಮಂಗಳೂರು ಬಿಷಪ್ ಅತಿ ವಂ. ಡಾ.ಅಲೋಶಿಯಸ್ ಪೌಲ್ ಡಿಸೋಜಾ ಅವರ ಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ರಚನಾ ವರ್ಷದ ಮಹಿಳೆ’ ಪ್ರಶಸ್ತಿಯನ್ನು ಮಂಗಳೂರಿನ ವೈಟ್ ಡೋವ್ಸ್ ಆಯಂಡ್ ಲೈಫ್ ಸೋಶಿಯಲ್ ಆಯಕ್ಟಿವಿಟಿಯ ಸ್ಥಾಪಕಿ ಕೊರೆನಾ ರಸ್ಕಿನಾ, ಕೃಷಿ ಕ್ಷೇತ್ರದಲ್ಲಿನ ಸಾಧನೆಗೆ ಕೊಕ್ಕಡದ ಪ್ರಗತಿಪರ ಕೃಷಿಕ ವಿನ್ಸೆಂಟ್ ಡಿಸೋಜಾ, ಉದ್ಯಮ ಕ್ಷೇತ್ರದಲ್ಲಿನ ಸಾಧನೆಗೆ ಪುಣೆಯ ರೊಸಾರಿ ಎಜುಕೇಶನಲ್ ಗ್ರೂಪ್ನ ವಿವೇಕ್ ಅರನ್ಹಾ, ವೃತ್ತಿಪರ ವಿಭಾಗದಲ್ಲಿ ಬ್ಯಾಂಕ್ ಆ ಮಹಾರಾಷ್ಟ್ರದ ಮಾಜಿ ಸಿಎಂಡಿ ಅಲೆನ್ ಸಿ.ಎ.ಪಿರೇರಾ ಹಾಗೂ ಎನ್‌ಆರ್‌ಐ ಉದ್ಯಮಿ ಪ್ರಶಸ್ತಿಯನ್ನು ಮಾರ್ಟಿನ್ ಜೆ. ಅರಾನ್ಹಾ ಅವರಿಗೆ ಪ್ರದಾನ ಮಾಡಲಾಯಿತು.ಬಿಷಪ್ ಅತಿ ವಂ. ಡಾ. ಅಲೋಶಿಯಸ್ ಪೌಲ್ ಡಿಸೋಜಾ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಕಾರ್ಯಕ್ರಮದಲ್ಲಿ ಶಾಸಕ ಜೆ.ಆರ್.ಲೋಬೊ, ವಿಧಾನಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜಾ, ರಚನಾದ ಅಧ್ಯಕ್ಷ ಗಿಲ್ಬರ್ಟ್ ಡಿಸೋಜಾ, ಸಂಚಾಲಕ ಡಾ.ನೊರ್ಮನ್ ಮೆಂಡೊನ್ಸಾ, ಕಾರ್ಯದರ್ಶಿ ಯುಲಲಿಯಾ ಡಿಸೋಜಾ ಉಪಸ್ಥಿತರಿದ್ದರು.
Comments are closed.