ಮಂಗಳೂರು : ನಗರದ ಕೋಡಿಕಲ್ ನಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡವೊಂದರಲ್ಲಿ ಕಟ್ಟಡ ಗುತ್ತಿಗೆದಾರರೊಬ್ಬರ ಮೃತದೇಹವು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮೃತರನ್ನು ನಗರದ ಕಟ್ಟಡ ಗತ್ತಿಗೆದಾರ ಡೊಂಗರಕೇರಿಯ ನಿವಾಸಿ ವಿದ್ಯಾಧರ್ ಶೇಟ್ ( 42) ಎಂದು ಗುರುತಿಸಲಾಗಿದೆ.
ಕೋಡಿಕಲ್ ಸೈಂಟ್ ಡೊಮಿನಿಕ್ ಚರ್ಚ್ ಬಳಿ ಜಯಪ್ರಕಾಶ್ ಎಂಬವರ ಸಹೋದರನಿಗಾಗಿ ತಾವೇ ನಿರ್ಮಿಸುತ್ತಿದ್ದ ಕಟ್ಟಡದಲ್ಲಿ ವಿದ್ಯಾಧರ್ ಶೇಟ್ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿರುವ ಬಗ್ಗೆ ತಿಳಿದು ಬಂದಿದೆ.
ವಿದ್ಯಾಧರ್ ಶೇಟ್ ಹಣಕಾಸು ವ್ಯವಹಾರಗಳ ಸಮಸ್ಯೆಯಿಂದ ಆತ್ಮಹತ್ಯೆಗೈದಿರಬೇಕೆಂದು ಶಂಕಿಸಲಾಗಿದ್ದು, ಹೆಚ್ಚಿನ ಮಾಹಿತಿ ಪೊಲೀಸ್ ತನಿಖೆಯಿಂದ ಇನ್ನಷ್ಟೇ ಲಭ್ಯವಾಗಬೇಕಿದೆ.. ಈ ಬಗ್ಗೆ ಉರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.