ಉಳ್ಳಾಲ : ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅಕ್ರಮವಾಗಿ ಬಾಡಿಗೆ ಮನೆಯಲ್ಲಿ ಕೂಡಿ ಹಾಕಿ ನಿರಂತರವಾಗಿ ಅತ್ಯಾಚಾರಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಳ್ಳಾಲ ಪೊಲೀಸರು ಪೊಕ್ಸೊ ಕಾಯ್ದೆಯಡಿ ಮೂವರನ್ನು ಬಂಧಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಗಂಬಿಲ ನಿವಾಸಿ ಡಾರ್ವಿನ್ ಡಿ’ಸೋಜ (42) ಹಾಗೂ ಬಾಡಿಗೆ ಮನೆ ಒದಗಿಸಿದ ಆಡಂಕುದ್ರು ನಿವಾಸಿ ಮೆಲ್ವಿನ್ ಎಂಬತಾನನ್ನು ಉಳ್ಳಾಲ ಪೊಲೀಸರು ಬಂಧಿಸಿ ಪೊಕ್ಸೊ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಕೃತ್ಯಕ್ಕೆ ಬೆಂಬಲಿಸಿದ ಬಾಲಕಿಯ ತಾಯಿ ಲೀನಾ ನೊರೊನ್ಹಾ ರನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.
ಬಗಂಬಿಲ ನಿವಾಸಿ ಡಾರ್ವಿನ್ ನಗರದ ಹೊರವಲಯದ 15ರ ಹರೆಯದ ಬಾಲಕಿಯನ್ನು ಸುಮಾರು 10 ತಿಂಗಳುಗಳ ಹಿಂದೆ ಆಡಂಕುದ್ರು ಬಾಡಿಗೆ ಮನೆಯಲ್ಲಿ ಅಕ್ರಮವಾಗಿ ಕೂಡಿಟ್ಟುಕೊಂಡು ಅಲ್ಲಿ ಬೆಳಗ್ಗಿನ ಸಮಯದಲ್ಲಿ ಬಂದು ಅತ್ಯಾಚಾರವಸೆಗಿ, ಬಳಿಕ ಅಲ್ಲೇ ಕೂಡಿಟ್ಟು ಮನೆಗೆ ತೆರಳುತ್ತಿದ್ದ.
ಈ ಕುರಿತ ಮಾಹಿತಿ ಪಡೆದ ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಉಳ್ಳಾಲ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅದರಂತೆ ಬುಧವಾರ ಕಲ್ಲಾಪು ಆಡಂಕುದ್ರುವಿನ ಮನೆಗೆ ದಾಳಿ ನಡೆಸಿದ ಪೊಲೀಸರು ಹಾಗೂ ಅಧಿಕಾರಿಗಳು ಬಾಲಕಿಯನ್ನು ರಕ್ಷಿಸಿದ್ದಾರೆ. ಬಳಿಕ ಡಾರ್ವಿನ್ ಮತ್ತು ಮೆಲ್ವಿನ್ ಇಬ್ಬರನ್ನೂ ಬಂಧಿಸಿ ಪೊಕ್ಸೊ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಾಲಕಿಯನ್ನು ಆಕೆಯ ತಾಯಿಯ ಗಮನಕ್ಕೆ ತಂದು ಡಾರ್ವಿನ್ ಕರೆತಂದಿದ್ದ. ಅದರಂತೆ ಬಾಲಕಿಯ ತಾಯಿಯನ್ನೂ ವಿಚಾರಣೆಗೆಂದು ವಶಪಡಿಸಿಕೊಳ್ಳಲಾಗಿದೆ. ಆರೋಪಿ ಡಾರ್ವಿನ್ ಆಡಂಕುದ್ರುವಿನ ಮರಳು ವ್ಯಾಪಾರಿ ಹಾಗೂ ರೌಡಿಶೀಟರ್ ಅಶೋಕ್ ಡಿ’ಸೋಜಾ ಸಹೋದರ.
ಪೊಲೀಸ್ ಕಮಿಷನರ್ ಎಂ. ಚಂದ್ರಶೇಖರ್ ಮಾರ್ಗದರ್ಶನದಂತೆ ನಡೆದ ಕಾರ್ಯಾಚರಣೆಯಲ್ಲಿ ಉಳ್ಳಾಲ ಠಾಣಾಧಿಕಾರಿ ಗೋಪಿಕೃಷ್ಣ, ಎಸ್.ಐ. ರಾಜೇಂದ್ರ ಬಿ., ಸಿಬಂದಿ ಮೋಹನ್, ಮಹೇಶ್, ರವಿಚಂದ್ರ, ರಾಜಾರಾಂ , ಪ್ರಶಾಂತ್, ಜ್ಯೋತಿ ಮುಂತಾದವರು ಪಾಲ್ಗೊಂಡಿದ್ದರು.
Comments are closed.