ಕರಾವಳಿ

ಕಣಿವೆಗೆ ಉರುಳಿದ ಮಿನಿಬಸ್; ಕಮಲಶಿಲೆಗೆ ತೆರಳಿ ವಾಪಾಸ್ಸಾಗುತ್ತಿದ್ದ ಹಲವರಿಗೆ ಗಾಯ

Pinterest LinkedIn Tumblr

ಕುಂದಾಪುರ: ಕುಂದಾಪುರ ತಾಲೂಕಿನ ಕಮಲಶಿಲೆ ದೇವಾಲಯ ಭೇಟಿ ನೀಡಿ ಬಳಿಕ ಗುಹಾಲಯ ಸಂದರ್ಶನ ನಡೆಸಿ ವಾಪಾಸ್ಸಾಗುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಮಿನಿ ಬಸ್ ಕಣಿವೆಗೆ ಉರುಳಿದ ಪರಿಣಾಮ ಹಲವರು ಗಾಯಗೊಂದ ಘಟನೆ ಕಮಲಶಿಲೆ ಪಾರೆ ಎಂಬಲ್ಲಿ ಭಾನುವಾರ ಸಂಜೆ ನಡೆದಿದೆ.

ಉಡುಪಿಯ ಕಾಪುವಿನ ಪವನ್ ಟೂರ್‍ಸ್ ಆ್ಯಂಡ್ ಟ್ರಾವೆಲ್ಸ್ ಸಂಸ್ಥೆಗೆ ಸೇರಿದ ಮಿನಿ ಬಸ್ ಇದಾಗಿದ್ದು ಸುಮಾರು 18-20 ಮಂದಿ ಪ್ರಯಾಣಿಕರಿದ್ದರು ಎನ್ನಲಾಗಿದ್ದು ಇವರೆಲ್ಲರೂ ಕಾಪುವಿನ ಎಲ್.ಐ.ಸಿ. ಉದ್ಯೋಗಿಗಳು ಎನ್ನಲಾಗಿದೆ. ಬೆಳಿಗ್ಗೆ ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರೀ ದೇವಸ್ಥಾನ ಭೇಟಿ ಬಳಿಕ ಮಧ್ಯಾಹ್ನ ಕಮಲಶಿಲೆಯ ಗುಹೆಗೆ ಭೇಟಿ ನೀಡಿ ವಾಪಾಸ್ಸಾಗುವ ವೇಳೆ ಕಮಲಶಿಲೆ ಪಾರೆ ಎಂಬಲ್ಲಿ ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಮಿನಿ ಬಸ್ ಕಂದಕಕ್ಕೆ ಉರುಳಿದೆ. ಘಟನೆಯಲ್ಲಿ ಬಸ್ಸಿನಲ್ಲಿದ್ದ ಹಲವರಿಗೆ ಗಾಯಗಳಾಗಿದ್ದು ಗಾಯಾಳುಗಳ ಹೆಸರುಗಳು ತಿಳಿದುಬಂದಿಲ್ಲ. ಗಾಯಾಳುಗಳನ್ನು ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಕೊಡಿಸಲಾಗುತ್ತಿದೆ.

ಶಂಕರನಾರಾಯಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Comments are closed.