ಕರಾವಳಿ

ಕೇವಲ 4 ನಿಯಮಗಳನ್ನು ಆಚರಿಸಿ – ರೋಗಗಳನ್ನು ನಮ್ಮ ಹತ್ತಿರ ಸುಳಿಯದಂತೆ ನೋಡಿಕೊಳ್ಳಿ

Pinterest LinkedIn Tumblr

ಜನರಲ್ಲಿ ಆರೋಗ್ಯದ ಬಗೆಗಿನ ಅರಿವು  ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಆರೋಗ್ಯವಾಗಿರುವುದಕ್ಕೆ ಬೇಕಾದ ಎಲ್ಲಾ ಎಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಆದರೆ ನಿಮಗೆ ತಿಳಿಯದ ವಿಷಯವೇನೆಂದರೆ… ಈಗ ಹೇಳುವ 4 ನಿಯಮಗಳನ್ನು ಆಚರಿಸಿದರೆ ಸಾಕು ಸುಮಾರು 124 ರೋಗಗಳನ್ನು ನಮ್ಮ ಹತ್ತಿರ ಸುಳಿಯದಂತೆ ನೋಡಿಕೊಳ್ಳಬಹುದು.

ತಿನ್ನುವುದಕ್ಕೆ 40 ನಿಮಿಷಗಳ ಮುಂಚೆ, ತಿಂದ ನಂತರ 1 ಗಂಟೆಯವರೆಗೂ ನೀರು ಕುಡಿಯಬೇಡಿ:
ಬ್ರೇಕ್ ಫಾಸ್ಟ್, ಲಂಚ್, ಡಿನ್ನರ್…. ಯಾವುದಾದರೂ ಆಹಾರವನ್ನು ತಿಂದ ನಂತರ 1 ಗಂಟೆಯ ಕಾಲ ನೀರು ಕುಡಿಯಬೇಡಿ, ಏಕೆಂದರೆ ನಾವು ತಿಂದ ಆಹಾರ ಹೊಟ್ಟೆಯಲ್ಲಿನ ಅನ್ನನಾಳದ ಒಳಗೆ ಹೊಗುತ್ತದೆ. ಅಲ್ಲಿ ಹೈಡ್ರೋಕ್ಲೋರಿಕ್ ಯಾಸಿಡ್ ಸೂಕ್ಷ್ಮ ಕ್ರಿಮಿಗಳನ್ನು ಸಾಯಿಸಿ, ಸ್ವಲ್ಪ ಆಹಾರವನ್ನು ಯಾಂತ್ರಿಕವಾಗಿ ಚೂರು ಮಾಡುತ್ತದೆ. ಕಡಿಮೆ PH ಮೌಲ್ಯವಿರುವ ಹೈಡ್ರೋಕ್ಲೋರಿಕ್ ಯಾಸಿಡ್, ಕಿಣ್ವಗಳಿಗೆ ಉಪಯೋಗವಾಗಿ ಆಹಾರ ಜೀರ್ಣವಾಗುವುದರಿಂದ ಶಕ್ತಿ ಬಿಡುಗಡೆಯಾಗುತ್ತದೆ.

ಈ ಪ್ರಕ್ರಿಯೆಯಲ್ಲಿ ಆಹಾರ ತಿಂದ ತಕ್ಷಣ ನೀರು ಕುಡಿದರೆ ಜೀರ್ಣ ವ್ಯವಸ್ಥೆ ನಿಧಾನವಾಗುತ್ತದೆ. ನೀರು ಹೆಚ್ಚಾಗಿ ಸೇರುವುದರಿಂದ ಹೈಡ್ರಾಲಿಕ್ ಯಾಸಿಡ್, ಹೈಡ್ರೋಕ್ಲೋರಿಕ್ ಯಾಸಿಡ್’ಗಳು ಡೈಲ್ಯೂಟ್ ಆಗುತ್ತವೆ. ಆದ್ದರಿಂದ ವ್ಯರ್ಥ ಪದಾರ್ಥಗಳು ಹಾಗೆಯೇ ಉಳಿಯುತ್ತವೆ. ಇವು ಅನೇಕ ರೋಗಗಳಿಗೆ ಕಾರಣವಾಗುತ್ತವೆ. ಹಾಗಾಗಿ ತಿನ್ನುವುದಕ್ಕೆ 20 ನಿಮಿಷಗಳ ಮುಂಚೆ, ತಿಂದ 1 ಗಂಟೆಯ ವರೆಗೂ ನೀರು ಕುಡಿಯಬೇಡಿ.

ನೀರನ್ನು ಯಾವಾಗಲೂ ಗಟಗಟ ಎಂದು ಅತುರಾತುರಾವಾಗಿ ಕುಡಿಯಬೇಡಿ:
ನೀರನ್ನು ಒಂದೇಸಾರಿ ಗಟಗಟ ಎಂದು ಕುಡಿಯದೇ.. ಟೀ, ಕಾಫೀ ಕುಡಿದಂತೆ ಸಿಫ್ ಮಾಡುತ್ತಾ ಕುಡಿಯಬೇಕು. ಹೀಗೆ ಮಾಡುವುದರಿಂದ ಪ್ರತಿ ಸಾರಿ ನೀರು ಬಾಯಿಯಲ್ಲಿ ಉತ್ಪತ್ತಿಯಾದ ಲಾಲಾರಸ ಸ್ವಲ್ಪ ಪ್ರಮಾಣದಲ್ಲಿ ಶರೀರದಲ್ಲಿ ಹೋಗುತ್ತದೆ. ಆದ್ದರಿಂದ ಸಮಸ್ಯೆ ಇರುವುದಿಲ್ಲ. ಹಾಗಲ್ಲದೆ ನೀರನ್ನು ಗಟಗಟ ಕುಡಿದರೆ… ಅದರ ಮೇಲೆ ಶರೀರದ ಹೈಡ್ರೋಕ್ಲೋರಿಕ್ ಯಾಸಿಡ್ ಅಧಿಕ ಪ್ರಮಾಣದಲ್ಲಿ ಕೆಲಸ ಮಾಡಬೇಕಾಗುತ್ತದೆ. ಈ ಸಂಧರ್ಭದಲ್ಲಿ ಅಧಿಕ ಎಸಿಡಿಟಿ ಉಂಟಾಗುತ್ತದೆ. ಇದು ರಕ್ತದ ಮೇಲೆ ಪರಿಣಾಮ ಬೀರುತ್ತದೆ. ಇದರ ಮೂಲಕ ಅನೇಕ ರೋಗಗಳು ಬರುವ ಸಾಧ್ಯತೆಗಳಿವೆ. ಅದಕ್ಕೆ ನೀರನ್ನು ಯವಾಗಲೂ ಗಟಗಟ ಕುಡಿಯಬೇಡಿ.

ಕೂಲ್ ವಾಟರ್, ಐಸ್ ವಾಟರ್ ಕುಡಿಯಬೇಡಿ:
ಹೆಚ್ಚು ಕೂಲ್ ಆಗಿರುವ ನೀರನ್ನು ಕುಡಿಯಬೇಡಿ ಇದು ಬಹಳ ಅಪಾಯಕಾರಿ ಏಕೆಂದರೆ ಶರೀರದಲ್ಲಿ ಪ್ರತಿ ಸಮಯದಲ್ಲೂ ಒಂದು ಕ್ರಿಯೆ ನಡೆದು ದೇಹವೆಲ್ಲವೂ ಬಿಸಿಯಾಗಿರುತ್ತದೆ. ಈ ಸಮಯದಲ್ಲಿ ಕೂಲ್ ವಾಟರ್ ಕುಡಿದರೆ ಎರಡು ವಿರುದ್ದವಾಗಿ ಟೆಂಪರೇಚರ್ ದೇಹದ ಮೇಲೆ ಪರಿಣಾಮ ಬೀರುತ್ತದೆ. ಕುಡಿಯಲೇ ಬೇಕೆಂದಿದ್ದರೆ ಮಡಿಕೆಯಲ್ಲಿನ ನೀರು ಕುಡಿದರೆ ಒಳ್ಳೆಯದು. ಅಷ್ಟೆ ಆಗಲಿ ಐಸ್ ವಾಟರ್ ಕುಡಿಯಬೇಡಿ.

ನಿದ್ದೆಯಿಂದ ಎದ್ದ ತಕ್ಷಣ 2-3 ಗ್ಲಾಸ್ ನೀರನ್ನು ಕುಡಿಯಬೇಕು:
ಈಗೀಗ ಈ ಸೂತ್ರವನ್ನು ಬಹಳ ಜನರು ಆಚರಿಸುತ್ತಿದ್ದಾರೆ. ನಿದ್ದೆ ಮಾಡುವುದರಿಂದ ಒಂದು ಮೂರು ಲೋಟ ನೀರು ಕುಡಿಯಬೇಕು. ಆ ನೀರು ಶರೀರದಲ್ಲಿ ಸೇರಿಕೊಂಡಿರುವ ವ್ಯರ್ಥವನ್ನು ಮಲವಿಸರ್ಜನೆ ರೂಪದಲ್ಲಿ ಹೊರ ಹಾಕುತ್ತದೆ. 3 ನಿಮಿಷಗಳಲ್ಲಿ ನಂಬರ್ -2 ಕೆಲಸ ಪೂರ್ತಿಯಾಗುವಂತೆ ಮಾಡುತ್ತದೆ. ಒಂದೇ ಸಾರಿ ಶರೀರದ ವ್ಯರ್ಥಪದಾರ್ಥಗಳನ್ನು ವಿಸರ್ಜಿಸುವವರಿಗೆ ರೋಗಬರುವ ಅವಕಾಶ ಬಹಳ ಕಡಿಮೆಯಾಗಿರುತ್ತದೆ. ಇವು ನೀರಿನೊಂದಿಗೆ ಇರುವ 4 ಸೂತ್ರಗಳನ್ನು ತಪ್ಪದೇ ಕ್ರಮವಾಗಿ ಆಚರಿಸಿದರೇ ಆರೋಗ್ಯ ರಕ್ಷಣೆಯಾಗುತ್ತದೆ.

Comments are closed.