ಮಂಗಳೂರು, ಜನವರಿ 17: ರಾಜಸ್ಥಾನದ ಜೈಪುರದಲ್ಲಿ ನಡೆದ ರಾಷ್ಟ್ರೀಯ ಮುಯಿ ಥಾಯಿ (ಥಾಯಿ ಬಾಕ್ಸಿಂಗ್) ಚಾಂಪಿಯನ್ ಶಿಪ್ನಲ್ಲಿ ಅತ್ಯಧಿಕ ಪದಕಗಳೊಂದಿಗೆ ಸಮಗ್ರ ಚಾಂಪಿಯನ್ಶಿಪ್ ಗೆದ್ದುಕೊಂಡ ಕರ್ನಾಟಕ ತಂಡವು ಸೋಮವಾರ ಮಂಗಳೂರಿಗೆ ಆಗಮಿಸಿದ್ದು, ಅವರಿಗೆ ನಗರದ ರೈಲ್ವೇ ನಿಲ್ದಾಣದಲ್ಲಿ ಆದ್ಧೂರಿ ಸ್ವಾಗತ ನೀಡುವ ಮೂಲಕ ಬರಮಾಡಿ ಕೊಳ್ಳಲಾಯಿತು.
ಈ ಸಂದರ್ಭ ಕರ್ನಾಟಕ ಮುಯಿ ಥಾಯಿ ಅಸೋಸಿಯೇಶನ್ನ ಅಧ್ಯಕ್ಷ ರಾಜ್ಗೋಪಾಲ್ ರೈ, ಇತರ ಪದಾಧಿಕಾರಿಗಳಾದ ಮಹೇಶ್ ಪಾಂಡ್ಯಾ, ರಾಘವೇಂದ್ರ ರಾವ್, ಬಿ.ಎನ್. ಆಚಾರ್ಯ, ದೇವಿಚರಣ್ ಶೆಟ್ಟಿ, ಶೇಖರ್ ರೈ, ವೇದವ್ಯಾಸ್ ಕಾಮತ್, ಸುರೇಂದ್ರ ಶೇಖ್ ಅವರು ಕ್ರೀಡಾಪಟುಗಳನ್ನು ಹಾರ್ಧಿಕವಾಗಿ ಸ್ವಾಗತಿಸಿದರು.
ಮಂಗಳೂರಿಗೆ ಆಗಮಿಸಿದ ತಂಡ 6 ಚಿನ್ನ, 8 ಬೆಳ್ಳಿ ಹಾಗೂ 4 ಕಂಚಿನ ಪದಕಗಳನ್ನು ಗೆದ್ದುಕೊಂಡಿದೆ. ತಂಡದ ತರಬೇತುದಾರ ನಿತೇಶ್ಚಂದ್ರ ಕುಮಾರ್ ನೇತೃತ್ವದಲ್ಲಿ 18 ಸ್ಪರ್ಧಾಳುಗಳು ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಿದ್ದರು.
Comments are closed.