ಕರಾವಳಿ

ನೆಲದ ಮಾತಿಗೆ ಬೆಲೆ, ನೆಲದ ಸದ್ದಿಗೆ ಕಿವಿ ಇಂದಿನ ಅವಶ್ಯಕತೆ: ಕೋಟ್ನಕಟ್ಟೆಯ ರಜತಸಂಭ್ರಮದಲ್ಲಿ ಡಾ. ನರೇಂದ್ರ ರೈ ದೇರ್ಲ

Pinterest LinkedIn Tumblr

ಜನವರಿ 24: ನಮ್ಮ ಯುವ ಜನತೆ ಮೊಬೈಲ್ ಧ್ಯಾನದಲ್ಲೇ ಮುಳುಗಿದ ಪರಿಸ್ಥಿತಿ ಉಂಟಾಗಿದೆ, ಇದು ಗೊಮ್ಮಟ ಧ್ಯಾನಕ್ಕೆ ಬದಲಾಗಲು ನೆಲದ ಮಾತಿಗೆ ಬೆಲೆ, ನೆಲದ ಸದ್ದಿಗೆ ಕಿವಿ ಇಂದಿನ ಅವಶ್ಯಕತೆ ಎಂದು ಕೋಟ್ನಕಟ್ಟೆ ಫ್ರೆಂಡ್ಸ್ ಸರ್ಕಲ್ ಹಿರಿಯಡಕ ಇದರ ರಜತ ಸಂಭ್ರಮವನ್ನು ಉದ್ಘಾಟಿಸುತ್ತ ಬೆಳ್ಳಾರೆಯ ಡಾ. ಶಿವರಾಮ ಕಾರಂತ ಪದವಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ನರೇಂದ್ರ ರೈ ದೇರ್ಲ ಇವರು ಹೇಳಿದರು.

ಕಾರ್ಯಕ್ರಮವನ್ನು ಸ್ಥಳೀಯ ಉದ್ಯಮಿ ಕೆ. ನಟರಾಜ್ ಹೆಗ್ಡೆ ಇವರು ಅಧ್ಯಕ್ಷತೆ ವಹಿಸಿದ್ದು , ಉಡುಪಿ ಆಟೋ ನಿರ್ವಾಹಕರ ಕ್ರೆ. ಕೋ ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ಶ್ರೀಧರ ದೇವಾಡಿಗ, ಮಹಾಲಸಾ ಎಕ್ಸ್ ಪೋರ್ಟ್ಸ್ ಇದರ ವ್ಯವಸ್ಥಾಪಕರಾದ ಬಿ. ರೋಹಿದಾಸ್ ಪೈ ಇವರುಗಳು ಉಪಸ್ಥಿತರಿದ್ದರು.

ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಬಹುಮಾನ ಗಳಿಸಿದ ಹಾಗು 7, 10 ಮತ್ತು ದ್ವಿತೀಯ ಪಿ. ಯು. ಸಿ ಯಲ್ಲಿ ಹೆಚ್ಚು ಅಂಕ ಗಳಿಸಿದ ಸ್ಥಳೀಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ದಿವ್ಯ ಮರಾಠೆ ಮತ್ತು ಬಳಗದವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮಕ್ಕೆ, ಅಧ್ಯಕ್ಷ ದಿವಾಕರ ಭಂಡಾರಿ ಸ್ವಾಗತಿಸಿ, ಕಾರ್ಯದರ್ಶಿ ದೇವದಾಸ ಮರಾಠೆ ವರದಿ ವಾಚಿಸಿ, ರಾಮಚಂದ್ರ ನಾಯಕ್ ವಂದಿಸಿದರು. ಬಾಲಕೃಷ್ಣ ಬಿ. ಕೆ ಇವರು ಕಾರ್ಯಕ್ರಮ ನಿರ್ವಹಿಸಿದರು.

ನಂತರ ಅಂಗನವಾಡಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗು ಬಲೇ ಚಾ ಪರ್ಕ ಕಲಾವಿದರಿಂದ ತುಳು ಹಾಸ್ಯಮಯ ನಾಟಕ “ಪನಿಯರೆ ಆವಂದಿನ” ಪ್ರದರ್ಶಿಸಲಾಯಿತು.

Comments are closed.