ಕರಾವಳಿ

ಮಹಿಳಾ ದೌರ್ಜನ್ಯದ ವಿರುದ್ಧ ಮಂಗಳೂರಿನಲ್ಲಿ ಮೌನ ಪ್ರತಿಭಟನೆ

Pinterest LinkedIn Tumblr

ಮಂಗಳೂರು, ಜನವರಿ.31: ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆಯ ವತಿಯಿಂದ ಮಹಿಳಾ ದೌರ್ಜನ್ಯದ ವಿರುದ್ಧ ಕಪ್ಪು ಉಡುಪು ಧರಿಸಿ ಮಂಗಳೂರಿನ ಮಿನಿ ವಿಧಾನಸೌಧದ ರಸ್ತೆಯಲ್ಲಿ ಮೌನ ಪ್ರತಿಭಟನೆ ನಡೆಯಿತು.

ಅಂತಾರಾಷ್ಟ್ರೀಯ ಮಹಿಳಾ ದಿನದ ಹಿನ್ನೆಲೆಯಲ್ಲಿ ಗಾಂಧಿ ಹುತಾತ್ಮ ದಿನವಾದ ಸೋಮವಾರ ಹಮ್ಮಿಕೊಳ್ಳಲಾದ ಈ ಮೌನ ಪ್ರತಿಭಟನೆಗೆ  ಲೇಖಕಿ ಅಮೃತ ಆತ್ರಾಡಿ ಅವರು ಚಾಲನೆ ನೀಡಿದರು.ಜಾತಿ, ಧರ್ಮ, ಮತ, ದೇಶ, ಭಾಷೆ, ಕುಟುಂಬ, ಪ್ರಭುತ್ವ, ಯುದ್ಧ ಸೇರಿದಂತೆ ಯಾವುದೇ ಹೆಸರಿನಲ್ಲಿ ಮಹಿಳೆಯರ ಮೇಲೆ ನಡೆಯುವ ಹಿಂಸೆಯನ್ನು ವಿರೋಧಿಸಿ ವಿವಿಧ ಘೋಷಣಾ ಪತಾಕೆಯೊಂದಿಗೆ ಮಹಿಳೆಯರು ಮೌನ ಪ್ರತಿಭಟನೆ ನಡೆಸಿದರು.

ಡೀಡ್ಸ್ ಸಂಸ್ಥೆಯ ನಿರ್ದೇಶಕಿ ಮರ್ಲಿನ್ ಮಾಟಿಸ್ರ್, ಹಿತಾ ರಿಸೊರ್ಸ್ ಯೂನಿಟ್ನ ನಿರ್ದೇಶಕಿ ವಾಣಿ ಪೆರಿಯೋಡಿ, ಚಂದ್ರಕಲಾ ನಂದಾವರ, ರೋಹಿಣಿ, ಗುಲಾಬಿ ಬಿಳಿಮಲೆ, ಸುರೇಶ್ ಭಟ್ ಬಾಕ್ರಬೈಲು, ಕರ್ನಾಟಕ ಥಿಯೋ ಲಾಜಿಕಲ್ ಸೊಸೈಟಿಯ ಸದ್ಯರು ಹಾಗೂ ಮಹಿಳಾ ದೌರ್ಜನ್ಯ ವೇದಿಕೆಯ ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Comments are closed.