ಉಡುಪಿ: ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಅರೆಬರೆ ಕಾಮಗಾರಿ ನಡುವೆಯೇ ಟೋಲ್ ಸಂಗ್ರಹಕ್ಕೆ ಮುಂದಾಗಿರುವ ಬಗ್ಗೆ ಹಲವು ಪ್ರತಿಭಟನೆಗಳು, ಬಂದ್ ನಡೆದ ಬೆನ್ನಲ್ಲೆ ಉಡುಪಿ- ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ನೀಡಿದ ‘ದೇವರ ಸುದ್ದಿ’ ಇದೀಗ ಸಾರ್ವಜನಿಕರ ಇನ್ನಷ್ಟು ಆಕ್ರೋಷಕ್ಕೂ ಕಾರಣವಾಗಿದೆ.
ಇತ್ತೀಚೆಗೆ ಕೆಲವಾರು ವರ್ಷದಿಂದ ಆರಂಭಗೊಂಡ ಸುರತ್ಕಲ್- ಕುಂದಾಪುರ ರಾಷ್ಟ್ರೀಯ ಹೆದ್ದಾರಿ-66ರ ಚತುಷ್ಪತ ಕಾಮಗಾರಿ ಕೆಲಸ ಇನ್ನೂ ಅಪೂರ್ಣಗೊಂಡಿದ್ದು ಹೆಜಮಾಡಿ ಹಾಗೂ ಉಡುಪಿಯ ಸಾಸ್ತಾನ ಪ್ರದೇಶದಲ್ಲಿ ಇದೀಗಷ್ಟೇ ಟೋಲ್ ಸಂಗ್ರಹ ಆರಂಭವಾಗಿದೆ. ಈ ಬಗ್ಗೆ ಜನರು ಸಿಕ್ಕಾಪಟ್ಟೆ ಗರಂ ಆಗಿದ್ದು ಸಮಸ್ಯೆಗೆ ಸ್ಪಂಧಿಸದ ಜನಪ್ರತಿನಿಧಿಗಳು ಸೇರಿದಂತೆ ಅಧಿಕಾರಿಗಳ ವಿರುದ್ಧ ನೇರಾನೇರಾ ಆಕ್ರೋಶವನ್ನೂ ವ್ಯಕ್ತಪಡಿಸಿದ್ದಾರೆ. ಇದೇ ರೀತಿಯಾಗಿ ಉಡುಪಿ ಹಾಗೂ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರು ಕೂಡ ಈ ಟೋಲ್ ವಿಚಾರದಲ್ಲಿ ನೇರವಾಗಿ ಜನಾಕ್ರೋಶಕ್ಕೆ ಗುರಿಯಾಗಿದ್ದರು. ತಾವೇ ಆರಿಸಿ ಕಳಿಸಿದ ಸಂಸದೆ ಟೋಲ್ ವಿಚಾರದಲ್ಲಿ ಜನರ ಸಮಸ್ಯೆಗೆ ಪೂರಕವಾಗಿ ಕೆಲಸ ಮಾಡುತ್ತಿಲ್ಲ ಎಂಬ ಅಸಮಾಧಾನವನ್ನು ಅವರದ್ದೇ ಪಕ್ಷವಾದ ಬಿಜೆಪಿ ಕಾರ್ಯಕರ್ತರು ಹಾಗೂ ಜನಪ್ರತಿನಿಧಿಗಳನ್ನು ಸೇರಿಕೊಂಡು ಪಕ್ಷಾತೀತವಾಗಿ ಕರಂದ್ಲಾಜೆ ಬಗ್ಗೆ ವ್ಯಾಪಕ ಠೀಕೆಗಳು ವ್ಯಕ್ತವಾಗಿತ್ತು.
ಅಂತೆಯೇ ಸಾಸ್ತಾನ ಟೋಲ್ ಗೇಟ್ ಸಮಸ್ಯೆ ಕುರಿತಂತೆ ಆ ಭಾಗದ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿಯವರು ಸಾಮಾಜಿಕ ಜಾಲತಾಣವಾದ ವಾಟ್ಸಾಪ್ ಗ್ರೂಫ್ ರಚಿಸಿದ್ದರು. ಅದರಲ್ಲಿ ಮಾನ್ಯ ಶೋಭಾ ಕರಂದ್ಲಾಜೆ ಕೂಡ ಓರ್ವ ಸದಸ್ಯರಾಗಿದ್ದರು. ಕಳೆದ ನಾಲ್ಕೈದು ದಿನಗಳ ಹಿಂದೆ ಜನರ ವಿರೋಧದ ನಡುವೆಯೂ ಸಾಸ್ತಾನದಲ್ಲಿ ಟೋಲ್ ಸಂಗ್ರಹ ಆರಂಭವಾಗಿದ್ದು ಸಹಜವಾಗಿಯೇ ಎಲ್ಲರ ಆಕ್ರೋಶಕ್ಕೆ ಕಾರಣವಾಗಿತ್ತು, ಅದಕ್ಕೆ ಸಂಬಂಧಿಸಿದ ಹಾಗೆ ಆಕ್ರೋಶಿತ ನಾಗರೀಕರು ವಾಟ್ಸಾಪ್ ಹಾಗೂ ಫೇಸ್ ಬುಕ್ ಮೊದಲಾದ ಜಾಲತಾಣಗಳಲ್ಲಿ ತಮ್ಮ ಸಮಸ್ಯೆ ಹಾಗೂ ನೋವುಗಳನ್ನು ಹಂಚಿಕೊಂಡಿದ್ದರು. ಈತನ್ಮಧ್ಯೆ ಸಂಸದೆ ಸೇರಿದಂತೆ ಅಧಿಕಾರಿಗಳ ವಿರುದ್ಧವೂ ಠೀಕೆ-ಟಿಪ್ಪಣಿಗಳು ಜನರಿಂದ ಬಂದಿದ್ದವು. ಆದರೇ ಅದೇ ವಾಟ್ಸಾಪ್ ಗ್ರೂಫಿನಲ್ಲಿದ್ದರೆನ್ನಲಾದ ಸಂಸದೆ ಶೋಭಾ ಕರಂದ್ಲಾಜೆ ಅವರು ಈ ಬಗ್ಗೆ ಫುಲ್ ಗರಂ ಅಗಿದ್ದಲ್ಲದೇ ದೇವರ ಆಣೆ ಇಡುವ ಮೂಲಕ ಮಂಜುನಾಥನ ಮೊರೆ ಹೋಗಿದ್ದು ಇದೀಗಾ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಏನು ಹೇಳಿದ್ದಾರೆ ಸಂಸದೆ..?
‘ಧರ್ಮಸ್ಥಳ ಮಂಜುನಾಥ ನಿಮ್ಮ ಆರೋಪಕ್ಕೆ ಉತ್ತರಿಸುತ್ತಾನೆ, ಎಲ್ಲಾ ಮಾತುಗಳನ್ನು ಅವನಿಗೆ ಅರ್ಪಿಸಿದ್ದೇನೆ. ನನ್ನ ದೂರನ್ನು ಅವನಿಗೆ ಮಾತ್ರ ಹೇಳಬಹುದು’ ಎಂಬ ವಿವದಾತ್ಮಕ ಹೇಳಿಕೆಯನ್ನು ವಾಟ್ಸಾಪ್ ಗ್ರೂಫಿನಲ್ಲಿ ಹಾಕಿದ ಶೋಭಾ ಕರಂದ್ಲಾಜೆ ವಿರುದ್ದ ಈಗ ಎಲ್ಲರೂ ಆಕ್ರೋಷಗೊಂಡಿದ್ದಾರೆ. ಅಲ್ಲದೇ ಈ ಹೇಳಿಕೆ ಬಗ್ಗೆ ವಿರೋಧ ಪಕ್ಷಗಳಿಗಿಂತಲೂ ಬಿಜೆಪಿಯಿಂದಲೇ ಶೋಭಾ ವಿರುದ್ಧ ಹೆಚ್ಚು ಕೇಳಿಬರುತ್ತಿವೆ.
Comments are closed.