ಕುಂದಾಪುರ: ಬ್ರಹತ್ ಗಾತ್ರದ ಹೆಬ್ಬಾವೊಂದು ಗೇರು ಬೀಜ ಕಾರ್ಖಾನೆಯೊಂದರ ಶೆಡ್ ಒಳಕ್ಕೆ ಹೊಕ್ಕ ಘಟನೆ ತಾಲೂಕಿನ ತೆಕ್ಕಟ್ಟೆ ಸಮೀಪದ ಕೆದೂರು ಎಂಬಲ್ಲಿ ನಡೆದಿದೆ.
ಕೆದೂರಿನ ಗೇರುಬೀಜ ಕಾರ್ಖಾನೆಯೊಂದರ ಆವರಣದಲ್ಲಿದ್ದ ಶೆಡ್ ಒಳಕ್ಕೆ ಸೋಮವಾರ ಬೆಳಿಗ್ಗೆ ಈ ಹೆಬ್ಬಾವು ಪತ್ತೆಯಾಗಿದ್ದು ಸ್ಥಳೀಯರ ಸಹಾಯದಿಂದ ಹೆಬ್ಬಾವನ್ನು ಸೆರೆ ಹಿಡಿಯಲಯ್ತು. ಬಳಿಕ ಅರಣ್ಯ ಇಲಾಖೆಯವರು ಹೆಬ್ಬಾವನ್ನು ವಶಕ್ಕೆ ಪಡೆದಿದ್ದಾರೆ. ಹೆಬ್ಬಾವುಗಳು ಆಹಾರ ಅರಸಿ ನಾಡಿನತ್ತ ಬರುತ್ತಿರುವುದು ಸಾಮಾನ್ಯವಾಗಿದೆ. ಸದ್ಯ ಹೆಬ್ಬಾವನ್ನು ಮೀಸಲು ಅರಣ್ಯ ಪ್ರದೇಶಕ್ಕೆ ಸುರಕ್ಷಿತವಾಗಿ ಬಿಡಲಾಗಿದೆ ಎಂದು ಕುಂದಾಪುರ ಉಪವಲಯ ಅರಣ್ಯಾಧಿಕಾರಿ ದಿಲೀಪ್ ಹೇಳಿದ್ದಾರೆ.
Comments are closed.