ಕರಾವಳಿ

ಕುಂದಾಪುರ: ನದಿಯಲ್ಲಿ ಮುಳುಗಿ ವಿದ್ಯಾರ್ಥಿ ಸಾವು

Pinterest LinkedIn Tumblr

ಕುಂದಾಪುರ: ನದಿಯಲ್ಲಿ ಮುಳುಗಿ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಕುಂದಾಪುರದ ಸೌಡ ಎಂಬಲ್ಲಿ ನಡೆದಿದೆ.

ಕುಂದಾಪುರದ ಸೌಡ ನಿವಾಸಿ ಆದರ್ಶ ಮೊಗವೀರ (16) ಮೃತ ವಿದ್ಯಾರ್ಥಿಯಾಗಿದ್ದಾನೆ.

ಬಿದ್ಕಲ್ ಕಟ್ಟೆ ಸರಕಾರಿ ಶಾಲೆಯಲ್ಲಿ ಒಂಬತ್ತನೆಯ ತರಗತಿ ವಿದ್ಯಾರ್ಥಿಯಾಗಿದ್ದ ಆದರ್ಶ್ ಇಂದು ಶಾಲೆಗೆ ರಜೆಯಿದ್ದ ಕಾರಣ ಸ್ನೇಹಿತರ ಜೊತೆಗೆ ಈಜಲು ತೆರಳಿದ್ದ ವೇಳೆ ನಡೆದ ದುರ್ಘಟನೆ ನಡೆದಿದೆ.

ಕೋಟ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಈ ಬಗ್ಗೆ ಪ್ರಕರಣ ದಾಖಲಾಗಿದೆ.

Comments are closed.