ಮಂಗಳೂರು, ಡಿಸೆಂಬರ್ 03 : ಮಾಜಿ ವಿಶ್ವಸುಂದರಿ, ಖ್ಯಾತ ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ ಅವರು ತಮ್ಮ ಪುತ್ರಿಯೊಂದಿಗೆ ತಮ್ಮ ತವರು ಜಿಲ್ಲೆಯಾದ ದಕ್ಷಿಣ ಕನ್ನಡಕ್ಕೆ ದಿಢೀರ್ ಭೇಟಿ ನೀಡಿ ಗಮನ ಸೆಳೆದರು. ಶನಿವಾರ ಸಂಜೆ ಮಂಗಳೂರಿಗೆ ಆಗಮಿಸಿದ್ದ ಅವರು ಮದುವೆ ಔಟನ ಕೂಟ ಸಮಾರಂಭವೊಂದರಲ್ಲಿ ಭಾಗವಹಿಸಿದ್ದರು.
ತಮ್ಮ ಪುತ್ರಿ ಆರಾಧ್ಯ ಹಾಗೂ ತಾಯಿ ಬೃಂದಾ ರೈ ಜೊತೆ ನಗರಕ್ಕೆ ಆಗಮಿಸಿದ ಐಶ್ವರ್ಯ ರೈ ಅವರು,ನಗರದ ಕೊಡಿಯಾಲ್ ಬೈಲ್‌ನ ಟಿಎಂಎ ಪೈ ಸಭಾಂಗಣದಲ್ಲಿ ನಡೆದ ಮದುವೆ ಔತಣ ಕೂಟದಲ್ಲಿ ಪಾಲ್ಗೊಳ್ಳುವ ಮೂಲಕ ಎಲ್ಲರ ಗಮನ ಸೆಳೆದರು.ತಾಯಿ-ಮಗಳಿಬ್ಬರು ಕೆಂಪು ಬಣ್ಣದ ಗೌನ್‌ನಲ್ಲಿ ಕಂಗೊಳಿಸಿದರು.
ಬೃಂದಾ ರೈಯವರ ಸಹೋದರ ಸೋಂತಾಡಿ ಉದಯ ಕುಮಾರ್ ಶೆಟ್ಟಿಯವರ ಪುತ್ರ ಉಜ್ವಲ್ ಅವರ ಮದುವೆಯ ಔತಣಕೂಟದಲ್ಲಿ ಭಾಗವಹಿಸಿದ ಐಶ್ವರ್ಯ ರೈ ಕುಟುಂಬ ನೆರೆದವರೊಂದಿಗೆ ಆತ್ಮೀಯವಾಗಿ ಬೆರೆತರು.ಈ ಒಂದು ಸುಂದರ ಕ್ಷಣವನ್ನು ಬಂಧುಗಳು ಮೊಬೈಲ್‌ನಲ್ಲಿ ಸೆರೆ ಹಿಡಿಯುವ ಮೂಲಕ ಸಂಭ್ರಮ ಪಟ್ಟರು.
ತುಳುನಾಡಿನ ಸಾಂಪ್ರದಾಯಿಕ ಉಡುಗೆಯಲ್ಲಿ ಎಲ್ಲರ ಗಮನ ಸೆಳೆದ ತಾಯಿ-ಮಗಳಿಬ್ಬರು ಕುಟುಂಬ ಸದಸ್ಯರೊಂದಿಗೆ ತುಳುಭಾಷೆಯಲ್ಲಿ ಸಂಭಾಷಣೆ ನಡೆಸಿದರು. ಬಳಿಕ ತುಳುನಾಡಿನ ಪ್ರಸಿದ್ಧ ಖಾದ್ಯಗಳಾದ ಕೋರಿ ಸುಕ್ಕ, ಅಂಜಲ್ ಫ್ರೈ ಹಾಗೂ ಇನ್ನಿತರ ಖಾದ್ಯಗಳನ್ನು ಸವಿದರು.
Comments are closed.