ಮಂಗಳೂರು : ಮಂಗಳೂರಿನಲ್ಲಿ ನಡೆಯುತ್ತಿರುವ ಕರಾವಳಿ ಉತ್ಸವ ಪ್ರಯುಕ್ತ ಕಳೆದ ಎರಡು ದಿನಗಳಿಂದ ಲಾಲ್‌ಭಾಗ್‌ನ ಕರಾವಳಿ ಉತ್ಸವ ಮೈದಾನದಲ್ಲಿ ಹಾಗೂ ಕದ್ರಿ ಪಾರ್ಕ್‌ನ ವೇದಿಕೆಯಲ್ಲಿ ನಡೆಯುತ್ತಿರುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಕಲಾಭಿಮಾನಿಗಳ ಮನಸೂರೆಗೊಂಡವು.
ಕರಾವಳಿ ಉತ್ಸವ ಮೈದಾನದ ವೇದಿಕೆಯಲ್ಲಿ ಹಾಗೂ ಕದ್ರಿ ಪಾರ್ಕ್‌ನ ವೇದಿಕೆಯಲ್ಲಿ ಯಸಶ್ವಿನಿ ಉಳ್ಳಾಲ ಇವರಿಂದ ಉದಯರಾಗ,ದಾಸ ಕೀರ್ತನ, ಯೋಗರತ್ನ ಗೋಪಲಕೃಷ್ಣ ದೇಲಂಪಾಡಿ ಹಾಗೂ ತಂಡದಿಂದ ಯೋಗ ಪ್ರದರ್ಶನ ಮತ್ತು ಧ್ಯಾನ, ಸಾತ್ವಿಕ್ ತೇಜ ಕಲಾಕೇಂದ್ರ ಓಡಿಯೂರ್ ಇವರಿಂದ ಯಕ್ಷಗಾನ, ಶ್ರೀ ತೇಜಸ್ ಮಂಜುನಾಥ್ ಮತ್ತು ಶ್ರೀ ಪ್ರಣವ್ ಮಂಜುನಾಥ್, ಬೆಂಗಳೂರು ಇವರಿಂದ ವಾಯುಲಿನ್ ಜುಗಲ್‍ಬಂಧಿ, ಮಂಗಳೂರಿನ ಶ್ರೀಮತಿ ಕೀರ್ತನಾ ರಾವ್ ಮತ್ತು ತಂಡದಿಂದ ರಾಗ ಒಂದು ಭಾವ ಹಲವು ಕಾರ್ಯಕ್ರಮ, ಸ್ವರಶ್ರೀ ಸಂಗೀತ ವಿದ್ಯಾಲಯ, ಮಂಗಳೂರು ಇವರಿಂದ ಭಾವಗೀತೆ ಮತ್ತು ಜಾನಪದ ಗೀತೆಗಳು, ಸೌರಭ ಸಂಗೀತ ಕಲಾ ಪರಿಷತ್(ರಿ), ಯೆಯ್ಯಾಡಿ, ಮಂಗಳೂರು ಇವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು.
ಇಂದು ಸಂಜೆ ಡಾ: ವಿದ್ಯಾಭೂಷಣ ಮತ್ತು ತಂಡದಿಂದ ಭಕ್ತಿಗೀತೆಗಳು, ಸಂಜೆ ೭.೪೫ ರಿಂದ ೯ ಗಂಟೆವರೆಗೆ ನಾಟ್ಯಾಲಯ, ಉರ್ವ ತಂಡದಿಂದ ನೃತ್ಯ ರೂಪಕ ನಡೆಯಿತು.
Comments are closed.