ಕರಾವಳಿ

NSUI ಉಡುಪಿ ಜಿಲ್ಲಾ ಘಟಕದಿಂದ ವೃದ್ಧಾಶ್ರಮದಲ್ಲಿ ಕ್ರಿಸ್ಮಸ್ ಆಚರಣೆ

Pinterest LinkedIn Tumblr

ಉಡುಪಿ: ಎನ್.ಎಸ್. ಯು.ಐ ಉಡುಪಿ ಜಿಲ್ಲಾ ಘಟಕದ ವತಿಯಿಂದ ಕ್ರಿಸ್ಮಸ್ ಪ್ರಯುಕ್ತ ಅಶಕ್ತರು ಹಾಗೂ ಹಿರಿಯರೊಂದಿಗೆ ಕ್ರಿಸ್ಮಸ್ ಆಚರಣೆ ಕಾರ್ಯಕ್ರಮ ನಡೆಯಿತು. ಎನ್.ಎಸ್. ಯು.ಐ ಘಟಕದ ಸದಸ್ಯರು ಬ್ರಹ್ಮಾವರದ ಸ್ನೇಹಾಲಯ ವೃದ್ಧಾಶ್ರಮಕ್ಕೆ ತೆರಳಿ ಅಲ್ಲಿನ ವೃದ್ಧರೊಂದಿಗೆ ಕ್ರಿಸ್ಮಸ್ ಕ್ಯಾರಲ್ಸ್ ಹಾಡಿ ರಂಜಿಸಿದರು.

ಈ ವೇಳೆ ಕ್ರಿಸ್ಮಸ್ ಶುಭಾಶಯ ಹಂಚಿಕೊಂಡು ಮಾತನಾಡಿದ ಜಿಲ್ಲಾಧ್ಯಕ್ಷ ಕ್ರಿಸ್ಟನ್ ಡಿ’ಆಲ್ಮೇಡಾ ಅವರು ಕ್ರಿಸ್ಮಸ್ ಹಬ್ಬ ಶಾಂತಿ ಸಮಾಧಾನದ ಹಬ್ಬವಾಗಿದ್ದು, ಪರಸ್ಪರ ಹಂಚಿ ತಿನ್ನುವುದನ್ನು ಸೂಚಿಸುತ್ತದೆ. ದುಃಖದಲ್ಲಿ ಇರುವುರೊಂದಿಗೆ, ಕುಟುಂಬದ ಪ್ರೀತಿಯಿಂದ ವಂಚಿತರಾದವರೊಂದಿಗೆ ನಮ್ಮ ಸಂತೋಷವನ್ನು ಹಂಚಿಕೊಂಡಾಗ ಅದಕ್ಕಿಂತ ಮಿಗಿಲಾದ ಕ್ರಿಸ್ಮಸ್ ಆಚರಣೆ ಇನ್ನೊಂದಿಲ್ಲ ಎಂದರು.

ಬಳಿಕ ವೃದ್ಧಾಶ್ರಮದ ನಿವಾಸಿಗಳೊಂದಿಗೆ ಎನ್.ಎಸ್. ಯು.ಐ ಉಡುಪಿ ಜಿಲ್ಲಾ ಘಟಕದ ಎಲ್ಲಾ ಸದಸ್ಯರು ಜತೆಗೂಡಿ ಕ್ರಿಸ್ಮಸ್ ಸಹಬೋಜನ ಮಾಡಿ ಕ್ರಿಸ್ಮಸ್ ಸಂತೋಷವನ್ನು ಹಂಚಿಕೊಂಡರು.

ಈ ವೇಳೆ ಸದಸ್ಯರಾದ ಮಾರ್ಸ್, ಪ್ರಜ್ವಲ್, ಜೊವಿಟಾ, ಲೋಯ್ಡ್, ಟೋನಿ , ದೇವದಾಸ್ ಹಾಗೂ ಇತರರು ಉಪಸ್ಥಿತರಿದ್ದರು

Comments are closed.