ಕರಾವಳಿ

ಮೆಡಿಸಿನ್ಸ್ ನಕಲಿಯೋ ಅಥವಾ ಅಸಲಿಯೋ ಗುರುತಿಸುವ ಬಗೆ ತಿಳಿಯಿರಿ

Pinterest LinkedIn Tumblr

ಇಂದು ಮಾರುಕಟ್ಟೆಯಲ್ಲಿ ನಮಗೆ ಲಭ್ಯವಾಗುತ್ತಿರುವ ಪ್ರತಿ ವಸ್ತುವು ಕಲಬೆರಕೆಯಾಗುತ್ತಿದೆ ಎಂದು ಎಲ್ಲರಿಗೂ ಗೊತ್ತಿರುವುದೇ. ಒಂದೇ ಎರಡೇ ನೂರಾರು ವಸ್ತುಗಳು ಕಲಬೆರಕೆಯಾಗುತ್ತಾ ನಮಗೆ ಅನಾರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತಿವೆ. ಆಹಾರ ಪದಾರ್ಥಗಳು ಸೇರಿದಂತೆ, ನಮ್ಮ ರೋಗಗಳನ್ನು ಗುಣಪಡಿಸಬೇಕಿದ್ದ ಔಷಧಿಗಳು ಸಹ ಕಲಬೆರಕೆ ಆಗುತ್ತಿವೆ ಎಂದರೆ ಕಲಬೆರಕೆ ದಂಧೆ ಯಾವ ಪ್ರಮಾಣದಲ್ಲಿದೆ ಎಂದು ಊಹಿಸಬಹುದು.

ನಾವು ಬಳಸುತ್ತಿರುವ ಆಹಾರ ಪದಾರ್ಥಗಳಲ್ಲಿನ ಕಲಬೆರಕೆಯನ್ನು ಯಾವುದೋ ಒಂದು ವಿಧವಾಗಿ ಪತ್ತೆಹಚ್ಚಬಹುದು. ಅದಕ್ಕೆ ಅನೇಕ ಮಾರ್ಗಗಳಿವೆ. ಆದರೆ ಮೆಡಿಸಿನ್ಸ್ ವಿಷಯದಲ್ಲಿನ ಕಲಬೆರಕೆ ಅದನ್ನು ಗುರುತಿಸುವ ಬಗೆ ಹೇಗೆ? ಅವುಗಳ ಬಗ್ಗೆ ನಮಗೇನು ಗೊತ್ತೆಂದು? ಯಾವುದು ನಕಲಿ, ಯಾವುದು ಅಸಲಿ ಎಂದು ಕಂಡುಹಿಡಿಯುವುದು ಹೇಗೆ ಸಾಧ್ಯವಾಗುತ್ತದೆ? ಈ ಪ್ರಶ್ನೆಗಳಿಗೆ ಉತ್ತರವೇ ಫಾರ್ಮಾ ಸೆಕ್ಯೂರ್ ಮೆಡಿಸಿನ್ ವೆರಿಫಿಕೇಷನ್ ಟೂಲ್.

ನಾವು ಔಷಧಿ ಅಂಗಡಿಯಲ್ಲಿ ಕೊಳ್ಳುವ ಪ್ರತಿ ಟ್ಯಾಬ್ಲೆಟ್ ಮೇಲೆ 9 ಅಂಕೆಗಳ ಯೂನೀಕ್ ಐಡಿ ನಂಬರ್ ಕಡ್ಡಾಯವಾಗಿ ಇರುತ್ತದೆ. ಈ ನಂಬರ್‌ನ್ನು ಎಸ್ಎಂಎಸ್ ರೂಪದಲ್ಲಿ ಟೈಪಿಸಿ 9901099010 ಎಂಬ ಫೋನ್ ನಂಬರ್‌ಗೆ ಕಳುಹಿಸಬೇಕು. ಕೂಡಲೆ ನಮಗೆ ಇನ್ನೊಂದು ಮೇಸೇಜ್ ಬರುತ್ತದೆ. ಅದರಲ್ಲಿನ ವಿವರಗಳನ್ನು ಹೋಲಿಸಿ ನಾವು ಕೊಂಡ ಮೆಡಿಸಿನ್ ಅಸಲಿಯೇ ಅಥವಾ ನಕಲಿಯೇ ಎಂಬುದನ್ನು ತಿಳಿದುಕೊಳ್ಳಬಹುದು. ಒಂದು ವೇಳೆ ಎಸ್ಎಂಎಸ್‌ನಲ್ಲಿನ ಮಾಹಿತಿ, ನಾವು ಕೊಂಡ ಮೆಡಿಸಿನ್ ವಿವರಗಳು ಮ್ಯಾಚ್ ಆಗದಿದ್ದರೆ ಆ ಮೆಡಿಸಿನ್ ನಕಲಿ ಎಂದರ್ಥ. ಇದರಿಂದ ನಮಗೆ ಬಂದ ಎಸ್ಎಂಎಸ್‌ನ್ನು ಮೇಲೆ ತಿಳಿಸಿದ ನಂಬರ್‌ಗೆ ರಿಪ್ಲೈ ಮಾಡಿದರೂ ಸಾಕು, ಕೂಡಲೆ ದೂರು ದಾಖಲಾಗುತ್ತದೆ. ನಮಗೆ ನ್ಯಾಯ ಸಿಗುತ್ತದೆ.

https://verify.pharmasecure.com/india/ ಎಂಬ ವೆಬ್‌ಸೈಟ್‌ಗೆ ಭೇಟಿ ನೀಡಿ ನಾವು ಕೊಂಡ ಮೆಡಿಸಿನ್ ಅಸಲಿಯೇ, ನಕಲಿಯೇ ಎಂಬುದನ್ನು ಗುರುತಿಸಬಹುದು. ಅದೇಗೆಂದರೆ ಮೊದಲು ವೆಬ್‌ಸೈಟ್‌ಗೆ ಹೋಗಿ ನಮ್ಮ ಮೊಬೈಲ್ ನಂಬರ್, ಮೆಡಿಸಿನ್ ಪ್ಯಾಕ್ ಮೇಲಿರುವ 9 ಅಂಕೆಗಳ ಅಥೆಂಟಿಕೇಷನ್ ಕೋಡ್, ವರ್ಡ್ ವೆರಿಫಿಕೇಷನ್ ನಮೂದಿಸಬೇಕು. ಆ ಬಳಿಕ ನಮ್ಮ ಮೊಬೈಲ್‌ಗೆ ಓಟಿಪಿ ಬರುತ್ತದೆ. ಅದನ್ನು ಸಬ್‌ಮಿಟ್ ಮಾಡಿದರೆ ಅದು ಅಸಲಿಯೇ ಅಥವಾ ನಕಲಿಯೇ ಎಂಬುದು ಗೊತ್ತಾಗುತ್ತದೆ. ಇದರಿಂದ ನಾವು ಎಚ್ಚರಿಕೆ ವಹಿಸಬಹುದು. ಬಹಳಷ್ಟು ಮಂದಿಗೆ ಉಪಯುಕ್ತವಾಗಿರುವ ಈ ಮಾಹಿತಿಯನ್ನು ನಾಲ್ಕು ಮಂದಿಗೆ ತಿಳಿಸಿ. ಇದರಿಂದ ಫಾರ್ಮಾ ಕಂಪೆನಿಗಳು ಮಾಡುತ್ತಿರುವ ಮೋಸವನ್ನು ತಡೆಯಬಹುದು.

Comments are closed.