ಕರಾವಳಿ

ಡ್ರಾಮಾ ಜೂನಿಯರ್ ಸೆಕಂಡ್ ರನ್ನರ್ ಅಪ್ ಶ್ರಾವ್ಯಾ ಮನದಾಳದ ಮಾತು..

Pinterest LinkedIn Tumblr

ಕುಂದಾಪುರ: ಡಾಕ್ಟರ್ ಓದಬೇಕೆಂಬ ಆಸೆಯಿದೆ. ಹಾಗೆಯೇ ಕಲವಿದೆಯಾಗಿಯೂ ಗುರುತಿಸಿಕೊಳ್ಳಬೇಕೆಂಬ ಹಂಬಲವಿದೆ. ಸಿನಿಮಾ, ರಂಗಭೂಮಿ ಎರಡರಲ್ಲೂ ಗುರುತಿಸಿಕೊಳ್ಳಬೇಕು. ಮೊದಲು ಓದಿಗೆ ಪ್ರಾಮುಖ್ಯತೆ. ಬಿಡುವಿನ ಸಮಯದಲ್ಲಿ ಆಕ್ಟಿಂಗ್ ಮಾಡ್ತೇನೆ. ಇದು… ಡ್ರಾಮಾ ಜೂನಿಯರ್ಸ್ ಸ್ಪರ್ಧೆಯಲ್ಲಿ ಸೆಕಂಡ್ ರನ್ನರ್ ಅಪ್ ಆಗಿ ಸ್ಥಾನ ಪಡೆದ ಶ್ರಾವ್ಯಾ ಎಸ್.ಆಚಾರ್ಯ ಮನದಾಳದ ಮಾತು ಬಿಚ್ಚಿಟ್ಟಿದ್ದು ಹೀಗೆ.

ಕುಂದಾಪುರ ತಾಲೂಕಿನ ತೆಕ್ಕಟ್ಟೆ ಸಮೀಪದ ಕನ್ನುಕೆರೆ ಎಂಬಲ್ಲಿನ ಅಜ್ಜಿ ಮನೆಯಲ್ಲಿ ಮಕ್ಕಳೊಟ್ಟಿಗೆ ಮಕ್ಕಳಾಗಿ, ತರಬೇತಿ ನೀಡುವ ಶಿಕ್ಷಿಯಾಗಿ, ಸೆಲ್ಫಿ ಪೋಸ್ ಕೊಡುತ್ತಾ.. ಯಕ್ಷಗಾನದ ನೃತ್ಯ ಭಂಗಿಯ ನಡುವೆ ಖುಷಿಖುಷಿಯಾಗಿದ್ದಾಳೆ ಶ್ರಾವ್ಯಾ. ಡ್ರಾಮಾ ಜೂನಿಯರ್ ಮೂಲಕ ಮನೆಮಾತದ ಶ್ರಾವ್ಯಾಳಲ್ಲಿ ಹಮ್ಮುಬಿಮ್ಮು ಇರಲಿಲ್ಲ.

ಕುಂದಾಪುರ ತಾಲೂಕು, ಮರವಂತೆ ಗ್ರಾಮ ಶ್ರಾವ್ಯಾ ಹುಟ್ಟೂರು. ತಂದೆ ಎಂ.ಆರ್.ಶಂಕರ ಆಚಾರ್ಯ, ತಾಯಿ ಗೀತಾ ಎಸ್.ಆಚಾರ್ಯ.ತಂದೆ ಶಂಕರ ಆಚಾರ್ಯ ಬೆಂಗಳೂರು ಕತ್ರಿಗುಪ್ಪೆಯಲ್ಲಿ ಇಂಟೀರಿಯರ್ ಡಿಸೈನರ್. ತಾಯಿ ಗೀತಾ ಅವರಲ್ಲೂ ಕಲಾವಿದನಿದ್ದಾನೆ. ಬೆಂಗಳೂರು ಪ್ರಾರ್ಥನಾ ಎಜುಕೇಶನ್ ಸೊಟೈಟಿ ೬ನೇ ತರಗತಿ ವಿದ್ಯಾರ್ಥಿನಿ ಕೇವಲ ಅಭಿನಯದ ಮೂಲಕ ಎತ್ತರಕ್ಕೆ ಏರಿಲ್ಲಾ.. ಕಲಿಕೆಯಲ್ಲೂ ಫಸ್ಟ್! ಶಾಲಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲೂ ಶ್ರಾವ್ಯಾ ಮುಂಚೂಣಿಯಲ್ಲಿದ್ದಾಳೆ. ಕಳೆದ ಆರು ತಿಂಗಳಿಂದ ಡ್ರಾಮ ಜೂನಿಯರ್ ಸ್ಪರ್ಧೆಯಲ್ಲಿ ಸಂಪೂರ್ಣ ತೊಡಗಿಸಿಕೊಂಡ ಶ್ರಾವ್ಯಾ ತರಬೇತಿ ಬಿಡುವಿನ ಸಮಯದಲ್ಲೇ ಶಾಲಾ ವ್ಯಾಸಂಗ ಮಾಡುವ ಮೂಲಕ ಎಜುಕೇಶನ್ ಕಡೆಗೂ ಹೆಚ್ಚಿನ ಗಮನ ನೀಡಿದ್ದಾಳೆ.

ಡ್ಯಾಮಾ ಜೂನಿಯರ್ ಪ್ರವೇಶವೇ ಒಂದು ಆಕಸ್ಮಿಕ, 8 ನೂರಕ್ಕೂ ಮಿಕ್ಕ ಮಕ್ಕಳು ಸ್ಪರ್ಧೆಯಲ್ಲಿದ್ದು, ಪ್ರವೇಶ ಸಿಕ್ಕಿದ್ದೇ ಅದೃಷ್ಟ ಎನ್ನುವುದನ್ನು ನೆನಪಿಸಿಕೊಂಡ ಶ್ರಾವ್ಯಾ ನಾಟಕ ಸ್ಪರ್ಧೆ ಗೃಹ ಪ್ರವೇಶದ ಮೂಲಕ ಸ್ಪರ್ಧೆ ಕೊನೆ ಎಪಿಸೋಡು ತನಕ 20 ಎಪಿಸೋಡ್‌ನಲ್ಲಿ ಭಾಗವಿಸುವ ಅವಕಾಶ ಸಿಕ್ಕಿದ್ದು, ಒದಗಿಬಂದ ಅದೃಷ್ಟ ಎಂದ ತನ್ನ ಭಾಷೆಯಲ್ಲೇ ಶ್ರಾವ್ಯಾ ಕಣ್ಣರಳಿಸಿ ಹೇಳುತ್ತಾಳೆ. ಮುಖ್ಯಮಂತ್ರಿ ಚಂದ್ರ ಜೊತೆ ಅಭಿನಯಿಸಿದಗಳಿಗೆ ನನ್ನ ಜೀವನದ ಮಹತ್ತರ ಘಟ್ಟ ಎಂದು ಶ್ರಾವ್ಯಾ ಹೆಮ್ಮೆಯಿಂದ ಹೇಳಿಕೊಳ್ಳುತ್ತಾಳೆ. ಲಕ್ಞ್ಮೀ, ವಿಜಯ ರಾಘವೇಂದ್ರ ಚಂದ್ರು ಸಾರ್ ಎದುರು ಅಭಿನಯಿಸುವ ಅಕಾಶ ಸಿಕ್ಕಿದ್ದೇ ಅದೃಷ್ಟ ಎಂಬ ನಂಬಿಕೆ ಶ್ರಾವ್ಯಾಳದ್ದು. ಶ್ರಾವ್ಯಾಗೆ ಅಭಿನಯ ರಕ್ತಗತವಾಗಿ ಬಂದಿದೆ. ತಂದೆ ಯಕ್ಷಗಾನ ಕಲಾವಿದರಾಗಿದ್ದು, ತಂದೆ ಅನುಸರಿಸುವ ಮೂಲಕ ಅಭಿನಯ ಕ್ಷೇತ್ರಕ್ಕೆ ಕಾಲಿಟ್ಟಿದ್ದಾಳೆ. ಡ್ರಾಮಾ ಜೂನಿಯರ್ ಸ್ಪರ್ಧೆಯಲ್ಲಿ ಯಕ್ಷಗಾನ ಅಳವಡಿಕೆ ತನ್ನ ನೈಜ ಸಾಮರ್ಥ್ಯ ಹೊರಬರಲು ಸಹಕಾರಿಯಾಯಿತು ಎನ್ನುತ್ತಾಳೆ ಶ್ರಾವ್ಯ. ಕೃಷ್ಣಮೂರ್ತಿ ತುಂಗ ಈಕೆಯ ಯಕ್ಷಗುರು.

ಓದಿನಲ್ಲೂ ಮುಂದಿರುವ ಶ್ರಾವ್ಯಾ ಶಿಕ್ಷಕರ ಮೆಚ್ಚಿನ ವಿದ್ಯಾರ್ಥಿ ಕೂಡಾ ಹೌದು. ಡ್ರಾಮ ಜೂನಿಯರ್ ಸ್ಪರ್ಧೆಯಲ್ಲಿ ಆರು ತಿಂಗಳು ಶಾಲೆಯಿಂದ ಹೊರಗುಳಿದರೂ ಈಕೆಯ ವಿದ್ಯಾಭ್ಯಾಸಕ್ಕೆ ತೊಂದರೆ ಆಗಲಿಲ್ಲ. ಮಂಜುನಾಥ್, ಗಣಪತಿ ಪ್ರಭು, ಸಹಕಲಾವಿದರು ಸಹಾಕರವೇ ಯಶಸ್ವಿಗೆ ಕಾರಣ ಅನ್ನುತ್ತಾರೆ ಶ್ರಾವ್ಯ.

ಮಗಳು ಮೊದಲ ಓದಿಗೆ ಪ್ರಾಮುಖ್ಯತೆ ನೀಡಬೇಕು. ಎಜುಕೇಶನ್ ಮುಗಿಸಿ, ನಂತರ ಅವಳು ಅಭಿನಯವನ್ನೇ ವೃತ್ತಿಯನ್ನಾಗಲೀ ಹವ್ಯಾಸವಗಿ ಆಗಲಿ ಸ್ವೀಕರಿಸಲು ನಮ್ಮ ಸಂಪೂರ್ಣ ಸಹಕಾರವಿದೆ. ವಿದ್ಯಾಭ್ಯಾಸ ಮೊಟಕು ಮಾಡಿಕೊಂಡು ಕಲೆಯಲ್ಲಿ ಮುಂದುವರಿಯಲು ಅವಕಾಶ ನೀಡೋದಿಲ್ಲ. ಮೊದಲು ಶ್ರಾವ್ಯಾ ಜೀವನ ಹಂತಕ್ಕೆ ಬಂದ ನಂತರದ ಆಯ್ಕೆ ಆಕೆಗೆ ಬಿಟ್ಟಿದ್ದು. ಮಗಳ ಸಾಧನೆ ನಮಗೆ ಹೆಮ್ಮೆ ಎನ್ನುಸುವ ಜತೆ ಖುಷಿಕೊಟ್ಟಿದೆ.
– ಎಂ. ಆರ್.ಶಂಕರ ಆಚಾರ್ಯ, ಗೀತಾ ಎಸ್.ಆಚಾರ್ಯ (ಶ್ರಾವ್ಯಾ ಪಾಲಕರು)

Comments are closed.