ಮಂಗಳೂರು : ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಜಗದೀಶ್ ಶೇಣವ ಅವರು ಕೋಮು ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ದಕ್ಷಿಣ ಕನ್ನಡ ಯುವ ಜನತಾ ದಳದ ವತಿಯಿಂದ ದ.ಕ ಜಿಲ್ಲಾಧಿಕಾರಿಗಳಿಗೆ ಮತ್ತು ಮಂಗಳೂರು ನಗರ ಪೋಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ದಕ್ಷಿಣ ಕನ್ನಡ ಯುವ ಜನತಾದಳದ ಅಧ್ಯಕರಾದ ಅಕ್ಷಿತ್ ಸುವರ್ಣ ರವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಗಿದ್ದು, ಯುವ ಜನತಾದಳದ ಸಂಘಟನಾ ಕಾರ್ಯದರ್ಶಿ ಫೈಝಲ್ ರಹಮಾನ್,ಕಾರ್ಯದರ್ಶಿ ಭರತ್ ಜಿ ಹೆಗ್ಡೆ, ಮುಹಮ್ಮದ್ ಫೈಝಲ್,ಸುರತ್ಕಲ್ ಬ್ಲಾಕ್ ಅಧ್ಯಕ್ಷರು ರತೀಶ್ ಕರ್ಕೇರ ಮತ್ತು ಹಿತೇಶ್ ರೈ ಮತ್ತು ಸಯ್ಯದ್ ಇಸ್ಮಾಯಿಲ್ ಈ ವೇಳೆ ಉಪಸ್ತಿತರಿದ್ದರು.
Comments are closed.