ಕರಾವಳಿ

ಆರ್‌ಎಸ್‌ಎಸ್ ಮುಖಂಡ ಡಾ.ಕಲ್ಲಡ್ಕ ಪ್ರಭಾಕರ್ ಭಟ್ ಅವರಿಗೆ ಫೇಸ್‌ಬುಕ್‌ ಮೂಲಕ ಬೆದರಿಕೆ

Pinterest LinkedIn Tumblr

‘ಟ್ರೂ ಮೀಡಿಯಾ ನೆಟ್‌ವರ್ಕ್’ ಗ್ರೂಪಲ್ಲಿ ಫೇಸ್‌ಬುಕ್‌ನಲ್ಲಿ ಅವಮಾನಕಾರಿ ಪೋಸ್ಟ್ – ಬೆದರಿಕೆ

ಮಂಗಳೂರು, ಜನವರಿ.30: ಆರ್‌ಎಸ್‌ಎಸ್ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಫೇಸ್‌ಬುಕ್‌ನಲ್ಲಿ ಅವಮಾನಕಾರಿ ಪೋಸ್ಟ್ ಹಾಕಿದ್ದೂ ಅಲ್ಲದೆ ಬಹಿರಂಗವಾಗಿ ಬೆದರಿಕೆಯೊಡ್ಡಿರುವ ಘಟನೆ ಬೆಳಕಿಗೆ ಬಂದಿದೆ. ‘ಟ್ರು ಮೀಡಿಯಾ ನೆಟ್‌ವರ್ಕ್’ ಎಂಬ ಪೇಜ್‌ನಲ್ಲಿ ಪ್ರಭಾಕರ್ ಭಟ್ ಫೋಟೋ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿರುವುದು ಸಂಘ ಪರಿವಾರದ ಆಕ್ರೋಶಕ್ಕೆ ಕಾರಣವಾಗಿದ್ದು ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಶಾಂತಿ ಹದಗೆಡಲು ಯತ್ನಿಸುತ್ತಿರುವ ಕಿಡಿಗೇಡಿಗಳ ವಿರುದ್ಧ ಪೊಲೀಸರು ಸ್ವಯಂಪ್ರೇರಿತವಾಗಿ ಕ್ರಮ ಕೈಗೊಳ್ಳಬೇಕು ಎಂದು ಸಂಘಟನೆಗಳು ಒತ್ತಾಯಿಸಿವೆ.

‘ಕಲ್ಲಡ್ಕದಲ್ಲಿ ಮುದುಕ ಭಯೋತ್ಪಾದಕ ಹಿಜಿಡಾ ಭಟ್ಟನಿಂದ ಪ್ಯಾಂಟ್ ಹಾಕಿ ಟ್ರೈನಿಂಗ್’, ‘ಮಂಗನಿಂದ ಮಾನವ ಸಾಬೀತುಪಡಿಸಿದ ಭಟ್ಟ’, ‘ಅಯ್ಯಯ್ಯೋ ಭಯೋತ್ಪಾದಕ ಮುದುಕ ಭಟ್ಟಾ’ ಎಂದು ಕಲ್ಲಡ್ಕ ಭಟ್‌ರ ಫೋಟೋವನ್ನು ಫೇಸ್‌ಬುಕ್ ಗ್ರೂಪ್‌ನಲ್ಲಿ ಹಾಕಿ ನಿಂದನೆ ಮಾಡಲಾಗಿದೆ. ಭಟ್ ಅವರ ಯೋಗಾಸನ, ದಂಡ ವ್ಯಾಯಾಮದ ಫೋಟೋ ಜತೆ ನಾಯಿ ಫೋಟೋ ಸೇರಿಸಿ ಅವಮಾನ ಮಾಡಲಾಗಿದೆ.

ಟ್ರೂ ಮೀಡಿಯಾ ನೆಟ್‌ವರ್ಕ್ ಪೇಜ್ ಅಡ್ಮಿನ್‌ನಿಂದ ಜಿಲ್ಲೆಯಲ್ಲಿ ಮತ್ತೆ ಶಾಂತಿ ಕದಡುವ ಯತ್ನ ನಡೆದಿದ್ದು ಆತನನ್ನು ಬಂಧಿಸಿ ಕಾನೂನು ರೀತಿಯಲ್ಲಿ ಶಿಕ್ಷಿಸಬೇಕು ಎಂದು ಸಂಘಟನೆಗಳ ಮುಖಂಡರು ಆಗ್ರಹಿಸಿದ್ದಾರೆ.

ನಿನ್ನೆ ಕಲ್ಲಡ್ಕದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಭಾಕ ಭಟ್ ಅವರು ಆರ್‌ಎಸ್‌ಎಸ್‌ನ ನೂತನ ಸಮವಸ್ತ್ರದೊಂದಿಗೆ ಗಣವೇಷಧಾರಿಯಾಗಿ ಕಾಣುತ್ತಿದ್ದರು. ಈ ಹಿಂದೆಯೂ ‘ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್‌ಗೆ ಇಂದು ಕೊನೆಯ ದಿನ’ ಎಂದು ‘ಮಂಗಳೂರು ಮುಸ್ಲಿಮ್ಸ್’ ಹೆಸರಿನಲ್ಲಿರುವ ಫೇಸ್‌ಬುಕ್ ಪೇಜ್‌ನಲ್ಲಿ ಸ್ಟೇಟಸ್ ಹಾಕಲಾಗಿತ್ತು.

Comments are closed.