ಕರಾವಳಿ

ನಾರಿ ರೂವಾರಿ ಸ್ಪರ್ಧೆಯಲ್ಲಿ ಸುರತ್ಕಲ್ ಬಂಟರ ಸಂಘಕ್ಕೆ ಪ್ರಥಮ ಸ್ಥಾನ : 50 ಸಾವಿರ ರೂ. ನಗದು ಬಹುಮಾನ

Pinterest LinkedIn Tumblr

ಸುರತ್ಕಲ್: ನಾರಿ ರೂವಾರಿ ಕಾರ್ಯಕ್ರಮದಂ ಅಂಗವಾಗಿ ಪಡುಬಿದ್ರಿ ಬಂಟರ ಸಂಘದ ಮಹಿಳಾ ವಿಭಾಗವು ಪಡುಬಿದ್ರಿ ಬಂಟರ ಭವನದಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಸುರತ್ಕಲ್ ಬಂಟರ ಸಂಘದ ಮಹಿಳಾ ವೇದಿಕೆಯು 50 ಸಾವಿರ ರೂ. ನಗದು ಶಾಶ್ವತ ಫಲಕದೊಂದಿಗೆ ಕೂಟದಲ್ಲಿ ಪ್ರಥಮ ಸ್ಥಾನ ಗೆದ್ದುಕೊಂಡಿದೆ.

ಪಡುಬಿದ್ರೆ ಬಂಟರ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ಅಕ್ಷತಾ ಎಸ್. ಶೆಟ್ಟಿ, ಬಂಟರ ಮಾತೃ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ಡಾ. ಆಶಾಜ್ಯೋತಿ ರೈ ಪ್ರಶಸ್ತಿಯನ್ನು ಸುರತ್ಕಲ್ ಬಂಟರ ಮಹಿಳಾ ವೇದಿಕೆಯ ಅಧ್ಯಕ್ಷೆ ಚಂದ್ರಕಲಾ ಬಿ.ಶೆಟ್ಟಿ ಅವರಿಗೆ ಹಸ್ತಾಂತರಿಸಿದರು.

ಪದಾಧಿಕಾರಿಗಳಾದ ಬೇಬಿ ಶೆಟ್ಟಿ ಕುಡುಂಬೂರು, ವೀಣಾ ಶೆಟ್ಟಿ, ವಿಜಯಭಾರತಿ ಶೆಟ್ಟಿ , ಚಿತ್ರಾ ಜೆ. ಶೆಟ್ಟಿ, ಭಾರತಿ ಜಿ. ಶೆಟ್ಟಿ, ತಂಡದ ನಿರ್ದೇಶಕಿ ರಾಜೇಶ್ವರಿ ಡಿ. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

20 ನಿಮಿಷಗಳ ಕಾಲಾವಧಿಯ ಸ್ಪರ್ಧೆಯಲ್ಲಿ ಸುರತ್ಕಲ್ ಬಂಟರ ಸಂಘದ ಮಹಿಳಾ ತಂಡದಲ್ಲಿ ಮೂರು ತಿಂಗಳ ಮಗುವಿನಿಂದ ಹಿಡಿದು 70 ರ ಹರೆಯದವರೆಗೆ ಸುಮಾರು ೬೫ ಮಂದಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಹೆಣ್ಣು ಶಕ್ತಿ ಸ್ವರೂಪಿಣಿ, ಪ್ರಕೃತಿಯ ಪ್ರತಿರೂಪ, ಪ್ರಕೃತಿಯ ಪಂಚ ತತ್ವಗಳು ಅವಳೊಳಗೆ ಅಡಕವಾಗಿವೆ ಎನುವುದನ್ನು ನೃತ್ಯ, ಸಮೂಹ ಗಾಯನ, ಅಭಿನಯ, ಪ್ರಹಸನಗಳ ಮೂಲಕ ಒಂದೊಂದಾಗಿ ರಂಗದ ಮೇಲೆ ನಿರೂಪಿಸುತ್ತಾ ಸಾಗಿದ ಪ್ರದರ್ಶನ, ಸುಂದರವಾದ ರಂಗ ಸಜ್ಜಿಕೆ, ಬೆಳಕಿನ ವಿನ್ಯಾಸದೊಂದಿಗೆ ಕಾರ್ಯಕ್ರಮ ಮೂಡಿಬಂದಿತ್ತು. ರಾಜೇಶ್ವರಿ ಡಿ ಶೆಟ್ಟಿ ಅವರ ಕಲ್ಪನೆ, ಸಾಹಿತ್ಯ ನಿರ್ದೇಶನದಲ್ಲಿ ಮೂಡಿ ಬಂದ ಪ್ರಹಸನ ಪ್ರಥಮ ಸ್ಥಾನ ಗೆದ್ದುಕೊಂಡಿತು. ಕೂಟದಲ್ಲಿ ಶ್ರೇಷ್ಟ ನಟನೆ ಪ್ರಶಸ್ತಿಯನ್ನು ಸುರತ್ಕಲ್ ಬಂಟರ ಮಹಿಳಾ ವೇದಿಕೆಯ ಸದಸೆ ಪ್ರತಿಷ್ಠಾ ರೈ ಚೇಳ್ಯಾರ್, ದಾಕ್ಷಾಯಿನಿ ಪಾತ್ರದ ನಿರ್ವಹಣೆಗಾಗಿ ಪಡೆದುಕೊಂಡರು.

ಈ ಕೂಟದಲ್ಲಿ ಒಟ್ಟು 12 ತಂಡಗಳು ಭಾಗವಹಿಸಿತ್ತು. ತೀರ್ಪುಗಾರರಾಗಿ ಕೃಷ್ಣಮೂರ್ತಿ ಕವತ್ತಾರು, ಗುರುಪ್ರಸಾದ್ ಹೆಗ್ಡೆ, ಡಾ. ನಿಕೇತನ ಉಡುಪಿ ಭಾಗವಹಿಸಿದ್ದರು.

Comments are closed.