ಉಡುಪಿ: ಇನ್ನು ಮುಂದೆ ಹೆಲ್ಮೆಟ್ ಧರಿಸದೆ ಅಪಘಾತವಾದಲ್ಲಿ ಅವರಿಗೆ ಸಿಗುವ ಇನ್ಸೂರೆನ್ಸ್ ಪರಿಹಾರ ನೀಡಲಾಗುವುದಿಲ್ಲ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಲತಾ ಹೇಳಿದರು.
ಅವರು ಉಡುಪಿ ಕುಂಜಿಬೆಟ್ಟಿನ ಎಂ.ಜಿ.ಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆದ ಉತ್ತಮ ಗುಣಮಟ್ಟದ ಹೆಲ್ಮೆಟ್ ಧರಿಸುವ ಬಗ್ಗೆ ಜಾಗೃತಿ ಆಂದೋಲನದ ಸಭಾ ಕಾರ್ಯಕ್ರಮ ಉದ್ಘಾಟನೆಯನ್ನು ನಡೆಸಿ ಮಾತನಾಡಿದರು.
ಇಂದಿನ ದಿನಗಳಲ್ಲಿ ಪ್ರಜ್ಞಾವಂತೆರೇ ತಮ್ಮ ಜೀವನದ ಬಗ್ಗೆ ಯೋಜಿಸದೆ ಶೋಕಿಗಾಗಿ ಹೆಲ್ಮೆಟ್ ಧರಿಸದೆ ದ್ವಿಚಕ್ರವಾಹನವನ್ನು ಓಡಿಸುತ್ತಾರೆ. ದೇಶದಲ್ಲಿ ವರ್ಷದಲ್ಲಿ 900 ಜನ ಹೆಲ್ಮೆಟ್ ಧರಿಸದೇ ಅಪಘಾತದಲ್ಲಿ ಸಾವನ್ನಪ್ಪುತ್ತಿದ್ದಾರೆ. ಪೋಲಿಸರ ಭಯಕ್ಕೆ ಹೆಲ್ಮೆಟನ್ನು ಧರಿಸದೆ ತಮ್ಮ ಜೀವದ ರಕ್ಷಣೆಗಾಗಿ ಧರಿಸಬೇಕು. ಒಂದು ವೇಳೆ ಅಪಘಾತವಾದಲ್ಲಿ ಹೆಲ್ಮೆಟ್ ಧರಿಸದೆ ಅವಘಡ ಸಂಭವಿಸಿದರೆ ಇನ್ಸೂರೆನ್ಸ್‌ನ್ನು ನೀಡಲಾಗುವುದಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರ್‌ಚಂದ್ರ, ಎಂ.ಜಿ.ಎಂ ಕಾಲೇಜಿನ ಪ್ರಾಂಶುಪಾಲರು ಡಾ.ಸಂಧ್ಯಾ ನಂಬಿಯಾರ್, ಉಡುಪಿ ವಕೀಲರ ಸಂಘದ ಅಧ್ಯಕ್ಷ ಹೆಚ್ ರತ್ನಾಕರ್ ಶೆಟ್ಟಿ, ಮಣಿಪಾಲ ಆಟೋ ಕ್ಲಬ್‌ನ ಅಧ್ಯಕ್ಷ ನಿಶಾಂತ್ ಬಿ.ಭಟ್, ಮಾನವ ಹಕ್ಕುಗಳ ಮತ್ತು ಅಹವಾಲುಗಳ ಅಧ್ಯಕ್ಷ ಸುಲ್ತಾನ ಇಕ್ಖಾಲ್, ಸಂಪನ್ಮೂಲ ವ್ಯಕ್ತಿ ನ್ಯರೋಸರ್ಜನ್ ಡಾ. ಎ.ರಾಜಾ ಉಪಸ್ಥಿತರಿದ್ದರು.
ಜಾಥಾ ಉದ್ಘಾಟನೆಯನ್ನು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ವೆಂಕಟೇಶ್ ನಾಯ್ಕ್ ನೆರವೇರಿಸಿದರು. ಈ ಸಂದರ್ಭ ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ನಣ ನಿಂಬರ್ಗಿ ಉಪಸ್ಥಿತರಿದ್ದರು.
Comments are closed.