ಕರಾವಳಿ

ಚಂದ್ರಗ್ರಹಣ ವೀಕ್ಷಣೆಗೆ ಉಡುಪಿಯಲ್ಲಿ ಮುಗಿಬಿದ್ದ ಜನತೆ: ಮಧ್ವ ಸರೋವರದಲ್ಲಿ ತೀರ್ಥಸ್ನಾನ

Pinterest LinkedIn Tumblr

ಉಡುಪಿ: ಚಂದ್ರಗ್ರಹಣ ಹಿನ್ನಲೆ ಉಡುಪಿಯಲ್ಲಿ ಚಂದ್ರಗ್ರಹಣ ವೀಕ್ಷಣೆಗೆ ಜನರು ಮುಗಿಬಿದ್ದರು. ಪಿಪಿಸಿ ಕಾಲೇಜಿನ ಖಗೋಳಶಾಸ್ರ‍್ರ ವಿಭಾಗದಿಂದ ಚಂದ್ರಗ್ರಹಣ ವೀಕ್ಷಣೆ ವ್ಯವಸ್ಥೆ ಮಾಡಲಾಗಿತ್ತು. ಟೆಲಿಸ್ಕೋಪ್ ಮೂಲಕ ಚಂದ್ರನ ವೀಕ್ಷಣೆಗೆ ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಜಮಾಯಿಸಿದ್ದರು.

ಮಧ್ವ ಸರೋವರದಲ್ಲಿ ತೀರ್ಥಸ್ನಾನ ಮಾಡುವ ಮೂಲಕ ಭಕ್ತರು ಪುಣ್ಯ ಸ್ನಾನ ಮಾಡಿದರು. ಉಡುಪಿ ಕೃಷ್ಣಮಠದ ಮಧ್ವ ಸರೋವರದಲ್ಲಿ ಪಲಿಮಾರು ಸ್ವಾಮೀಜಿ, ಕೃಷ್ಣಾಪುರ ಶ್ರೀ, ಪೇಜಾವರ- ಅದಮಾರು ಕಿರಿಯಶ್ರೀಗಳು ತೀರ್ಥಸ್ನಾನ ಮಾಡಿದರು. ವಿವಿಧ ದೇವಸ್ಥಾನಗಳಲ್ಲಿ ಪೂಜೆ ಪುನಸ್ಕಾರ ನಡೆಯಿತು.

Comments are closed.