ಮಗುವು ಎಷ್ಟೇ ಮುದ್ದಾಗಿರಬಹುದು, ಅದನ್ನ ನೀವು ಎಷ್ಟೇ ಪ್ರೀತಿಸಬಹುದು, ಆದರೆ ಅದಕ್ಕೆ ಆಗಷ್ಟೇ ಹಲ್ಲು ಬೆಳೆಯಲು ಶುರುವಾಗಿ ಕಡಿಯಲು ಶುರು ಮಾಡಿತೆಂದರೆ, ಆ ನೋವು ಯಾರಿಗೂ ಬೇಡ. ಇದು ಕೇವಲ ನೋವಷ್ಟೇ ಅಲ್ಲದೆ, ಹತಾಶೆ ಮತ್ತು ಅಸಹಾಯಕ ಭಾವನೆ ಉಂಟು ಮಾಡುತ್ತದೆ. ನೀವು ಕೂಡ ಈ ಕಷ್ಟವನ್ನ ಎದುರಿಸುತ್ತಿದ್ದರೆ, ಇಲ್ಲಿ ಒಬ್ಬಳು ಅಮ್ಮ ನಿಮ್ಮ ಜೀವನ ಸುಲಭವಾಗಿಸಲು ಒಂದು ಸೂಪರ್ ಟ್ರಿಕ್ ಅನ್ನು ಹೇಳಿಕೊಟ್ಟಿದ್ದಾಳೆ. ಇದನ್ನ ನೋಡಿದ ಮೇಲೆ ನೀವೂ ಇದನ್ನ ಪಕ್ಕಾ ಪಾಲಿಸುತ್ತೀರ!
ಎಮಿಲಿಯಾ ಜ್ಯಾಕ್ಸನ್ ಎಂಬ ತಾಯಿ ಒಬ್ಬಳು ತನ್ನ ಫೇಸ್ಬುಕ್ ಖಾತೆಯಲ್ಲಿ ಈ ಟ್ರಿಕ್ ಹಂಚಿಕೊಂಡಿದ್ದು, ಈಗ ಈ ಟ್ರಿಕ್ ವಿಶ್ವದೆಲ್ಲೆಡೆ ಅಮ್ಮಂದಿರು ಬಳಸುತ್ತಿದ್ದಾರೆ. ಈ ಪೋಸ್ಟಿಗೆ 18000 ಮೆಚ್ಚುಗೆಗೆಳು, ಸುಮಾರು 38000 ಪ್ರತಿಕ್ರಿಯೆಗಳು ಮತ್ತು 1 ಲಕ್ಷಕ್ಕೂ ಅಧಿಕ ಶೇರ್ ಲಭಿಸಿವೆ! ಅಂದಹಾಗೆ ಈ ಟ್ರಿಕ್ ಅಲ್ಲಿ ಬಳಕೆ ಆಗಿರುವುದು ಕೇವಲ ಎರಡೇ ವಸ್ತುಗಳು – ಅದರಲ್ಲೂ ಒಂದು ಪೆಸಿಫಯರ್ (ನಿಪ್ಪಲ್) ಮತ್ತು ಇನ್ನೊಂದು ನೀರು!
ಆ ವೈರಲ್ ಆಗಿರುವ ಪೋಸ್ಟ್ ಅನ್ನು ನೀವು ಈ ಕೆಳಗೆ ನೋಡಬಹುದು. ಇದರಲ್ಲಿ ಆಕೆಯು ಈ ಟ್ರಿಕ್ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನ ತಿಳಿಸಿದ್ದಾಳೆ. ನಿಮ್ಮ ಪೆಸಿಫಯರ್ (ನಿಪ್ಪಲ್) ಅಲ್ಲಿ ನೀರು ತುಂಬಿಸಿ, ಫ್ರಿಡ್ಜ್ ಅಲ್ಲಿ ಇಟ್ಟುಬಿಡಿ. ಫ್ರೀಜರ್ ಅಲ್ಲಿ ಒಂದೆರೆಡು ಗಂಟೆಗಳ ಕಾಲ ಈ ನಿಪ್ಪಲ್ ಅನ್ನು ಇಟ್ಟು ಅನಂತರ ಹೊರತೆಗೆದು ಮಗುವಿಗೆ ನೀಡಿ. ಮಗುವು ಇದನ್ನ ಕಚ್ಚುತ್ತದೆ. ಇದರಿಂದ ಅಮ್ಮಂದಿರಿಗೆ ಕಡಿತದಿಂದ ಮುಕ್ತಿ ಸಿಗುತ್ತದೆ.
ಕೆಲವು ಜನರು ಈ ಪೋಸ್ಟ್ ಅನ್ನು ನೋಡಿದ ಮೇಲೆ, “ಇದರಿಂದ ಮಗುವು ನೀರನ್ನು ಸೇವಿಸಿಬಿಡುವುದಿಲ್ಲವೇ, ಅದು ಮಗುವಿಗೆ ತೊಂದರೆ ಮಾಡುತ್ತದೆ ಅಲ್ಲವೇ?” ಎಂಬ ಕಳಕಳಿ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಉತ್ತರವಾಗಿ ಎಮಿಲಿಯಾ ತನ್ನ ಫೇಸ್ಬುಕ್ ಪೋಸ್ಟ್ ಅನ್ನು ಎಡಿಟ್ ಮಾಡಿ “ನಿಪ್ಪಲ್ ಅಲ್ಲಿ ಯಾವುದೇ ರೀತಿಯ ತೂತುಗಳು ಇಲ್ಲದಿರುವುದರಿಂದ ಮಗುವಿನ ಬಾಯಿಯೊಳಗೆ ನೀರು ಹೋಗಲು ಸಾಧ್ಯವೇ ಇಲ್ಲ” ಎಂಬ ಸಮರ್ಥ ಉತ್ತರ ನೀಡಿದ್ದಾರೆ.

Mom hack:
If your babies are teething,mamas put water in your soothie,and then put it in the freezer for a couple hours.
Seriously a life saver for teething mamas. He was so content with his cold binky ?
EDIT: Since there are so many people freaking out thinking my little man is drinking the water,I want to show you that there is NO hole in this binky. And absolutely NO way for the baby to get the water ??
https://www.facebook.com/emelia.jackson.92/videos/733945140134491/
Comments are closed.