ಕುಂದಾಪುರ: ಕಳೆದ ಹದಿನೇಳು ವರ್ಷದಿಂದ ತಲೆ ಮರೆಸಿಕೊಂಡಿದ್ದು ಶ್ರೀಗಂಧ ಕಳ್ಳನನ್ನು ಚಿಕ್ಕಮಗಳೂರು ಜಿಲ್ಲೆ, ಸಿಂಧುಹಳ್ಳಿಯಲ್ಲಿ ಬಂಧಿಸಲಾಗಿದೆ.
1999-2000ದಲ್ಲಿ ಶ್ರೀ ಗಂಧ ಕಳವು ಮಾಡಿದ್ದ ಶೃಂಗೇರಿ ತಾಲೂಕು ಸಂಧುಹಳ್ಳಿ ನಿವಾಸಿ ಅಶೋಕ್ (40) ಬಂಧಿತ ವ್ಯಕ್ತಿ.
ಶ್ರೀಗಂಧ ಕಳವು ನಂತರ ಪೊಲೀಸರು ಬಂಧಿಸಿದ್ದು, ಆರೋಪಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಜಾಮೀನು ಮೇಲೆ ಹೊರಕ್ಕೆ ಬಂದ ಅಶೋಕ್ ಮತ್ತೆ ನ್ಯಾಯಾಲಯಕ್ಕೆ ಹಾಜರಾಗಿರದೆ ಬಾಡಿ ವಾರೆಂಟ್ ಜಾರಿ ಮಾಡಿತ್ತು. ಖಚಿತ ಮಾಹಿತಿ ಮನೆಯಲ್ಲಿದ್ದ ಆರೋಪಿ ಬಂಧಿಸಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಲಕ್ಷ್ಮಣ ನಿಂಬರ್ಗಿ ನಿರ್ದೇಶನದಲ್ಲಿ, ಡಿಎಸ್ಪಿ ಪ್ರವೀಣ್ ಹೆಚ್.ನಾಯ್ಕ್ ಮಾರ್ಗದರ್ಶನದಲ್ಲಿ, ಕಂಡ್ಲೂರು ಗ್ರಾಮಾಂತರ ಠಾಣೆ ಎಸ್ಸೈ ಶ್ರೀಧರ್ ನಾಯ್ಕ್ ನೇತೃತ್ದಲ್ಲಿ ಕಂಡ್ಲೂರು ಠಾಣೆ ಎಎಸ್ಸೈ ರವೀಶ್ ಹೊಳ್ಳಿ ಆರೋಪಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.
Comments are closed.