ಮಂಗಳೂರು : ಆದಾಯ ತೆರಿಗೆ ಇಲಾಖೆ ತ್ವರಿತವಾಗಿ ಕಾರ್ಯಾಚರಣೆ ನಡೆಸಲು 8 ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿರುವ ನೂತನ ಕಚೇರಿಯಾಗಿ ಮಂಗಳೂರಿನಲ್ಲಿ ಕೇಂದ್ರ ವಿಭಾಗದ ಹೆಚ್ಚುವರಿ ಆಯುಕ್ತಾಲಯ ನೆರವಾಗಲಿದೆ ಎಂದು ಕರ್ನಾಟಕ, ಗೋವಾ ರಾಜ್ಯದ ಆದಾಯ ತೆರಿಗೆ ಇಲಾಖೆಯ ವ ಮಹಾ ನಿರ್ದೇಶಕರಾದ ಬಿ.ಆರ್.ಬಾಲಕೃಷ್ಣನ್ ಹೇಳಿದ್ದಾರೆ.
ನಗರದ ಪಾಂಡೇಶ್ವರ ಅಲ್ಭುಕರ್ಕ್ ವಸತಿ ಸಮುಚ್ಛಯದಲ್ಲಿ ನಿರ್ಮಿಸಲಾದ ಆದಾಯ ತೆರಿಗೆ ಹೆಚ್ಚುವರಿ ಆಯುಕ್ತರ ಕೇಂದ್ರೀಯ ವಿಭಾಗದ ನೂತನ ಕಚೇರಿಯನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಸಮಾರಂಭದಲ್ಲಿ ಬೆಂಗಳೂರು ಆಯುಕ್ತಾಲಯದ ಮುಖ್ಯ ಆಯುಕ್ತರಾದ ಅನುಜಾ ಸಾರಂಗಿ, ಮಂಗಳೂರು ಆಯುಕ್ತಾಲಯದ ಮುಖ್ಯ ಆಯುಕ್ತರಾದ ನರೋತ್ತಮ ಮಿಶ್ರಾ, ಬೆಂಗಳೂರು ಆಯುಕ್ತಾಲಯದ ಆಯುಕ್ತರಾದ ಹೇಮಂತ್ ಸಾರಂಗಿ, ಮಂಗಳೂರು ವಿಭಾಗದ ಆಯುಕ್ತರಾದ ಡಾ.ಎಸ್.ಝಾಕಿರ್ ಹುಸೈನ್ ಮೊದಾದವರು ಉಪಸ್ಥಿತರಿದ್ದರು.
ಹೆಚ್ಚುವರಿ ಆಯುಕ್ತರಾದ ಚಂದ್ರ ಕುಮಾರ್ ಸ್ವಾಗತಿಸಿದರು. ಸುದೀಂದ್ರ ವಂದಿಸಿದರು. ನಾಝಿರಾ ಕಾರ್ಯಕ್ರಮ ನಿರೂಪಿಸಿದರು.
Comments are closed.