ಕರಾವಳಿ

ಮಾರ್ಚ್ 24 ರಿಂದ 31 : ಮಂಗಳೂರು ಪುರಭವನದಲ್ಲಿ ತುಳುನಾಟಕ ಪರ್ಬ

Pinterest LinkedIn Tumblr

ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಮಂಗಳೂರು ಮಹಾನಗರ ಪಾಲಿಕೆಯ ಜಂಟಿ ಆಶ್ರಯದಲ್ಲಿ ಮಾರ್ಚ್ 24 ರಿಂದ 31 ಮಂಗಳೂರು ಪುರಭವನದಲ್ಲಿ ತುಳುನಾಟಕ ಪರ್ಬ -2018 ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ ತಿಳಿಸಿದ್ದಾರೆ.

ನಗರದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾರ್ಚ್ 24 ರಂದು ಸಂಜೆ 4 ಗಂಟೆಗೆ ಗಣ್ಯರ ಬಾಗವಹಿಸುವಿಕೆ ಯೊಂದಿಗೆ ತುಳು ನಾಟಕ ಪರ್ಬ -2018 ಉದ್ಘಾಟನೆಗೊಳ್ಳಲಿದೆ.ಸಂಜೆ 6.00 ಗಂಟೆಗೆ ಪ್ರಥಮ ದಿನದ ನಾಟಕ ಪ್ರದರ್ಶನ ಹಾಗೂ ಸಂಸ್ಮರಣೆ ನಡೆಯಲಿದೆ.ನಂತರ ಪ್ರತಿ ದಿನ ಸಂಜೆ 6.00ಗಂಟೆಗೆ ನಾಟಕಕಾರರ ಸಂಸ್ಮರಣೆ ಹಾಗೂ ನಾಟಕ ಪ್ರದರ್ಶನ ನಡೆಯಲಿದೆ.ಮಾರ್ಚ್ 31ರಂದು ಸಂಜೆ 4.00 ಗಂಟೆಗೆಸಮಾರೋಪ ಸಮಾರಂಭ ನಡೆಯಲಿರುವುದು ಎಂದು ತಿಳಿಸಿದ್ದಾರೆ.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ರಿಜಿಸ್ಟರ್ ಚಂದ್ರಹಾಸ ರೈ ಹಾಗೂ ಮತ್ತಿತ್ತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Comments are closed.