ಮಂಗಳೂರು, ಮಾರ್ಚ್.19 : ಕರಾವಳಿಗೆ ಭೇಟಿ ನೀಡಲಿರುವ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ನಾಳೆ ಸುರತ್ಕಲ್ ನಲ್ಲಿ ರೋಡ್ ಶೋ ನಡೆಸಲಿರುವ ಹಿನ್ನೆಲೆಯಲ್ಲಿ ಸೋಮವಾರ ಶಾಸಕ ಮೊಹಿದಿನ್ ಬಾವಾ ಅವರು ಕಾರ್ಯಕ್ರಮ ಹಾಗೂ ಟ್ರಾಫಿಕ್ ವ್ಯವಸ್ಥೆ ಕುರಿತಂತೆ ಪೊಲೀಸರೊಂದಿಗೆ ಚರ್ಚಿಸಿದರು.
ಮಾ.20ರಂದು ರಾಹುಲ್ ಅವರ ರೋಡ್ ಶೋ ಗೆ ಆಗಮಿಸುವಂತೆ ಸಾರ್ವಜನಿಕರೊಂದಿಗೆ ಶಾಸಕ ಮೊಹಿದಿನ್ ಬಾವಾ ಮನವಿ ಮಾಡಿದರು.ಸುರತ್ಕಲ್‌ನಲ್ಲಿ ರಾಹುಲ್ ಆಗಮನಕ್ಕೆ ವಿಶೇಷ ತಯಾರಿ ನಡೆಸಲಾಗಿದ್ದು ಜಂಕ್ಷನ್ ನಲ್ಲಿ ಬೃಹತ್ ಕಟೌಟ್, ಬಂಟಿಂಗ್ಸ್ ಹಾಕಲಾಗಿದೆ.
Comments are closed.