ಕರಾವಳಿ

ಟಿ.ಜೆ. ಅಬ್ರಹಾಂ ಕ್ಷಮೆ ಕೇಳದಿದ್ದರೆ 10 ಕೋಟಿ ರೂ. ಮಾನನಷ್ಟ ದಾವೆ: ಸಚಿವ ಪ್ರಮೋದ್

Pinterest LinkedIn Tumblr

ಉಡುಪಿ: ಬ್ಯಾಂಕಿನಲ್ಲಿ ವಂಚನೆ ಆರೋಪವನ್ನು ಹೋರಿಸಿರುವ ಸಾಮಾಜಿಕ ಕಾರ್ಯಕರ್ತ ಟಿ.ಜೆ ಅಬ್ರಾಹಂ ವಿರುದ್ದ ಹತ್ತು ಕೋಟಿ ರೂಪಾಯಿಗಳ ಮಾನನಷ್ಟ ಮುಖಾದ್ದಮೆಯನ್ನ ಹೂಡಲು ನಿರ್ಧರಿಸಿರುವುದಾಗಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

ನಾನು ಕಷ್ಟ ಪಟ್ಟು ಸಂಪಾದಿಸಿರುವ ಗೌರವವನ್ನು ಹಾಳು ಮಾಡುವ ಕೆಲಸವನ್ನು ಅಬ್ರಾಹಂ ಮಾಡಿದ್ದಾರೆ. ನಾನು ಬ್ಯಾಂಕಿಗೆ ಎಲ್ಲಾ ದಾಖಲೆಗಳನ್ನ ಸಮರ್ಪಕವಾಗಿದ್ದು, ಎಲ್ಲಾ ವ್ಯವಾಹಾರಗಳನ್ನು ಕಾನೂನು ಬದ್ದವಾಗಿ ನಡೆಸುತ್ತಿದ್ದೇನೆ. ಈಗಾಗಲೇ ವಕೀಲರ ಮೂಲಕ ನೋಟಿಸ್ ಕಳುಹಿಸಿದ್ದೇನೆ. ಮೂರು ದಿನಗಳ ಒಳಗೆ ನನ್ನಲ್ಲಿ ಅಬ್ರಾಹಂ ಕ್ಷಮೆಯನ್ನ ಕೇಳಬೇಕು. ಇಲ್ಲವಾದಲ್ಲಿ ಕಾನೂನತ್ಮಕವಾಗಿ 10 ಕೋಟಿಗಳ ಮಾನ ನಷ್ಟ ಮೊಕದ್ದಮೆಯನ್ನ ದಾಖಲಿಸುವುದಾಗಿ ಹೇಳಿದ್ದಾರೆ.

Comments are closed.