ಉಡುಪಿ: ನಗರದ ಬನ್ನಂಜೆ ಬಳಿಯಿರುವ ಗೋ ಗ್ಯಾಸ್ ಬಂಕ್ ಒಂದರಲ್ಲಿ ಗ್ಯಾಸ್ ಫಿಲ್ಲಿಂಗ್ ಸಂದರ್ಭ ಕಡಿಮೆ ಗ್ಯಾಸ್ ತುಂಬಿಸಿ ಗೋಲ್ ಮಾಲ್ ನಡೆಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.
ಗ್ರಾಹಕರಿಂದ ಹಣವನ್ನ ಪಡೆದು ಗ್ಯಾಸ್ ಬದಲು ಗಾಳಿಯನ್ನೇ ಹೆಚ್ಚು ತುಂಬಿಸ್ತಾ ಇದ್ದು ಕಳೆದ ಹಲವಾರು ಸಮಯಗಳಿಂದ ಈ ಬಗ್ಗೆ ಸ್ಥಳೀಯ ಆಟೋಚಾಲಕರಿಗೆ ಸಂಶಯ ಉಂಟಾಗಿತ್ತು. ಹೀಗಾಗಿ ಕೆಲವೊಂದು ಆಟೋ ಚಾಲಕರು ಗ್ಯಾಸ್ ತುಂಬಿದ ಬಳಿಕ ಪರಿಶೀಲನೆ ನಡೆಸಿದ್ರು. ಈ ಸಂಧರ್ಭದಲ್ಲಿ ಗೋ ಗ್ಯಾಸ್ ಬಂಕಿನ ಗೋಲ್ಮಾಲ್ ಬೆಳಕಿಗೆ ಬಂದಿದೆ.
ಇದರಿಂದ ಆಕ್ರೋಷ ಗೊಂಡ ನಗರದ ಆಟೋ ಚಾಲಕರು ಗೋ ಗ್ಯಾಸ್ ಬಂಕಿನ ಮುಂದೆ ಜಮಾಯಿಸಿ ಆಕ್ರೋಷ ವ್ಯಕಪಡಿಸಿದರು.
ಸ್ಥಳಕ್ಕೆ ಜಿಲ್ಲಾ ಮಾಪಕ ತಜ್ನರನ್ನು ಕರೆಸಿ ಪರಿಶೀಲನೆ ನಡೆಸುವಂತೆ ಅಗ್ರಹಿಸಿದರು. ಸ್ಥಳಕ್ಕೆ ಅಗಮಿಸಿದ ಮಾಪಕ ತಜ್ನರು ಪರಿಶೀಲನೆ ನಡೆಸಿದಾಗ ಗ್ಯಾಸ್ ಬಂಕಿನ ಗೋಲ್ ಮಾಲ್ ದೃಡ ಪಟ್ಟಿದೆ. ಗೋಲ್ ಮಾಲ್ ನಡೆಸುತ್ತಿದ್ದ ಗ್ಯಾಸ್ ಪಂಪ್ ಮಾಲಿಕರ ವಿರುದ್ದ ಆಟೋ ಚಾಲಕರು ಪ್ರತಿಭಟನೆ ನಡೆಸಿ ಬೀಗ ಜಡಿಯುವಂತೆ ಅಗ್ರಹಿಸಿದರು.
ಆಟೋ ಚಾಲಕರ ಒತ್ತಡದ ಮೇರೆಗೆ ಗ್ಯಾಸ್ ಬಂಕನ್ನು ಮುಚ್ಚಲಾಗಿದೆ. ಬಂಕ್ ಗೆ ಸಂಭಂಧ ಪಟ್ಟ ಮಾಲೀಕರ ವಿರುದ್ದ ಗ್ರಾಹಕರಿಗೆ ಮೋಸ ಮಾಡಿದ ಆರೋಪದಲ್ಲಿ ಕ್ರಮಕೈಗೊಳ್ಳುವಂತೆ ಆಟೋ ಚಾಲಕರು ಒತ್ತಾಯಿಸಿದ್ದಾರೆ.
Comments are closed.