ಕರಾವಳಿ

ಎಪ್ರಿಲ್, 14 : ಪಿಲಿಕುಳ ಗುತ್ತುಮನೆಯಲ್ಲಿ ಬಿಸು ಪರ್ಬ – ಕೂಪನ್‍ ಪಡೆದವರಿಗೆ ವಿಶೇಷ ಭೋಜನ

Pinterest LinkedIn Tumblr

(ಕಡತ ಚಿತ್ರ)

ಮಂಗಳೂರು ಮಾರ್ಚ್ 29 :ಪಿಲಿಕುಳ ಗುತ್ತುಮನೆಯಲ್ಲಿ ಪ್ರತಿವರ್ಷದಂತೆ ಬಿಸುಪರ್ಬವನ್ನು ಎಪ್ರಿಲ್ 14 ರಂದು ಪೂರ್ವಾಹ್ನ 10 ಗಂಟೆಗೆ ಬಿಸುಕಣಿ ಆಚರಣೆಯ ಜೊತೆ ಜಾನಪದ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆಯೋಜಿಸಲಾಗಿದೆ.

ಮಧ್ಯಾಹ್ನ 1 ಗಂಟೆಗೆ ಬಿಸುಪರ್ಬದ ನಾನಾ ಬಗೆಯ ಖಾದ್ಯಗಳೊಂದಿಗೆ ವಿಶೇಷ ಭೋಜನದ ವ್ಯವಸ್ಥೆಯನ್ನು ಕೂಡಾ ಮಾಡಲಾಗಿದೆ.

ವಿಶೇಷ ಭೋಜನದ ಕೂಪನ್‍ಗಳು ದ.ಕ ಜಿಲ್ಲಾಧಿಕಾರಿಯವರ ಕಛೇರಿಯ 2 ನೇ ಮಹಡಿಯಲ್ಲಿರುವ ನಗರಾಭಿವೃದ್ಧಿಕೋಶ, ಕದ್ರಿ ಮಲ್ಲಿಕಟ್ಟೆಯ ಪರಂಪರಾ ಮತ್ತು ಪಿಲಿಕುಳ ಮುಖ್ಯದ್ವಾರದ ಬಾಕ್ಸ್ ಆಫೀಸಿನಲ್ಲಿ ಲಭ್ಯವಿರುವುದು.

ಈ ವಿಶೇಷ ಭೋಜನದ ಕೂಪನ್‍ಗಳನ್ನು ಪಡೆದವರು ಎಪ್ರಿಲ್ 14 ರಂದು ಪಿಲಿಕುಳದ ಎಲ್ಲಾ ಆಕರ್ಷಣೆಗಳಿಗೆ ಉಚಿತ ಪ್ರವೇಶವನ್ನು ಪಡೆಯಬಹುದು. ಸಾರ್ವಜನಿಕರು ಸಹಕರಿಸಿ ಕಾರ್ಯಕ್ರಮದ ಯಶಸ್ಸಿಗೆ ಪ್ರೋತ್ಸಾಹಿಸಲು ಕಾರ್ಯನಿರ್ವಾಹಕ ನಿರ್ದೇಶಕರ ಪ್ರಕಟಣೆ ತಿಳಿಸಿದೆ.

Comments are closed.